ಇಂದು ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಹಾಗೂ ನಗರ ನಿವೇಶನ ವಂಚಿತ ಹೋರಾಟ ಸಮಿತಿಯಿಂದ ಸ್ಲಂ ಜನರ ಕುಂದು ಕೊರತೆ ಸಭೆ ಕರೆಯಲು ಒತ್ತಾಯಿಸಿ ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ಅಶ್ವಿಜ ರವರಿಗೆ ಮನವಿ ಸಲ್ಲಿಸಲಾಯಿತು.
ಜುಲೈ ಮೊದಲನೇ ವಾರದಲ್ಲಿ ಸ್ಲಂ ಜನರ ಕುಂದು ಕೊರತೆ ಸಭೆ ಕರೆಯಲು ಕ್ರಮ- ಹೊಂದಿಸಿದ ಆಯುಕ್ತರು
ಮನವಿಗೆ ಸ್ಪಂಧಿಸಿ ಮಹಾನಗರ ಪಾಲಿಕೆ ಆಯುಕ್ತರಾದ ಬಿ.ವಿ ಅಶ್ವಿಜ ಮಾತನಾಡಿ ಸ್ಲಂ ಜನರ ಹಾಗೂ ನಿವೇಶನ ವಂಚಿತ ಕುಟುಂಬಗಳಿಗೆ ವಸತಿ ಸೌಲಭ್ಯ ಒದಗಿಸಲು ಈಗಾಗಲೇ ಸರ್ಕಾರಿ ಭೂಮಿಯನ್ನು ಗುರುತಿಸಿ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಸ್ಲಂ ಬೋರ್ಡ್ಗೆ ಹಸ್ತಾಂತರಿಸಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ವಸತಿ ವಂಚಿತ ನೈಜ ಪಲಾನುಭವಿಗಳ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಮತ್ತು ನಗರ ಸ್ಲಂ ಜನರ ಕುಂದು ಕೊರತೆ ಸಭೆಯನ್ನು ಜುಲೈ ಮೊದಲನೇ ವಾರದಲ್ಲಿ ಆಯೋಜಿಸಲು ಕ್ರಮವಹಿಸುತ್ತೇವೆಂದರು.
ಈ ಸಂದರ್ಭದಲ್ಲಿ ಸ್ಲಂ ಸಮಿತಿಯ ಕಾರ್ಯದರ್ಶಿ ಅರುಣ್ ಪದಾಧಿಕಾರಿಗಳಾದ ತಿರುಮಲಯ್ಯ, ಕೃಷ್ಣಮೂರ್ತಿ, ಕೋಡಿಹಳ್ಳ ಸ್ಲಂ ಶಾಖೆಯ ಗಣೇಶ್, ನಿವೇಶನ ಹೋರಾಟ ಸಮಿತಿ ಮಂಗಳಮ್ಮ, ಪೂರ್ಣಿಮಾ , ನರಸಮ್ಮ, ರತ್ನಮ್ಮ ನಾಗರಾತ್ನಮ್ಮ, ಭಾರತಿ ನಗರ ಶಾಖೆಯ ಗಂಗಮ್ಮ, ಶಾರದಮ್ಮ, ಮುಂತಾದವರು ಪಾಲ್ಗೊಂಡಿದ್ದರು.