ಮಲಗಿದ್ದ ಭಾರತವನ್ನು ಬಡಿದೆಬ್ಬಿಸಲು, ವಿವೇಕ-ವಿವೇಚನೆಯನ್ನು ಕಲಿಸಲು, ತ್ಯಾಗದ ಮೌಲ್ಯವನ್ನು ಎತ್ತಿ ತೋರಿಸಲು, ಯುವಶಕ್ತಿಯನ್ನು ಪ್ರಯತ್ನಶೀಲರನ್ನಾಗಿಸಲು ವಿವೇಕಾನಂದರು ಪ್ರೇರೇಪಿಸಿದರು ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಪೀಠ ಶುಕ್ರವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ೧೬೧ನೇ ಜನ್ಮ ದಿನಾಚರಣೆ ಹಾಗೂ ರಾಷ್ಟಿçÃಯ ಯುವದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಶಕ್ತಿ ತಮ್ಮ ಆಲೋಚನೆಗಳನ್ನು ಸಕಾರಾತ್ಮಕವಾಗಿ, ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳುವ ಛಲವಿರಬೇಕು. ಯುವಕರಿಗೆ ವರವೆಂದರೆ ಬೇಗನೆ ವಿಷಯಗಳನ್ನು ಅರ್ಥಮಾಡಿಕೊಳ್ಳುವ ಶಕ್ತಿ. ಶಾಪವೆಂದರೆ ಒಳ್ಳೆಯ ವಿಚಾರಗಳಿಗೆ ಕಿವಿಮುಚ್ಚಿ ಕೂರುವುದು. ಯುವಕರು ಭವಿಷ್ಯ ಭಾರತದ ಮಾನವ ಸಂಪನ್ಮೂಲವಾಗಬೇಕು. ಜೀವನಾನುಭವಗಳನ್ನು ಪುಸ್ತಕದಲ್ಲಿ ಬರೆದಿಟ್ಟಾಗ ನಿಮ್ಮ ಬದುಕಿಗೆ ನೀವೇ ಸ್ಫೂರ್ತಿಯಾಗುತ್ತೀರಿ ಎಂದರು.
ಹಸಿದವನಿಗೆ ಮೀನು ಕೊಡುವ ಬದಲು ಮೀನು ಹಿಡಿಯುವ ನೈತಿಕ ಶಕ್ತಿಯನ್ನು, ಮೌಲ್ಯವನ್ನು ಕಲಿಸಿದಾಗ ಮಾನವ ಮಿತ್ರರಾಗಬಹುದು. ವಿವೇಕಾನಂದರು ಹೇಳುವ ಹಾಗೆ, ‘ಆತ್ಮಶಕ್ತಿ, ಆತ್ಮವಿಶ್ವಾಸ, ಆತ್ಮಗೌರವ, ಸ್ವಾಭಿಮಾನ, ಸ್ವಾವಲಂಬನೆ, ವ್ಯಕ್ತಿತ್ವಶಕ್ತಿಯನ್ನು ಬೆಳೆಸಿಕೊಂಡ ಯುವಕ ಯಾವ ದುಷ್ಟ ಶಕ್ತಿಗೂ ಎದೆಗುಂದಲಾರ’. ವಿವೇಕಾನಂದರು ಕೊಟ್ಟ ರಾಷ್ಟಿçÃಯತೆಯು ಉತ್ಕೃಷ್ಟವಾದ ಅಂತಾರಾಷ್ಟಿçÃಯತೆಯಾಯಿತು ಎಂದು ತಿಳಿಸಿದರು.
ವಿವಿ ಕುಲಸಚಿವೆ ನಾಹಿದಾ ಜûಮ್ ಜûಮ್ ಮಾತನಾಡಿ, ತನ್ನನ್ನು ತಾನು ದುರ್ಬಲ ಎಂದುಕೊಳ್ಳಬಾರದು. ಸೋಲಿಗೆ ಅಂಜಬಾರದು. ಯುವಶಕ್ತಿಯ ನಡೆ ಆದರ್ಶಗಳ ಕಡೆಗಿರಬೇಕು. ಏಕಾಗ್ರತೆಯೊಂದಿದ್ದರೆ ಮಾಡುವ ಕಾರ್ಯದಲ್ಲಿ ಯಶಸ್ಸು ನಮ್ಮದಾಗುತ್ತದೆ. ಸಿಂಹದAತ ಗಾಂಭೀರ್ಯವಿರಬೇಕು. ಗುರಿ ಮುಟ್ಟುವ ಹಸಿವಿರಬೇಕು. ಶಕ್ತಿಯೇ ಬದುಕು, ದುರ್ಬಲತೆಯೇ ಸಾವು ಎಂದು ಹೇಳಿದರು.
ವಿವೇಕಾನಂದರು ಯುವಶಕ್ತಿಗೆ ಶಾಶ್ವತ ಪ್ರೇರಣೆ
Leave a comment
Leave a comment