ಸಲ್ಲಿಸಬೇಕಾದ ದಾಖಲೆಗಳು :-
ಆಧಾರ್ ಸಂಖ್ಯೆ, ಬಿಲ್ಲಿನಲ್ಲಿ ನಮೂದಿಸಲಾಗಿರುವ ಗ್ರಾಹಕರ ಸಂಖ್ಯೆ/ಖಾತೆ ಸಂಖ್ಯೆ, ಬಾಡಿಗೆ/ ಭೋಗ್ಯದ ಕರಾರು ಪತ್ರ(ಬಾಡಿಗೆ/ಭೋಗ್ಯದಾರರಾಗಿದ್ದಲ್ಲಿ) ಸಲ್ಲಿಸುವುದು ಅಥವಾ ಸಂಬAಧಿತ ವಿಳಾಸವನ್ನು ಸೂಚಿಸುವ ವೋಟರ್ ಐಡಿ ಸಲ್ಲಿಸುವುದು. ಈ ಯೋಜನೆಯಡಿ ಯಾವುದೇ ಶುಲ್ಕವನ್ನು ಸೇವಾಸಿಂಧು ಪೋರ್ಟಲ್ನಲ್ಲಿ ಪಾವತಿಸಬೇಕಾಗಿರುವುದಿಲ್ಲ.
ಒಂದಕ್ಕಿAತ ಹೆಚ್ಚು ವಿದ್ಯುತ್ ಮಾಪಕಗಳಿದ್ದರೆ ಪ್ರತಿ ಗ್ರಾಹಕರ ಒಂದು ಮೀಟರ್ಗೆ ಮಾತ್ರ ಯೋಜನೆ ಅನ್ವಯಿಸುತ್ತದೆ.
ಅರ್ಜಿ ಸಲ್ಲಿಸಿದ ನಂತರ ಸೇವಾ ಸಿಂಧುವಿನಿAದ ಗ್ರಾಹಕರ ನೋಂದಾಯಿತ ಇ-ಮೇಲ್ ಅಥವಾ ಮೊಬೈಲ್ಗೆ ಸಂದೇಶವನ್ನು ಕಳುಹಿಸಲ್ಪಡುತ್ತದೆ. ಜುಲೈ-೨೦೨೩ರಲ್ಲಿ ನೀಡಿದ ಬಿಲ್ಲನ್ನು ಯೋಜನೆಯ ಲಾಭ ಇಲ್ಲದೆ ಪಾವತಿಸಬೇಕಾಗುತ್ತದೆ. ಯೋಜನೆಯ ಪ್ರಯೋಜನಗಳು ಮೀಟರ್ ಓದುವ ದಿನಾಂಕದಿAದ ಅಂದರೆ ೧ನೇ ಆಗಸ್ಟ್ ೨೦೨೩ರಂದು ಅಥವಾ ನಂತರ ಅನ್ವಯಿಸುತ್ತದೆ(ಜುಲೈ ೨೦೨೩ರ ಬಳಕೆಗಾಗಿ). ಅಪಾರ್ಟ್ಮೆಂಟ್ ಮಾಲೀಕನಾಗಿದ್ದರೂ ಸಹ ಪ್ರತ್ಯೇಕ ವಿದ್ಯುತ್ ಮೀಟರ್ ಲಭ್ಯವಿದ್ದರೆ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಬಾಡಿಗೆದಾರರಾಗಿದ್ದು, ಬಿಲ್ ಮಾಲೀಕರ ಹೆಸರಿನಲ್ಲಿದ್ದರೆ ಆಧಾರ್ ಸಂಖ್ಯೆ, ಬಿಲ್ಲಿನಲ್ಲಿ ನಮೂದಿಸಲಾಗಿರುವ ಗ್ರಾಹಕರ ಸಂಖ್ಯೆ/ ಖಾತೆ ಸಂಖ್ಯೆ, ಬಾಡಿಗೆ/ ಭೋಗ್ಯದ ಕರಾರು ಪತ್ರ ಸಲ್ಲಿಸಿದಲ್ಲಿ ಅಥವಾ ಸಂಬAಧಿತ ವಿಳಾಸವನ್ನು ಸೂಚಿಸುವ ವೋಟರ್ ಐಡಿ ಸಲ್ಲಿಸಿ ಯೋಜನೆಯ ಲಾಭ ಪಡೆಯಬಹುದಾಗಿದೆ.
