ತುಮಕೂರು:ರಾಹುಲ್ಗಾಂಧಿ ಅವರ ಸಂಸತ್ ಸದಸ್ಯತ್ವ ರದ್ದು ಖಂಡಿಸಿ,ಜಿಲ್ಲಾ ಕಾಂಗ್ರೆಸ್ನ ಅಧ್ಯಕ್ಷ ಚಂದ್ರಶೇಖರಗೌಡ ನೇತೃತ್ವದಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಘಟಕ,ಎಸ್ಸಿ, ಎಸ್ಟಿ ಮತ್ತು ಓಬಿಸಿ ಘಟಕಗಳ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ನಗರದ ಭದ್ರಮ್ಮ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ,ಅಲಸAಖ್ಯಾತರ ಘಟಕದ ಅಧ್ಯಕ್ಷ ಅತೀಕ್ ಅಹಮದ್,ಎಸ್ಸಿ ಘಟಕದ ಅಧ್ಯಕ್ಷ ಲಿಂಗರಾಜು, ಎಸ್ಸಿ ಘಟಕದ ಅಧ್ಯಕ್ಷ ನರಸಿಂಹಯ್ಯ,ಓಬಿಸಿ ಘಟಕದ ಅಧ್ಯಕ್ಷ ಪುಟ್ಟರಾಜು ಹಾಗೂ ನೂರಾರು ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ,ಪ್ರಜಾಪ್ರಭುತ್ವದ ಯಶಸ್ವಿಗೆ ಆಡಳಿತ ಎಷ್ಟು ಮುಖ್ಯವೋ, ವಿರೋಧಪಕ್ಷವೂ ಅಷ್ಟೇ ಮಹತ್ವದ ಪಾತ್ರವನ್ನು ವಹಿಸುತ್ತದೆ.ಇದರ ಅರಿವಿರದ ಕೇಂದ್ರದ ನರೇಂದ್ರಮೋದಿ ನೇತೃತ್ವದ ಸರಕಾರ ಸರಕಾರದ ನಡೆಯನ್ನು ಟೀಕಿಸಿದ ಕಾಂಗ್ರೆಸ್ ಮುಖಂಡ ರಾಹುಲ್ಗಾಂಧಿ ಅವರ ಮೇಲೆ ಇಲ್ಲಸಲ್ಲದ ಕೇಸು ಹಾಕಿ,ಚುನಾವಣೆ ಸಂದರ್ಭದಲ್ಲಿ ಅವರ ಸದಸ್ಯತ್ವ ರದ್ದು ಪಡಿಸಿ,ಶಿಕ್ಷೆಗೆ ಒಳಗಾಗುವಂತೆ ಮಾಡಿರುವುದು ಸಂವಿಧಾನ ಬಾಹಿರ ಕೃತ್ಯವಾಗಿದೆ. ರಾಹುಲ್ಗಾಂಧಿ ಅವರ ಸದಸ್ಯತ್ವ ರದ್ದು ಪ್ರಕ್ರಿಯೆ ಪೂರ್ವ ನಿಯೋಜಿತದಂತೆ ಕಂಡುಬರುತ್ತಿದೆ ಎಂದು ಆರೋಪಿಸಿದರು.
ಪ್ರಧಾನಿಯವರು ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರಿಯಂತೆ ವರ್ತಿಸುತ್ತಾ,ವಿರೋಧಿಗಳನ್ನು ಭಯದ ಮೂಲಕ ಹಣಿಯಲು ಹೊರಟಿದ್ದಾರೆ.ಇದು ಭಾರತದಂತಹ ರಾಷ್ಟçದ ಪ್ರಧಾನಿಯೊಬ್ಬರ ನಡೆವಳಿಕೆ ಶೋಭೆ ತರುವಂತಹದ್ದಲ್ಲ.ಕೂಡಲೇ ರಾಹುಲ್ ಗಾಂಧಿ ಅವರ ಮೇಲಿನ ಅನಗತ್ಯ ಕಿರುಕುಳವನ್ನು ಕೈಬಿಡಬೇಕು.ಸದನದ ಒಳಗೆ ಮತ್ತು ಹೊರಗೆ ಪಕ್ಷಕ್ಕೆ ಆಗುತ್ತಿರುವ ಮುಜುಗರ ವನ್ನು ತಪ್ಪಿಸಲು ಹೋಗಿ,ಈ ರೀತಿಯ ಕೃತ್ಯಕ್ಕೆ ಕೈಹಾಕಿದೆ. ಇದಕ್ಕೆ ಎಂದಿಗೂ ಕಾಂಗ್ರೆಸ್ ಕಾರ್ಯಕರ್ತರು ಬಗ್ಗುವುದಿಲ್ಲ.ಮತ್ತಷ್ಟು ಪುಟಿದೇಳಲಿದೆ ಎಂದು ಚಂದ್ರಶೇಖರಗೌಡ ನುಡಿದರು.
ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್ ಅಹಮದ್ ಮಾತನಾಡಿ,ರಾಹುಲ್ಗಾಂಧಿ ಅವರು ಸಂಸತ್ತಿನಲ್ಲಿ ನಮ್ಮ ಪ್ರಧಾನಿಯವರ ಅಪ್ತ ಅದಾನಿಯವರಿಗೆ ೨೦ ಸಾವಿರ ಕೋಟಿ ಎಲ್ಲಿಂದ ಬಂತು ಎಂಬ ಪ್ರಶ್ನೆ ಕೇಳಿದ್ದರಿಂದ ತೀವ್ರ ಮುಜುಗರಕ್ಕೆ ಒಳಗಾಗಿ, ತನ್ನ ಸ್ನೇಹಿತರ ರಕ್ಷಣೆಗಾಗಿ ರಾಹುಲ್ಗಾಂಧಿಯವರು ಪಾರ್ಲಿಮೆಂಟ್ಗೆ ಬರದಂತೆ ನೋಡಿಕೊಂಡರು. ಭಾರತದ ಇದುವರೆಗಿನ ರಾಜಕೀಯ ವ್ಯವಸ್ಥೆಯಲ್ಲಿ ತೀರ ಅಪರೂಪದ ಘಟನೆ ಇದಾಗಿದೆ.ಇದನ್ನು ಎಲ್ಲಾ ಭಾರತೀಯರು ಖಂಡಿಸಬೇಕಿದೆ. ಅರ್ಜಿದಾರರೇ ವಿಚಾರಣೆಗೆ ತಡೆಯಾಜ್ಞೆ ಕೋರಿ,ಅದಾನಿ ಮತ್ತು ಪ್ರಧಾನಿಯವರ ನಂಟು ಹೊರಬರುತ್ತಿದ್ದಂತೆ, ಕೇಸಿನ ತೀರ್ಪು ಬರುವಂತೆ ಮಾಡಿರುವುದು ಷಡ್ಯಂತ್ರದ ಭಾಗ.ರಾಜ್ಯದಲ್ಲಿ ಇಬ್ಬರು ಶಾಸಕರಿಗೆ ಜೈಲು ಶಿಕ್ಷೆಯಾಗಿದೆ. ನ್ಯಾಯಾಲಯ ಶಿಕ್ಷೆ ಘೋಷಣೆ ಮಾಡಿ ತಿಂಗಳು ಕಳೆಯುತ್ತಾ ಬಂದಿದ್ದರೂ ಇದುವರೆಗೂ ಕ್ರಮ ಕೈಗೊಂಡಿಲ್ಲ.ಆದರೆ ತೀರ್ಪು ಪ್ರಕಟವಾದ ೨೪ ಗಂಟೆಯೊಳಗೆ ಸದಸ್ಯತ್ವ ರದ್ದುಪಡಿಸುವ ತರಾತುರಿಯಲ್ಲಿ ಕೆಲಸ ಮಾಡಿರುವುದು ನಮ್ಮ ನಾಯಕರಿಗೆ ಬಿಜೆಪಿ ಪಕ್ಷ ಹೆದರಿರುವುದರ ಸಂಕೇತ ಎಂದರು.
ಪ್ರತಿಭಟನೆಯಲ್ಲಿ ಇಕ್ಬಾಲ್ ಅಹಮದ್,ರೆಡ್ಡಿಚಿನ್ನಯಲ್ಲಪ್ಪ,ಹೆಚ್.ಸಿ.ಹನುಮಂತಯ್ಯ,ಮAಜುನಾಥ್,ರಾಜಣ್ಣ,ಸುಜಾತ, ನರಸಿಂಹ ಮೂರ್ತಿ,ಸಂಜೀವ್ಕುಮಾರ್,ಶಿವಾಜಿ,ಶಿವಾನAದ್,ಮಹಿಳಾ ಘಟಕದ ಡಾ.ಅರುಂಧತಿ,ನಾಗಮಣಿ,ಕೆAಪಣ್ಣ, ಆಟೋರಾಜು ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು
ರಾಹುಲ್ಗಾಂಧಿ ಅವರ ಸಂಸತ್ ಸದಸ್ಯತ್ವ ರದ್ದು ಖಂಡಿಸಿ, ತುಮಕೂರು ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

Leave a comment
Leave a comment


