ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ 11 ಸ್ಲಂ ಗಳ 1257, ಕುಟುಂಭಗಳಿಗೆ ಹಕ್ಕು
ಪತ್ರ
ಜಿಲ್ಲಾಡಳಿತಕ್ಕೆ ಸ್ಲಂ ಸಮಿತಿಯಿಂದ ಅಭಿನಂದನೆ
ಮಾನ್ಯ ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್ ರವರ ಸೂಚನೆ ಮೇರೆಗೆ ಕಳೆದ 2 ದಶಕದ ಸ್ಲಂ ಜನರ ಬೇಡಿಕೆಯಾದ ಹಕ್ಕುಪತ್ರ ವಿತರಣೆಗೆ ತುಮಕೂರು ಜಿಲ್ಲಾಡಳಿತ ಕ್ರಮವಹಿಸಿರುವುದು ಸ್ವಾಗತಾರ್ಹವಾಗಿದೆ. ಎಂದು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಸಮಿತಿ ಅಭಿನಂದಿಸುತ್ತದೆ.
ಈ ಕಾರ್ಯದಲ್ಲಿ ಯಾವುದೇ ವಿಳಂಭವಾಗದಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಿ ದಶಕಗಳಿಂದ ಭೂ ಮಾಲಿಕತ್ವ- ಒಡೆತನದಿಂದ ವಂಚಿತರಾಗಿದ್ದ ಸ್ಲಂ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಲು ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ಶುಭ ರವರು ಸ್ಲಂ ಬೋರ್ಡ್, ಭೂ ದಾಖಲೆಗಳ ಇಲಾಖೆ, ಮತ್ತು ಕಂದಾಯ ಇಲಾಖೆ ಸ್ಲಂ ಸಮಿತಿಯ ಸಮನ್ವಯತೆ ಸಾಧಿಸಿದಿರುವುದು ಸ್ವಾಗತರ್ಹವಾಗಿದೆ, ಕಳೆದ 3 ತಿಂಗಳಿಂದ ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ 11 ಸ್ಲಂಗಳಲ್ಲಿ ಸುಮಾರು 2738 ಕುಟುಂಬಗಳ ಸಮೀಕ್ಷೆ ಮಾಡಲಾಗಿದ್ದು ಇದರಲ್ಲಿ 13646 ಜನಸಂಖ್ಯೆಯನ್ನು ತಲುಪಲಾಗಿದೆ. ಇದರಲ್ಲಿ ಎಸ್ಸಿ ಸಮುದಾಯದ 6662 ಎಸ್ಟಿ ಸಮುದಾಯದ 720 ಅಲ್ಪಸಂಖ್ಯಾತ ಸಮುದಾಯದ 5137 ಇತರೆ ಸುಮಾರು 1480 ಅನ್ನು ಒಳಗೊಂಡಂತೆ ಈ ಪೈಕಿ ನೈಜ್ಯತೆ ಇರುವ 1257 ಕುಟುಂಬಗಳು ಹಕ್ಕುಪತ್ರಕ್ಕೆ ಆಧ್ಯತೆ ಹೊಂದಿವೆ ಈ ಪೈಕಿ ಕರ್ನಾಟಕ ಭೂ ಸುಧಾರಣೆ ಕಾಯಿದೆ 1971 ಕಲಂ 38ಎ ಅಡಿಯಲ್ಲಿ 716 ಕುಟುಂಬಗಳಿಗೆ ಕಂದಾಯ ಇಲಾಖೆಯಿಂದ ಖಾಸಗೀ ಮಾಲೀಕತ್ವ ಸ್ಲಂ ವ್ಯಾಪ್ತಿಯ ಕುಟುಂಬಗಳಿಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಕಾಯಿದೆ 1973 ರ ಕಲಂ-4(2) ಅನ್ವಯ 20202ರ ಸುತ್ತೋಲೆ ಮೇರೆಗೆ 541 ಕುಟುಂಬಗಳಿಗೆ ನವೆಂಬರ್ 25 ರೊಳಗೆ ಎಲ್ಲಾ ಸ್ಲಂ ಪ್ರದೇಶಗಳ ಸರ್ವೇ ಕಾರ್ಯವನ್ನು ಪೂರ್ಣಗೊಳಿಸಿ ಡಿಸೆಂಬರ್ 6 ರಂದು ಹಕ್ಕುಪತ್ರ ನೀಡಬೇಕೆಂದು ತುಮಕೂರು ಸ್ಲಂ ಸಮಿತಿ ಅಧ್ಯಕ್ಷರಾದ ಎ.ನರಸಿಂಹಮೂರ್ತಿ ರವರು ಒತ್ತಾಯಿಸಿದ್ದಾರೆ. ಫಲಾನುಭವಿಗಳ ಪಟ್ಟಿ ಅಂತಿಮಗೊಂಡ ನಂತರ ಸರ್ಕಾರದ ನಿಗಧಿತ ಶುಲ್ಕವನ್ನು ಅರ್ಹ ಫಲಾನುಭವಿಗಳಿಂದ ಡಿಡಿ ಮುಖಾಂತರ ಪಾವತಿಸಬೇಕು ಈ ಮಧ್ಯೆ ಯಾರೇ ಮಧ್ಯವರ್ತಿಗಳಿಗೆ ಸ್ಲಂ ನಿವಾಸಿಗಳು ಹಣ ನೀಡಿ ಮೋಸ ಹೋಗದಂತೆ ತುಮಕೂರು ಸ್ಲಂ ಸಮಿತಿ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ತುಮಕೂರು ಸ್ಲಂ ಸಮಿತಿಯ ಪದಾಧಿಕಾರಿಗಳಾದ ಶಂಕರಯ್ಯ, ಅನುಪಮಾ, ಗುಲ್ನಾಜ್, ಸಲ್ಮಾಬಾನು, ಕೃಷ್ಣಮೂರ್ತಿ, ಶಾರದಮ್ಮ, ಗಂಗಾ, ಮುಬಾರಕ್, ಜಾಬೀರ್ ಖಾನ್, ಮಂಗಳಮ್ಮ, ಕೆಂಪಣ್ಣ ಮುಂತಾದವರು ಪಾಲ್ಗೊಂಡಿದ್ದರು.



