ತುಮಕೂರು : 2023 ರ ಸಾರ್ವತ್ರಿಕ ಚುನಾವಣೆಯ ಹಿನ್ನಲೆಯಲ್ಲಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್. ಅಭ್ಯರ್ಥಿಯಾದ ಎನ್.ಗೋವಿಂದರಾಜುರವರು ತಮ್ಮ ಕುಟುಂಬ ಸದಸ್ಯರೊಂದಿಗೆ ಚುನಾವಣಾಧಿಕಾರಿಗಳಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ. ನಾಮಪತ್ರವನ್ನು ಇಂದು ಶುಭದಿನವಾಗಿದ್ದರಿಂದ ಸಲ್ಲಿಸಿದ್ದು, ಹಲವಾರು ಹಿತೈಷಿಗಳು ಮತ್ತು ಸ್ನೇಹಿತರು ಇಂದು ಶುಭ ದಿನವಿರುವುದರ ಪ್ರಯುಕ್ತ ಇಂದೇ ನಾಮಪತ್ರ ಸಲ್ಲಿಸಿ ಎಂದು ಕಿವಿ ಮಾತು ಹೇಳಿದ್ದರು, ಹಾಗಾಗಿ ಇಂದು ಆತುರವಾಗಿ ನಾಮಪತ್ರವನ್ನು ಸಲ್ಲಿಸಿದ್ದು. ತಮ್ಮ ಅಪಾರ ಬೆಂಬಲಿಗರು ಮತ್ತು ಕಾರ್ಯಕರ್ತರೊಂದಿಗೆ ದಿನಾಂಕ ೧೯-೦೪-೨೦೨೩ರಂದು ಮತ್ತೊಮ್ಮೆ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು. ನಾಮಪತ್ರವನ್ನು ಸಲ್ಲಿಸುವಾಗ ತಮ್ಮ ಮಗ, ಸೊಸೆ, ಮೊಮ್ಮಗು ಹಾಗೂ ಪಾಲಿಕೆ ಸದಸ್ಯರಾದ ಧರಣೇಂದ್ರ ಕುಮಾರ್ ರಾಜು ಅವರೊಂದಿಗೆ ನಾಮಪತ್ರವನ್ನು ಸಲ್ಲಿಸಿದ್ದು, ಜೆಡಿಎಸ್ ಅಭ್ಯರ್ಥಿ ನಾನೇ ಇದರಲ್ಲಿ ಯಾರೂ ಗೊಂದಲ ಪಡೆಬೇಕಾಗಿಲ್ಲವೆಂದರು



