ತುಮಕೂರು: ಯಾವುದೇ ದೈಹಿಕ ನೋವು ಇಲ್ಲದೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಇಚ್ಚೆಪಡುವ ರೋಗಿಗಳ ಆರೋಗ್ಯ ರಕ್ಷಣೆಯಲ್ಲಿ ಅರವಳಿಕೆ ಚಿಕಿತ್ಸಾ ಒಂದು ಮೈಲಿಗಲ್ಲನ್ನು ಸಾಧಿಸಿದೆ. ವಿಶ್ವದ ಮನುಕುಲದ ನೋವಿನ ನಿವಾರಣೆಗಾಗಿ ಹುಟ್ಟಿದ ಅರಿವಳಿಕೆ(ಅನಸ್ತೇಶಿಯಾ) ಚಿಕಿತ್ಸೆ ವಿಧಾನ ವೈದ್ಯ ವಿಭಾಗದಲ್ಲಿ ವಿಸ್ಮಯ ಸೃಷ್ಠಿಸುತ್ತಿದೆ ಎಂದು ಸಾಹೇ ವಿವಿ ಉಪಕುಲಪತಿಗಳಾದ ಡಾ.ಬಿ.ಕೆ.ಲಿಂಗೇಗೌಡ ಅವರು ಅಭಿಪ್ರಾಯಪಟ್ಟರು.
ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅರವಳಿಕೆ ವಿಭಾಗದದಲ್ಲಿ ಇಂದು (ಬುಧುವಾರ) ಎರ್ಪಡಿಸಲಾಗಿದ್ದ 178ನೇ ವಿಶ್ವ ಅರವಳಿಕೆ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಾತನಾಡಿದರು.
ಹೆರಿಗೆ, ಎದೆಭಾಗದ ಶಸ್ತ್ರಚಿಕಿತ್ಸೆಗಳು, ಶ್ವಾಸಕೋಶ, ಮೂಳೆ ಮುರಿತ, ಕಣ್ಣುಗಳು, ಗರ್ಭಕೋಶ ಮತ್ತಿತರ ಅಂಗಗಳ ಮೇಲಿನ ಶಸ್ತ್ರಚಿಕಿತ್ಸೆಯು ನೋವಿಲ್ಲದೆ ನಡೆಯುತ್ತಿದೆ. ಅರಿವಳಿಕೆ ತಜ್ಞ ವೈದ್ಯರು ಕೇವಲ ಅರಿವಳಿಕೆ ಶಾಸ್ತ್ರವಲ್ಲದೇ ತುರ್ತುಚಿಕಿತ್ಸೆ, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ, ಕೃತಕ ಉಸಿರಾಟ ತರಬೇತಿ, ಬೇಸಿಕ್ ಲೈಫ್ ಸಪೋರ್ಟ್ ಹಾಗೂ ಅಡ್ವಾನ್ಸ್ಡ್ ಕಾರ್ಡಿಯಾಕ್ ಲೈಫ್ ಸಪೋರ್ಟ್ಗಳ ತರಬೇತಿ ನೀಡುತ್ತಿದ್ದಾರೆ. ವೈದ್ಯಕೀಯ ಇತಿಹಾಸದಲ್ಲಿ ಅತ್ಯಂತ ಮಹತ್ವದ ಪ್ರಗತಿಯನ್ನು ಗುರುತಿಸಲು ರೋಗಿಗಳ ಆರೋಗ್ಯ ರಕ್ಷಣೆಯಲ್ಲಿ ಅವರು ವಹಿಸುವ ಪಾತ್ರವನ್ನು ಸ್ಮರಿಸುವ ದಿನವನ್ನು ವಿಶ್ವ ಅರಿವಳಿಕೆ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಸಿದ್ದಾರ್ಥ ವೈದ್ಯಕೀಯ ಕಾಲೇಜಿನಲ್ಲಿ ವಿಶ್ವ ಅರವಳಿಕೆ ದಿನಾಚರಣೆ

Leave a comment
Leave a comment


