ಮಾದಿಗ ಜನಾಂಗದ ಕುಲವಾಡಿ ಮತ್ತು ಎನ್.ಆರ್ ಕಾಲೋನಿ ಸಮಸ್ತ ನಾಗರೀಕರ ಗ್ರಾಮದ ದೈವಗಳಾದ ಶ್ರೀದುರ್ಗಮ್ಮ, ಶ್ರೀ ಲಕ್ಷ್ಮೀ,ಶ್ರೀ ಪೂಜಮ್ಮ ಮತ್ತು ಶ್ರೀ ದಾಳಮ್ಮ ಜಾತ್ರಾ ಮಹೊತ್ಸವದ ಅದ್ದೂರಿ ಮೆರವಣಿಗೆ ಇಂದು ತುಮಕೂರು ನಗರದ ರಾಜ ಬೀದಿಗಳಲ್ಲಿ ನಡೆಯಿತು. ಕಳೆದ ಜೂನ್ 10 ರಿಂದ ಪ್ರಾರಂಭವಾಧ ಜಲಧಿ, ಗಂಗಾಪೂಜೆ, ಆರತಿ ಹಾಗೂ
ಸಂಪ್ರದಾಯಗಳ ವಿಧಿ ವಿಧಾನಗಳನ್ನು ಕುಲವಾಡಿ ವಂಶಸ್ಥರಾದ ಮೀನುಗಾರರು, ಮಲ್ಲೋರ್, ಬೆಳ್ಳಿಯರ್, ಹಾಗೂ ಮಲ್ಲಿಗೆ ಬುಡಕಟ್ಟುಗಳು ನೆರವೇರಿಸಿದರು.
ಕರ್ನಾಟಕದಲ್ಲಿ ಅತೀ ಹೆಚ್ಚಿನ ಜನಸಂಖ್ಯೆಯಲ್ಲಿ ಮಾದಿಗ ಸಮುದಾಯ ಎನ್.ಆರ್ ಕಾಲೋನಿಯಲ್ಲಿ
ವಾಸಿಸುತ್ತಿದ್ದಾರೆ ಎಂದು ಶ್ರೀ ದುರ್ಗಮ್ಮ ದೇವಸ್ಥಾನ ಜೀರ್ಣೋದ್ಧಾರ ಮತ್ತು ಎನ್.ಆರ್ ಕಾಲೋನಿ ಸಭಿವೃದ್ಧಿ ಸಂಘ (ರಿ) ಅಧ್ಯಕ್ಷರಾದ ಕೆ.ದೊರೈರಾಜ್ ಜಾತ್ರೆಯ ಅದ್ದೂರಿ ಮೆರವಣಿಗೆಯನ್ನು ಉದ್ಘಾಟಿಸಿ ಮಾತನಾಡಿದರು. ಈ ಬಾರೀ ಕಾಲೋನಿಯ ಎಲ್ಲಾ ಮುಖಂಡರು, ಯುವಕರು
ಹಾಗೂ ಹಿರಿಯರು ಸೇರಿ ಜಾತ್ರೆಯನು ಯಾವುದೇ ಗಲಾಟೆಗಳಿಲ್ಲದೆ ಮಾಡಿ ಒಗ್ಗಟ್ಟನ್ನು ತೋರಿದ್ದಾರೆ, ಹಾಗಾಗಿ ಇದಕ್ಕೆ ಕಾರಣೀಕರ್ತರಾದ ಎಲ್ಲರನ್ನು ಅಭಿನಂಧಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಜ್ಯೋತಿಗಣೇಶ್, ಮಾಜಿ ಕಾರ್ಪೋರೇಷನ್ ಸದಸ್ಯರಾದ ವಾಲೇ ಚಂದ್ರಯ್ಯ, ರೂಪಶ್ರೀ ಶೆಟ್ಟಾಳಯ್ಯ, ಎ.ಶ್ರೀನಿವಾಸ್,ಮಾಜಿ ಟೂಡಾ ಸದಸ್ಯರಾದ ಜಯಮೂರ್ತಿ ಅಂಜನ್ಮೂರ್ತಿ ಮುಖಂಡರಾದ ನರಸಿಂಹಯ್ಯ, ಎ.ನರಸಿಂಹಮೂರ್ತಿ, ಬಿ.ಹೆಚ್ ಗಂಗಾಧರ್, ಮಲ್ಲಿಕಾರ್ಜುನ್,ಕಿರಣ್, ಗಂಗಾಧರ್, ದಯಾನಂದ್, ಸುನಿಲ್, ಅನಂತ್, ಸಂಜೀವಯ್ಯ, ಲಕ್ಷ್ಮೀನಾರಾಯಣ , ಮುಕುಂದ, ಕೆಂಪರಾಜು, ಅರುಣ್ ಪಾಲ್ಗೊಂಡಿದ್ದರು.