ತುಮಕೂರು:ಯುವ ಕಲಾವಿದರು ರಂಗಭೂಮಿಯನ್ನು ಪ್ರಯೋಗಾತ್ಮಕವಾಗಿ ಮುನ್ನೆಡೆಸುವ ಅಗತ್ಯವಿದೆ ಎಂದು ಹಿರಿಯ ಹರಿಕಥಾ ವಿದ್ವಾನ್ ಕಲಾಶ್ರೀ ಡಾ.ಲಕ್ಷö್ಮಣದಾಸ್ ತಿಳಿಸಿದ್ದಾರೆ.ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಯುವ ಕಲಾವಿದ ಶ್ರೀನಿವಾಸಮೂರ್ತಿ ನಿನಾಸಂ ಅವರ ನೇತೃತ್ವದ “ರಂಗಾರoಭ”ಸoಸ್ಥೆಗೆ ಚಾಲನೆ ನೀಡಿ,ರಂಗ ದೀಪಾರತಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ರಂಗಭೂಮಿಯನ್ನು ಮುಂದಿನ ಪೀಳಿಗೆಗೆ ಕೊಂಡ್ಯೋಯುವ ಗುರುತರ ಜಬಾವ್ದಾರಿ ಇಂದಿನ ಯುವ ಕಲಾವಿದರ ಮೇಲಿದೆ.ಇವರು ಮತ್ತಷ್ಟು ಪ್ರಯೋಗಿಕವಾಗಿ ತೊಡಗಿಕೊಂಡರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದರು.ಗಳಿಗೇನಹಳ್ಳಿಯoತಹ ಕುಗ್ರಾಮದಲ್ಲಿ ಹುಟ್ಟಿ,ನೀನಾಸಂನಲ್ಲಿ ರಂಗ ತರಬೇತಿ ಪಡೆದು,ಗಾಡ್
ಫಾದರ್ಗಳಿಲ್ಲದೆ ಈ ರಂಗದಲ್ಲಿಯೇ ಬೆಳೆಯಲು ಮನಸ್ಸು ಮಾಡಿರುವ ಶ್ರೀನಿವಾಸಮೂರ್ತಿ ಅಂತಹ ಯುವಕರ ಅಗತ್ಯ ರಂಗಭೂಮಿಗೆ ಇದೆ. ನಿಸ್ವಾರ್ಥ ಸೇವೆಗೆ ಮಾತ್ರ ರಂಗಭೂಮಿಯಲ್ಲಿ ಉತ್ತುಂಗಕ್ಕೆರಲು ಅವಕಾಶಗಳು ದೊರೆಯುತ್ತವೆ. ಅಂತಹ ಅವಕಾಶಗಳು ರಂಗಾರoಭ ಸಂಸ್ಥೆಗೂ ಲಭಿಸುವಂತಾಗಲಿ ಎಂದು ಶುಭು ಕೋರಿದರು.ರಂಗಶ್ರೀ ಸಂಸ್ಥೆಯ ರಂಗಸ್ವಾಮಿ ಮಾತನಾಡಿ,ರಂಗಭೂಮಿಯಲ್ಲಿ ಹಿರಿಯ ಕಲಾವಿದರು ನೈಪಥ್ಯಕ್ಕೆ ಸರಿಯುತ್ತಿರುವ ಈ ಕಾಲದಲ್ಲಿ ಯುವಕಲಾವಿದರ ಇದನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗಬೇಕಾಗಿದೆ.ಅಂತಹ ಒಂದು ಪ್ರಯತ್ನವೇ ರಂಗಾರoಭ. ನಾಟಕ ಕಲೆಯನ್ನು ಅಭ್ಯಾಸ ಮಾಡಿ, ಅದರ ಎಲ್ಲ ಮಜಲುಗಳನ್ನು ಅರ್ಥ ಮಾಡಿಕೊಂಡು ಹೊಸ ರೀತಿಯ ನಾಟಕಗಳನ್ನು ಕಟ್ಟುವ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಕೆಲಸಕ್ಕೆ ಮುಂದಾಗಿರುವುದು ಒಳ್ಳೆಯ ಬೆಳೆವಣಿಗೆ ಎಂದರು.ಹಿರಿಯ ರಂಗಕರ್ಮಿ ಎಸ್.ಎಲ್.ಎನ್.ಸ್ವಾಮಿ ಮಾತನಾಡಿ,ನಾಟಕ ಎಂದರೆ ಸುಳ್ಳು ಹೇಳುವುದು ಎಂದರ್ಥ.ಇಲ್ಲಿ ವ್ಯಕ್ತಿಗಳು ಪಾತ್ರಧಾರಿಗಳಾಗಿ ಅಭಿನಯಿಸುವ ಮೂಲಕ ಈಗ ನಮ್ಮ ಮುಂದಿಲ್ಲದ ರಾಮ,ರಾವಣ,ಶ್ರೀಕೃಷ್ಣ, ಅರ್ಜುನ, ದುರ್ಯೋದನ, ಸೀತೆ, ಕೈಕೆ, ಮಂಡೋದರಿಯನ್ನು ಪ್ರೇಕ್ಷಕರ ಮುಂದಿಡುತ್ತಾರೆ.ನಾಟಕವೆoಬದು ಐದನೇ ವೇದವಾಗಿದ್ದು, ಶ್ರಮ ಜೀವಗಳಿಗೆ ದೇವರಿಂದ ದೊರೆತ ಆಮೋಘ ಕೊಡುಗೆಯಾಗಿದೆ.ಈ ನಿಟ್ಟಿನಲ್ಲಿ ಗಳಿಗೇನಹಳ್ಳಿ ಶ್ರೀನಿವಾಸಮೂರ್ತಿ ಅವರ ನಿರ್ಧಾರ ಬಹಳ ಸುತ್ಯಾರ್ಹ.ಅವರ ಎಲ್ಲಾ ಪ್ರಯತ್ನಗಳು ಕೈಗೂಡಲಿ, ಮುಂದಿನ ದಿನಗಳಲ್ಲಿ ಅವರಿಗಾಗಿಯೇ ಏಕ ವ್ಯಕ್ತಿ ನಾಟಕವೊಂದರ ಪ್ರಯೋಗವನ್ನು ಶೀಘ್ರದಲ್ಲಿಯೇ ಇದೇ ರಂಗಮoದಿರದಲ್ಲಿ ಪ್ರಯೋಗಿಸಲಾಗುವುದು ಎಂದರು.ಇದೇ ವೇಳೆ ಕನ್ನಡ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ರಂಗಭೂಮಿ ಕಲಾವಿದರನ್ನು ಅಭಿನಂದಿಸಲಾಯಿತು.ವೇದಿಕೆಯಲ್ಲಿ ಹಿರಿಯ ರಂಗಭೂಮಿ ಕಲಾವಿದರಾದ ವೈ.ಎನ್.ಶಿವಣ್ಣ,ಎಂ.ವಿ.ನಾಗಣ್ಣ,ಯೋಗಾನoದ ಕುಮಾರ್,ಜಕ್ಕೇನಹಳ್ಳಿ ಎಸ್.ರಾಜಣ್ಣ, ಚಿದಾನಂದಮೂರ್ತಿ,ಹಿರಿಯ ಕಲಾವಿದರಾದ ಭಾಗ್ಯಮ್ಮ,ಆಶಾರಾಣಿ, ಹೆಚ್.ಎಸ್.ಪರಮೇಶ್, ಶ್ರೀನಿವಾಸಮೂರ್ತಿ ನೀನಾಸಂ ಮತ್ತಿತರರು ಉಪಸ್ಥಿತರಿದ್ದರು.