ಸ್ನೇಹಿತರಿಂದ ಸ್ನೇಹಿತ ಕೃಷ್ಣಮೂರ್ತಿಗೆ ಸನ್ಮಾನ
ತುಮಕೂರು: ಕರ್ನಾಟಕ ಕಾರ್ಯನಿರತ ಪತ್ರಿಕಾ ಸಂಪಾದಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾದ ಪ್ರಜಾಮನ ಕನ್ನಡ ದಿನಪತ್ರಿಕೆ ಸಂಪಾದಕ ಟಿ.ಎಸ್.ಕೃಷ್ಣಮೂರ್ತಿ ಎಂ.ಎಸ್.ಆಶಾ ದಂಪತಿಗಳನ್ನು ತೋವಿನಕೆರೆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಬಾಲ್ಯ ಸ್ನೇಹಿತರು ನಗರದ ಖಾಸಗಿ ಹೋಟೆಲ್ನಲ್ಲಿ ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಮಾತನಾಡಿದ ಸ್ನೇಹಿತ ಬೆಂಗಳೂರಿನ ಕೃಷಿ ಇಲಾಖೆ ಉಪ ಕಾರ್ಯದರ್ಶಿ ಟಿ.ಎನ್.ಅಶೋಕ, ಶಾಲಾ ಅವಧಿಯಿಂದಲೂ ಟಿ.ಎಸ್.ಕೃಷ್ಣಮೂರ್ತಿ ಎಲ್ಲರೊಂದಿಗೆ ಬೆರೆಯುತ್ತಾ ಇಂದು ಜಿಲ್ಲೆಯಲ್ಲಿ ಪತ್ರಿಕಾರಂಗದಲ್ಲಿ ನೂರಾರು ಜನರನ್ನು ಬೆಳೆಸಿದ್ದಾನೆ.
ಇಂದು ಅವನಿಗೆ ಸಿಕ್ಕ ಸ್ಥಾನ ಅವನ ಶ್ರಮದಿಂದಲೇ ಬಂದಿದೆ ಎಂದು ಬಣ್ಣಿಸಿದರು.
ಸ್ನೇಹಿತರಿಂದ ಸ್ನೇಹಿತ ಕೃಷ್ಣಮೂರ್ತಿಗೆ ಸನ್ಮಾನ
Leave a comment
Leave a comment