ಶ್ರೀ ಮಾರಿಯಮ್ಮ ದೇವಿಯ ಅದ್ದೂರಿ ಮೆರವಣಿಗೆ. ತುಮಕೂರು ನಗರದ ಬಾಳನಕಟ್ಟೆ, ಮಂಡಿಪೇಟೆಯ ಮಾರಿಯಮ್ಮ ನಗರದ ಶ್ರೀ ಮಾರಮ್ಮ ದೇವಿಯ 62ನೇ ಜಾತ್ರೆ ಅಂಗವಾಗಿ ನಗರದ ರಾಜಭೀದಿಗಳಲ್ಲಿ ಅದ್ದೂರಿಯಾಗಿ ಮೆರವಣಿಗೆಯನ್ನು

ಆಯೋಜಿಸಲಾಗಿತ್ತು ಈ ಮೆರವಣಿಗೆಯಲ್ಲಿ ವೆ ಲೂರಿನ ಶ್ರೀ ಕಾಳಿಕಾ ಮಾರಮ್ಮ ದೇವಿಯ ಮೂರ್ತಿ ಮೆರವಣಿಗೆ ನಗರದ ನಾಗರೀಕರ ಗಮನ ಸೆಳೆಯಿತು ವಿವಿಧ ಪುಷ್ಪ ಅಲಂಕಾರಗಳಿಂದ ಕಂಗೊಳಿಸಿದ ಶ್ರೀ ಮಾರಿಯಮ್ಮ ದೇವಿಯ ಕರಗ ಮತ್ತು ಉತ್ಸವ ಮೂರ್ತಿಗಳಿಗೆ ವಿವಿಧ ರೀತಿಯ ಪೂಜೆಗಳನ್ನು ಮಾಡಲಾಗಿತ್ತು ಹಲಸೂರಿನ ಪಟಾಕಿ ಬಾಣಬಿರುಸುಗಳು ವಿದ್ಯುತ್ ದೀಪಲಂಕಾರ ಬೆಂಗಳೂರಿನ ಹೆಸರಾಂತ ಸುಂದರ್ ತಮಟೆ ತಂಡ ಅಂಗಳ ಪರಮೇಶ್ವರಿ ಆದಿಮೂಲಂ ಪೊಂಬೆ ವಾದ್ಯ ತುಮಕೂರಿನ ಚಂದ್ರಶೇಖರ್ ರವರ ವೀರಾಂಜನೇಯ ಕೀಲು ಕುದುರೆ ತಂಡ ಹಾಗೂ ಮಾರಿಯಮ್ಮನಗರದ ಹೆಣ್ಣು ಮಕ್ಕಳ ಕುಂಭ ಜನರ ಗಮನ ಸೆಳೆದವು ಈ ಮೆರವಣಿಗೆಯಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಏನು ಮೂರ್ತಿರವರು. ಎಂಪಿ ಮಹೇಶ್ ರವರು ಕಣ್ಣನ್ ಚಾಲನೆ ನೀಡಿದರು ಇದರ ನೇತೃತ್ವವನ್ನು ಮಾರಿಯಮ್ಮ ಯುವಕರ ಸಂಘದ ಕೃಷ್ಣ ರಾಜ ಮಾರಿ ಮಾಧವ ಹಾಗೂ ಇನ್ನಿತರ ಯುವ ಮುಖಂಡರುಗಳು ವಹಿಸಿದ್ದರು



