ಕೂಡಲಸಂಗಮವಾದರೆ ಅದುವೇ ಯೋಗ.
ಮೈ, ಮನಸ್ಸುಗಳ ಒಟ್ಟೆöÊಸುವಿಕೆಯೇ ಯೋಗ.
ಮನಸೊಂದು ಕಡೆ, ಮೈಯೊಂದು ಕಡೆಯಾದರೆ ಅದು ಮನೆಯೊಂದು ಮೂರು ಬಾಗಿಲಿನಂತೆ ಆಗುತ್ತದೆ.
ಯೋಗ ಮಾಡುವುದಕ್ಕೆ ಎರಡೇ ಎರಡು ಸಾಮಗ್ರಿಗಳು ಬೇಕು. ಒಂದು, ಮೈ; ಇನ್ನೊಂದು ಮನಸ್ಸು.
ಯೋಗ ಮಾಡುವುದಕ್ಕೆ ಮೈ, ಮನಸ್ಸುಗಳೇ ಉಪಕರಣ ಮತ್ತು ಅವೇ ಸಾಧನಾಸಾಮಗ್ರಿ.
ಮೈ, ಮನಸ್ಸುಗಳ ಅನ್ಯೋನ್ಯ ದಾಂಪತ್ಯವೇ ಯೋಗ.
ಮನಸ್ಸು ಎಲ್ಲಿಯೇ ಹೋಗಿ ಬರಲಿ, ಎಷ್ಟೊತ್ತಾದರೂ ಸರಿ ಅದು ದೇಹದ ಬಳಿ ಬರಲೇಬೇಕು.
ದೇಹವೇ ಮನಸ್ಸಿನ ತವರುಮನೆ ಮತ್ತು ದೇಹವೇ ಅದರ ತಂಗುದಾಣ.
ದೇಹವೇ ಇಲ್ಲದೆ ಹೋದರೆ ಮನಸ್ಸಿಗೆ ನೆಲೆಯೇ ಇಲ್ಲ. ಅದು ಅನಾಥವಾಗುತ್ತದೆ.
ಮನಸ್ಸು ಸುಂದರಕಾAಡವಾದರೂ ಸರಿ, ಅದು ಕಿಷ್ಕಿಂಧಾಕಾAಡವಾದರೂ ಸರಿ,
ಮನಸ್ಸು ಯುದ್ಧಕಾಂಡವಾದರೂ ಸರಿ, ಅದು ಅರಣ್ಯಕಾಂಡವಾದರೂ ಸರಿ,
ದೇಹ ಅದನ್ನು ಸಹಿಸಿಕೊಳ್ಳಲೇಬೇಕು ಮತ್ತು ದೇಹ ಅದನ್ನು ಭರಿಸಲೇಬೇಕು.
ಅನ್ನದಂತೆ ಮನಸ್ಸು; ಮನಸ್ಸಿನಂತೆ ಮಹಾದೇವ. ನಮ್ಮ ಮನಸ್ಸನ್ನು ತಯ್ಯಾರುಮಾಡುವುದೇ ಅನ್ನ.
ಅನ್ನದಂತೆ ಗುಣ. ಗುಣದಂತೆ ಗೌರವ. ನಾವು ಸಾತ್ತಿ÷್ವಕ ಅನ್ನ, ಆಹಾರವನ್ನು ಸೇವಿಸಿದರೆ ನಮ್ಮ ಮನಸ್ಸು ಸಾತ್ತಿ÷್ವಕವಾಗುತ್ತದೆ ಮತ್ತು ಸತ್ತ÷್ವಗುಣಭರಿತವಾಗುತ್ತದೆ.
ನಾವು ರಾಜಸಿಕ ಅನ್ನ, ಆಹಾರವನ್ನು ಸೇವಿಸಿದರೆ ನಮ್ಮ ಮನಸ್ಸು ರಾಜಸಿಕವಾಗುತ್ತದೆ ಮತ್ತು ರಜೋಗುಣಭರಿತವಾಗುತ್ತದೆ.
ನಾವು ತಾಮಸಿಕ ಅನ್ನ, ಆಹಾರವನ್ನು ಸೇವಿಸಿದರೆ ನಮ್ಮ ಮನಸ್ಸು ತಾಮಸಿಕವಾಗುತ್ತದೆ ಮತ್ತು ತಮೋಗುಣಭರಿತವಾಗುತ್ತದೆ.
ಸ್ವರ್ಗ ಕಾಣುವುದಿಲ್ಲ. ನಿಸರ್ಗ ಕಾಣುತ್ತದೆ. ಆದ್ದರಿಂದ ಕಾಣದ ಸ್ವರ್ಗಕ್ಕಿಂತ ಕಣ್ಣೆದುರಿಗಿನ ನಿಸರ್ಗವೇ ಸ್ವರ್ಗವೆಂದು ಒಪ್ಪಿಕೊಂಡು ನಿಸರ್ಗವನ್ನು ಆನಂದಿಸೋಣ.
ನಮ್ಮೊಂದು ಅಂದಾಜಿನ ಪ್ರಕಾರ, ಸ್ವರ್ಗಕ್ಕಿಂತ ನಿಸರ್ಗವೇ ಹೆಚ್ಚು ಸುಂದರ.
ಸ್ವರ್ಗಕ್ಕೆ ಹೋಗಬೇಕು, ಸ್ವರ್ಗವನ್ನು ಕಾಣಬೇಕು ಎಂದರೆ ಸಾಯಬೇಕಾಗುತ್ತದೆ.
ನಿಸರ್ಗವನ್ನು ನೋಡಬೇಕೆಂದರೆ ಸಾಯಬೇಕಿಲ್ಲ. ನಾವು ಜೀವಂತವಿರುವಾಗಲೇ ನಿಸರ್ಗವನ್ನು ಕಣ್ತುಂಬ ನೋಡಬಹುದು. ಕಾಣದ ಸ್ವರ್ಗಕ್ಕಿಂತ ಕಾಣುವ ನಿಸರ್ಗಕ್ಕೆ ಸ್ವರ್ಗದ ಪಟ್ಟ ಕಟ್ಟುವುದು ೧೦೦ಕ್ಕೆ ನೂರು ಪಾಲು ಮೇಲು ಮತ್ತು ಮಿಗಿಲು.
ಇವತ್ತು ನಾವೆಲ್ಲ ಸೇರಿ ಭಾರತ ಮಾತಾ ಕೀ ಜೈ ಎಂದು ಹೇಳುವುದರ ಜೊತೆ ಜೊತೆಯಲ್ಲಿ
ಯೋಗ ಮಾತಾ ಕೀ ಜೈ ಎಂದು ಹೇಳುವಾ.
ಹಾಗೆಯೇ ನಿಸರ್ಗ ಮಾತೆಗೆ ಮತ್ತು ವೃಕ್ಷದೇವತೆಗಳಿಗೆ ಕೂಡ “ಜೈ, ಜಯತು ಹೇಳುವಾ.
ಇಂದು ತಪೋವನದಲ್ಲಿ ನಡೆದ ವಿಶ್ವಯೋಗ ಮತ್ತು ವಿಶ್ವಪರಿಸರ ದಿನಾಚರಣೆಯ ಸಾನಿಧ್ಯವನ್ನು ವಹಿಸಿಕೊಂಡು
ತುಮಕೂರು ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು ಈ ಮೇಲಿನ ಮಾತುಗಳನ್ನು ಹೇಳಿದರು.