ತುಮಕೂರು : ಕಳೆದ ಒಂದೆರಡು ವಾರಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ತುಮಕೂರು ