
ನಾಳೆ ಸ್ಲಂಗಳಲ್ಲಿ ಅಂಬೇಡ್ಕರ್ ಹಬ್ಬ
ಡಾ. ಬಿ.ಆರ್ ಅಂಬೇಡ್ಕರ್ ರವರ ೧೩೨ನೇ ಮತ್ತು ಡಾ.ಬಾಬು ಜಗಜೀವನ್ರಾಂ ರವರ ೧೧೬ನೇ ಜಯಂತಿ ಅಂಗವಾಗಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ನಾಳೆ ವಿವಿಧ ಸ್ಲಂಗಳಲ್ಲಿ ಅಂಬೇಡ್ಕರ್ ಹಬ್ಬ ಆಚರಿಸಲಾಗುತ್ತಿದೆ. ಬೆಳಗ್ಗೆ ೭.೩೦ಕ್ಕೆ ಕೋಡಿಹಳ್ಳ ಕೊಳಚೆ ಪ್ರದೇಶದಲ್ಲಿ ಅಂಬೇಡ್ಕರ್ ಹಬ್ಬಕ್ಕೆ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ಚಾಲನೆಯನ್ನು ನೀಡಲಿದ್ದಾರೆ.
೮.೩೦ಕ್ಕೆ ಇಸ್ಮಾಯಿಲ್ ನಗರದಲ್ಲಿ ೯.೩೦ ಕ್ಕೆ ಭಾರತಿ ನಗರ, ೧೦.೩೦ಕ್ಕೆ ಎಸ್,ಎನ್ ಪಾಳ್ಯ ಹಾಗೂ ೧೧.೩೦ ಕ್ಕೆ ಮಾರಿಯಮ್ಮ ನಗರ ವಸತಿ ಸಮುಚ್ಚಯದಲ್ಲಿ ಕೊಳಗೇರಿ ಸಮಿತಿಯ ೨೦ನೇ ವರ್ಷದ ಅಂಗವಾಗಿ ಅಂಬೇಡ್ಕರ್ರವರನ್ನು ಮನೆಮನೆಗೂ ತಲುಪಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ರಂಗೋಲಿ, ಹಾಗೂ ಸಂವಿಧಾನ ಓದುವ ಮೂಲಕ ಅಂಬೇಡ್ಕರ್ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.
ಪ್ರತಿವರ್ಷದಂತೆ ಟೌನ್ಹಾಲ್ ವೃತ್ತದಲ್ಲಿ ಅಂಬೇಡ್ಕರ್ ಮತ್ತು ಬಾಬಾಜಿ ರವರ ಜಯಂತಿಯನ್ನು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ತುಮಕೂರು ಪೌರಕಾರ್ಮಿಕರ ಸಂಘದಿAದ ಜಂಟಿಯಾಗಿ ಆಚರಿಸಲಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳಾದ ದೀಪಿಕಾ, ಶಂಕ್ರಯ್ಯ, ಕಣ್ಣನ್, ಅರುಣ್,ತಿರುಮಲಯ್ಯ, ಮಂಗಳಮ್ಮ ಭಾಗವಹಿಸಲಿದ್ದು ಶಾಖಾ ಸಮಿತಿಯ ಪದಾಧಿಕಾರಿಗಳಾದ ಇಸ್ಮಾಯಿಲ್ ನಗರ ಗಂಗಮ್ಮ, ನಾಗರಾಜು, ಭಾರತಿ ನಗರದ ಶಾರದಮ್ಮ, ಗಂಗಾ, ಕೆಂಪಣ್ಣ, ಶಾಬುದ್ದಿನ್, ಲತಾ ಎಸ್ಎನ್ ಪಾಳ್ಯದ ಗುಲ್ನಾಜ್, ಶಿವಕುಮಾರ್, ನರಸಿಂಹಮೂರ್ತಿ, ಮಾರಿಯಮ್ಮ ನಗರದ ಚಕ್ರಪಾಣಿ, ಮುರುಗ, ಕಾಶಿರಾಜು, ಮಾಧವನ್, ರಾಜ, ಮಾರಿ, ಚಲುವ್ರಾಜ್ ಪಾಲ್ಗೊಳ್ಳಲಿದ್ದು ದಿನಾಂಕ:೧೭-೪-೨೦೨೩ರAದು ದಿಬ್ಬೂರು ದೇವರಾಜ್ ಅರಸು ಬಡಾವಣೆಯಲ್ಲಿ ಸಮಾರೋಪಗೊಳ್ಳಲಿದ್ದು, ಸಿದ್ದಪ್ಪ, ರಾಜು, ರವಿ, ವೆಂಕಟೇಶ್,ಗೋವಿAದ, ಸುಬ್ಬ, ಮಾರಿಮುತ್ತು, ಸ್ವಾಮಿನಾಥ, ಮುರುಗ, ಶಿವರಾಜು, ಜಗದೀಶ್, ಬಾಬು ಪಾಲ್ಗೊಳ್ಳಲಿದ್ದಾರೆ.



