ಇಂದು ಗೌರಿ ಗಣೇಶ ಹಬ್ಬದ ಪ್ರಯುಕ್ತ ಟೌನ್ ಹಾಲ್ ವೃತ್ತದಲ್ಲಿರುವ ನಾಗರಕಟ್ಟೆ ಹಿಂದು ಮಹಾಗಣಪತಿ ಸೇವಾ ಸಮಿತಿ ವತಿಯಿಂದ ಸ್ಥಾಪಿಸಲಾಗಿರುವ 9ನೇ ವರ್ಷದ ಗಣೇಶ ಪ್ರತಿಮೆಯನ್ನು ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ ಪರಮೇಶ್ವರ್ ಅವರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಾರಂಭ ಮಾಡಲಾಯಿತು. ಈ ವೇಳೆ ಬಿಜೆಪಿಯ ಓಬಿಸಿ ಮೋರ್ಚ ಜಿಲ್ಲಾಧ್ಯಕ್ಷರಾದ ಸ್ಪೂರ್ತಿ ಚಿದಾನಂದ ಅವರು ಮಾತನಾಡುತ್ತಾ ಈ ವರ್ಷದ ಗೌರಿ ಗಣೇಶ ಹಬ್ಬ ಸರಿಯಾದ ಸಮಯಕ್ಕೆ ಮಳೆ ಬೆಳೆಯಾಗಿ ರೈತರು ಸುಬಿಕ್ಷವಾಗಿರಲಿ ಎಂದು ಹರಸಿದರು. ದೇಶದಲ್ಲಿ ಜನರು ಸೌಖ್ಯವಾಗಿರುವ ಹಾಗೆ ದೇವರು ಕಾಪಾಡಲಿ ಎಂದು ಆರೈಸಿದರು. ನಗರದಲ್ಲಿ ಜನರು ಭೇದಭಾವವಿಲ್ಲದೆ ಭಾವೈಕ್ಯತೆಯಿಂದ ಒಂದಾಗಿ ಎಲ್ಲರೂ ಗೌರಿ ಗಣೇಶ ಹಬ್ಬವನ್ನು ಆಚರಿಸಲಿ ಎಂದು ಶುಭ ಹಾರೈಸಿದರು. ಈ ವೇಳೆ ಜಿಲ್ಲಾಧಿಕಾರಿ ಶುಭಕಲ್ಯಾಣ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್. ಡಿವೈಎಸ್ಪಿ ಚಂದ್ರಶೇಖರ್. ನಗರ ಠಾಣೆ ಪಿಎಸ್ಐ ಮಂಜುಳ.ಮಾಜಿ ಸಚಿವ ಸೊಗಡು ಶಿವಣ್ಣ. ಸಮಿತಿಯ ಅಧ್ಯಕ್ಷರು ಟಿಬಿ ಶೇಖರ್. ಪ್ರಧಾನ ಕಾರ್ಯದರ್ಶಿಗಳಾದ ಆರ್ ಎಲ್ ರಮೇಶ್ ಬಾಬು. ಕಾರ್ಯದರ್ಶಿಗಳಾದ ಆರ್ ಕೃಷ್ಣಯ್ಯ. ಉಪಾಧ್ಯಕ್ಷರಾದ ಮಂಜೇಶ್ ಮತ್ತು ಮನು. ನಿರ್ದೇಶಕರುಗಳಾದ ಎಸ್ ಪಿ ಚಿದಾನಂದ ಧನ್ಯಕುಮಾರ್. ವಸಂತಕುಮಾರ್. ಭಾನುಪ್ರಕಾಶ್. ಶ್ರೀಮತಿ ಶಕುಂತಲಾ ನಟರಾಜ್. ಬಿಜೆಪಿಯ ಪ್ರಭಾಕರ್. ಮಂಜು ಭಾರ್ಗವ್. ಕುಮಾರ್ ಸ್ವಾಮಿ . ಮತ್ತು ಕಾರ್ಯಕರ್ತರು. ಗಣೇಶನ ಭಕ್ತರು. ಸಾರ್ವಜನಿಕರು. ಭಾಗವಹಿಸಿದ್ದರು.



