ಅಫಜಲಪೂರ ತಾಲೂಕಿನ ಕೇಕ್ಕರಸಾವಳಗಿ ಗ್ರಾಮದ ಶ್ರೀ ವೀರಭದ್ರೇಶ್ವರರ ಅಗ್ನಿ ಸ್ಪರ್ಶ ಹಾಗೂ ಸಂಗಮೇಶ್ವರರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು.. ಬೆಳಿಗ್ಗೆ 6-00 ಗಂಟೆಗೆ ಶ್ರೀ ವೀರ ಭದ್ರೇಶ್ವರ ಹಾಗೂ ಶ್ರೀ ಸಂಗಮೇಶ್ವರರ ಅಡ್ಡ ಪಲ್ಲಕ್ಕಿ, ಹಾಗೂ ಪಂಚ ಕಳಸದೊಂದಿಗೆ ಪಟ್ಟದ ಪುರವಂತರಾದ ಶ್ರೀ ಮೌನೇಶ್ ಸೂತಾರ ಅವರಿಂದ ವೀರಭದ್ರೇಶ್ವರ ಅಗ್ನಿ ಪ್ರವೇಶದ ,ನಂತರ ಸಕಲ ವಾದ್ಯ ಮೇಳದೊಂದಿಗೆ ಪಲ್ಲಕ್ಕಿಯು ಪುರ ಪ್ರವೇಶ ಮಾಡಿತು. ಗ್ರಾಮದ ಮತ್ತು ಸುತ್ತಮುತ್ತಲಿನ ಎಲ್ಲ ಸಕಲ ಭಕ್ತ ವೃಂದ ಶ್ರೀ ವೀರಭದ್ರೆಶ್ವರ ಹಾಗೂ ಸಂಗಮೇಶ್ವರರ ಜಾತ್ರಾ
ಮಹೋತ್ಸವದಲ್ಲಿ ಪಾಲ್ಗೊಂಡಿದ್ದು ಜಾತ್ರೆಗೆ ಇನ್ನಷ್ಟು ಮೆರಗು ನೀಡಿತು .ಈ ಸಂದರ್ಭದಲ್ಲಿ ಶ್ರೀಮಂತ ಬೋಳಶೆಟ್ಟಿ.ಲಕ್ಷ್ಮಣ ಪಾಟೀಲ. ಮಲ್ಕಣ್ಣ ಯಂಕಂಚಿ.. ಮುತ್ತಪ್ಪ ಇಟಗಿ.. ಅಶೋಕ ಮಾಲಿಪಾಟೀಲಯಲ್ಲಾಲಿಂಗ ಕುಂಬಾರಸೋಮರಾಯ ಯಂಕಂಚಿ. ಕಲ್ಯಾಣಿ ಯಂಕಂಚಿ.. ಸಿದ್ದಾರಾಮ ಮಾಹುರ, ಮೌನೇಶ್ ಸೂತಾರ, ರಮೇಶ ಬೋಳಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.