ಸಮಾಜದ ಓರೆ ಕೋರೆಗಳನ್ನು ತಿದ್ದುವ ಕೆಲಸ ಮಾಧ್ಯಮ ವಿದ್ಯಾರ್ಥಿಗಳು ಈಗಿನಿಂದಲೇ ರೂಢಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ರಾಮನಗರ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ. ನಾಗೇಶ್ ನುಡಿದರು.
ನಗರದ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಮಾಧ್ಯಮ ವಿಧ್ಯಾರ್ಥಿಗಳು ಸಿದ್ಧಪಡಿಸಿರುವ ಸಿದ್ಧಾರ್ಥ ಸಂಪದ ಪ್ರಾಯೋಗಿಕ ಪತ್ರಿಕೆಯ ೩೨ನೇ ಸಂಚಿಕೆಯನ್ನು ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಸಭಾಭವನದಲ್ಲಿ ಬಿಡುಗಡೆಗೊಳಿ ಮಾತನಾಡಿದರು.
ವಿದ್ಯಾರ್ಥಿಗಳೇ ಪತ್ರಿಕೆ ತಯಾರಿಸುವುದು ಸಂತೋಷದಾಯಕ ಸಂಗತಿ. ವಿದ್ಯಾರ್ಥಿಗಳು ಉತ್ಸಾಹುಕತೆಯಿಂದ ಪಠ್ಯೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ರಮೇಶ ಮಣ್ಣೆ ಮಾತನಾಡಿ, ಸಿದ್ಧಾರ್ಥ ಸಂಪದ ಚೆನ್ನಾಗಿ ಮೂಡಿಬಂದಿದ್ದಕ್ಕೆ ವಿದ್ಯಾರ್ಥಿಗಳಿಗೆ ಅಭಿನಂದನೆ ತಿಳಿಸಿದರು.
ಕಾರ್ಯಕ್ರಮನ್ನು ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ವಿಜಯಭಾಸ್ಕರ, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಬಿ.ಟಿ. ಮುದ್ದೇಶ್, ಪ್ರಾಧ್ಯಾಪಕರಾದ ಡಾ.ನಾಗೇಂದ್ರ, ಜ್ಯೋತಿ ಸಿ, ಶ್ವೇತಾ ಎಂ.ಪಿ, ಅಕ್ಷತಾ ನಂದಿಕೇಶ್ವರಮಠ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳೇ ಪತ್ರಿಕೆ ತಯಾರಿಸುವುದು ಸಂತೋಷದಾಯಕ ಸಂಗತಿ

Leave a comment
Leave a comment