ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶ್ರೀ ಸಪ್ತಗಿರಿ ಪದವಿ ಪೂರ್ವ ಕಾಲೇಜಿನಲ್ಲಿ ಆರೋಗ್ಯ ಭಾರತಿ, ತುಮಕೂರು. ಇವರ ಸಹಯೋಗದೊಂದಿಗೆ ಅಂತರಾಷ್ಟಿçÃಯ ಯೋಗದಿನವನ್ನು ಆಚರಿಸಲಾಯಿತು. ಕಾಲೇಜಿನಲ್ಲಿ ಯೋಗದಿನದ ಸಾರ್ಥಕತೆ ಮತ್ತು ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಸಲುವಾಗಿ ಪ್ರತಿದಿನ ಮುಂಜಾನೆ ವಿದ್ಯಾರ್ಥಿಗಳಿಗೆ ಯೋಗಾಸನಗಳ ತರಬೇತಿಯನ್ನು ನಿರಂತರವಾಗಿ ನೀಡಲಾಯಿತು. ಯೋಗದಿಂದ ಆರೋಗ್ಯಯುತ ದೇಹವನ್ನು ಹೊಂದಬಹುದು, ಸದೃಢ ದೇಹ ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಹಾಗಾಗಿ ಯೋಗದಿಂದ ನಿಮ್ಮ ಆರೋಗ್ಯ ಮತ್ತು ವಿದ್ಯಾಭ್ಯಾಸ ವೃದ್ಧಿಸುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್. ಎಸ್. ನಿರಂಜನಾರಾಧ್ಯ ರವರು ತಿಳಿಸಿದರು. ನ್ಯಾಚುರೋಪತಿ ಮತ್ತು ಯೋಗಚಿಕಿತ್ಸಕರಾದ ಡಾ.ಎಂ. ನೀತಾಲವ ರವರು ವಿದ್ಯಾರ್ಥಿಗಳಿಂದ ಯೋಗಾಸನಗಳ ಪ್ರದರ್ಶನ ನಡೆಸಿದರು.
ಈ ಕಾರ್ಯಕ್ರಮದಲ್ಲಿ ವಿಶೇಷÀ ಉಪನ್ಯಾಸ ನೀಡಿದÀ ಅಶ್ವಿನಿ ಆಯುರ್ವೇದ ಆಸ್ಪತ್ರೆ ಉಪನ್ಯಾಸಕರಾದ ಡಾ. ಬಾಳೇಶ್ ರವರು ಯೋಗದ ಮಹತ್ವವನ್ನು ತಿಳಿಸುತ್ತಾ ಯೋಗವೆಂದರೆ ಕೇವಲ ಆಸನಗಳಲ್ಲ, ಚಂಚಲ ಮನಸ್ಸನ್ನು ನಿಗ್ರಹಿಸಿ, ಕರ್ಮಯೋಗ, ಜ್ಞಾನಯೋಗ, ಭಕ್ತಿಯೋಗ, ಧ್ಯಾನಯೋಗಗಳನ್ನು ಸಾಧಿಸುವುದರ ಮೂಲಕ ಅಷ್ಠಾಂಗಗಳಾದ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಇವುಗಳೇ ನಿಜವಾದ ಯೋಗ ಎಂಬ ಅರಿವನ್ನು ವಿದ್ಯಾರ್ಥಿಗಳಿಗೆ ಮೂಡಿಸಿದರು.
ಕಾರ್ಯಕ್ರಮವನ್ನು ಆಯೋಜಿಸಿದ್ದ ಸಂಸ್ಕೃತ ಉಪನ್ಯಾಸಕರಾದ ಶ್ರೀ ಹನುಮಂತರಾಯಪ್ಪನವರು ಗಣ್ಯರನ್ನು ಪರಿಚಯಿಸಿದರು, ಕುಮಾರಿ ಅನಘ ಪ್ರಾರ್ಥಿಸಿದರು, ಕುಮಾರಿ ಸುಷ್ಮ ಸ್ವಾಗತಿಸಿ, ವಿದ್ಯಾರ್ಥಿ ವಿನಾಯಕ್ ಪತ್ತಾರ್ ವಂದಿಸಿದರು, ಕನ್ನಡ ಭಾಷಾ ಉಪನ್ಯಾಸಕರಾದ ಪ್ರಕಾಶ್ ಹೆಚ್. ಎಂ. ಕಾರ್ಯಕ್ರಮ ನಿರೂಪಿಸಿದರು, ಈ ಸಂದರ್ಭದಲ್ಲಿ ಡಾ. ರಾಜೇಶ್ವರಿ ಹಾಗೂ ಕಾಲೇಜಿನ ಆಡಳಿತ ಮಂಡಳಿಯವರು, ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.
ಯೋಗಯುಕ್ತ ಸಾಧನ ರೋಗಮುಕ್ತ ಜೀವನ
Leave a comment
Leave a comment