ಸಂವಿಧಾನ ಉಳಿವಿಗಾಗಿ ಮತ ಚಲಾಯಿಸಿ
ಸರ್ವಜನಾಂಗದ ಶಾಂತಿಯ ತೋಟ ಸಂರಕ್ಷಿಸಿಕೊಳ್ಳಲು ಪ್ರಗತಿಪರ ಸಂಘಟನೆಗಳ ಒಕ್ಕೂಟ ಕರೆ.
ಇಂದು ನಗರದ ಜನಚಳುವಳಿ ಕೇಂದ್ರದಲ್ಲಿ ಜಾಗೃತಿ ನಾಗರೀಕರು-ಕನರ್ಾಟಕ ಮತ್ತು ತುಮಕೂರು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಸಂವಿಧಾನ ರಕ್ಷಿಸಿ- ಪ್ರಜಾಪ್ರಭುತ್ವ ಉಳಿಸಿ ಜಾಗೃತಿ ಆಂದೋಲನ ಕುರಿತು ಸಮಾಲೋಚನ ಸಭೆ ನಡೆಯಿತು.
ಆಂದೋಲನದ ಮುಖ್ಯ ರುವಾರಿಗಳು ಮತ್ತು ಮಾಜಿ ಸಚಿವೆ ಬಿ.ಟಿ ಲಲಿತಾನಾಯಕ್ ಸಮಾಲೋಚನ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತದಲ್ಲಿ 18ನೇ ಲೋಕಸಭಾ ಚುನಾವಣೆ ನಡೆಯಲಿದ್ದು ದೇಶದಲ್ಲಿ ಬಹುತ್ವವನ್ನು ಉಳಿಸಿ ಬೆಳೆಸುವ ಮತ್ತು ಸಂವಿಧಾನವನ್ನು ರಕ್ಷಿಸುವ ನೆಲೆಯಲ್ಲಿ ರಾಜ್ಯದ ಜನರು ಮತ ಚಲಾಯಿಸಬೇಕು ಮತದಾರರು ಯಾವುದೇ ಅಮಿಷಗಳಿಗೆ ಒಳಗಾಗದಂತೆ ದೇಶದ ಸಾಮರಸ್ಯ ಪರಂಪರೆಯ ಪರವಾಗಿ ನಿಲ್ಲಬೇಕು ಚುನವಾಣೆ ನಡೆಯಬೇಕು ಮತ್ತು ಸಂವಿಧಾನದ ಆಶಯಗಳಿಗೆ ಯಾವುದೇ ದಕ್ಕೆ ಆಗಬಾರದು ಎಂದು ಏಪ್ರಿಲ್ 1 ರಿಂದ 8 ರವರೆಗೆ ರಾಜ್ಯವ್ಯಾಪಿ ಸಂಕಲ್ಪ ಯಾತ್ರೆಯನ್ನು ಬೆಂಗಳೂರಿನಿಂದ ಬೆಳಗಾವಿ ವರೆಗೆ ಹಮ್ಮಿಕೊಂಡು ಮತಜಾಗೃತಿ ಅಭಿಯಾನ ಪ್ರಾರಂಭಿಸಲಾಗಿದೆ. ತುಮಕೂರಿನ ಜೀವಪರ ಮತ್ತು ಸಂವಿಧಾನ ಪ್ರಿಯರೆ ಈ ಜಾಗೃತಿ ಅಭಿಯಾನಕ್ಕೆ ಕೈಜೊಡಿಸಬೇಕೆಂದರು.
ನಂತರ ಪ್ರಗತಿಪರ ಚಿಂತಕರಾದ ಸಿ.ಯತಿರಾಜ್ ಮತ್ತು ಪ್ರೊ. ಕೆ ದೊರೈರಾಜ್ ಮಾತನಾಡಿ ದೇಶಲ್ಲಿ ಜನಾಂಗೀಯ ದ್ವೇಷ ಮತ್ತು ಪ್ರಜಾಪ್ರಭುತ್ವವನ್ನು ಆಳುವ ಯಾವುದೇ ಪಕ್ಷಗಳು ಉಳಿದಿಲ್ಲ, ದೇಶದಲ್ಲಿ ಶಾಂತಿ, ಸೌಹಾರ್ಧತೆಯನ್ನು ಭಯಸುವ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಟ್ಟಿಗೊಳಿಸುವ ಮನಸ್ಸುಗಳು ಸಂವಿಧಾನದ ಉಳಿವಿಗಾಗಿ ರೈತರ ಉಳಿವಿಗಾಗಿ ಮತ್ತು ಭವಿಷ್ಯದಲ್ಲಿ ನೆಮ್ಮದಿಯ ಬದುಕಿಗಾಗಿ ಉತ್ತಮರನ್ನು ಆಯ್ಕೆ ಮಾಡಿ ಎಚ್ಚರವಹಿಸಿ ಮತ ಚಲಾಯಿಸಿ ಎಂದರು.
ಸಭೆಯಲ್ಲಿ ಸಂವಿಧಾನ ರಕ್ಷಿಸಿ- ಪ್ರಜಾಪ್ರಭುತ್ವ ಉಳಿಸಿ ಜಾಗೃತಿ ನಾಗರೀಕರು ಮುಖಂಡರುಗಳಾದ ಡಾ.ಕೆ.ಮರುಳಸಿದ್ದಪ್ಪ, ಹಾಗೂ ರೈತಮುಖಂಡರು, ತುಮಕೂರು ಪ್ರಗತಿಪರ ಸಂಘಟನೆಗಳ ಒಕ್ಕೂಟ ಪದಾಧಿಕಾರಿಗಳಾದ ಸೈಯದ್ಮುಜೀಬ್, ತಾಜುದ್ದೀನ್ ಶರೀಫ್, ಮುರುಗೇಶ್ ಫ್ರಾಂಕ್ಲಿನ್ ಕೃಷ್ಣಮೂರ್ತಿ , ಅರುಣ್, ವಿವಿಧ ಸಂಘನೆಗಳ ಮುಖಂಡರು ಪಾಲ್ಗೊಂಡಿದ್ದರು.