ಅಂಗಡಿ ಮಾಲೀಕರಿಗೆ ಈ ಯೋಜನೆಯ ಪ್ರಯೋಜನ ಇರುವುದಿಲ್ಲ. ಇದು ಕೇವಲ ಗೃಹ ಬಳಕೆದಾರರಿಗೆ ಮಾತ್ರ.
೨೦೨೨-೨೩ರ ಸರಾಸರಿ ವಿದ್ಯುತ್ ಬಳಕೆ+ಶೇ.೧೦ರ ಹೆಚ್ಚಳ(೨ ಸೇರಿಸಿದರೆ ಒಟ್ಟು ೨೦೦ ಯೂನಿಟ್ ಒಳಗಿರಬೇಕು) ಸರಾಸರಿ ಬಳಕೆಯ ಆಧಾರದ ಮೇಲೆ ಲಾಭವನ್ನು ಲೆಕ್ಕೀಕರಿಸಲಾಗುತ್ತದೆ.
ಈ ಯೋಜನೆಯನ್ನು ಪಡೆಯಲು ಗ್ರಾಹಕ ಸಂಖ್ಯೆ/ಖಾತೆ ಸಂಖ್ಯೆಯೊAದಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿರುತ್ತದೆ. ಒಂದು ಪಕ್ಷ ಗ್ರಾಹಕರ ಆಧಾರ್ ಕರ್ನಾಟಕದ ಹೊರಗೆ ನೋಂದಾಯಿಸಲ್ಪಟ್ಟಿದ್ದಲ್ಲಿ ಗ್ರಾಹಕರು ಕರ್ನಾಟಕದ ವಿಳಾಸ ಪುರಾವೆಯೊಂದಿಗೆ ಕರ್ನಾಟಕದಲ್ಲಿ ವಾಸಿಸುತ್ತಿದ್ದಲ್ಲಿ ಯೋಜನೆಯ ಲಾಭ ಪಡೆಯಬಹುದಾಗಿರುತ್ತದೆ.
ವಿದ್ಯುತ್ ಬಿಲ್ಲು ಬಾಕಿ ಉಳಿಸಿಕೊಂಡಿದ್ದಲ್ಲಿ ಜೂನ್ ೩೦ರವರೆಗಿನ ವಿದ್ಯುತ್ ಬಾಕಿಯನ್ನು ೩ ತಿಂಗಳೊಳಗಾಗಿ ಪಾವತಿಸಬೇಕಾಗುತ್ತದೆ. ಪಾವತಿಸದಿದ್ದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು.
ವಿದ್ಯುತ್ ಬಿಲ್ಲು ಮನೆಯ ಮೃತ ಮಾಲೀಕರ ಹೆಸರಿನಲ್ಲಿದ್ದರೆ, ವಿದ್ಯುತ್ ಸಂಪರ್ಕವನ್ನು ಮುಂದಿನ ವಾರಸುದಾರರ ಹೆಸರಿಗೆ ವರ್ಗಾಯಿಸಿಕೊಟ್ಟು ತದನಂತರ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಮಾಸಿಕ ವಿದ್ಯುತ್ ಬಳಕೆಯು ೨೦೦ ಯೂನಿಟ್ಗಳಿಗಿಂತಲೂ ಹೆಚ್ಚಿದ್ದರೆ ಆ ನಿರ್ಧಿಷ್ಟ ತಿಂಗಳಿಗೆ ಮಾತ್ರ ಸಂಪೂರ್ಣ ಬಿಲ್ ಮೊತ್ತವನ್ನು ಪಾವತಿಸಬೇಕಾಗುತ್ತದೆ. ವಿದ್ಯುತ್ ಬಳಕೆಯು ಅರ್ಹ ಯೂನಿಟ್ಗಳಿಗಿಂತ ಕಡಿಮೆ ಇದ್ದಲ್ಲಿ “ಶೂನ್ಯ ಬಿಲ್” ಅನ್ನು ಗ್ರಾಹಕರು ಪಡೆಯುತ್ತಾರೆ.
Gruha joythi Scheme

Leave a comment
Leave a comment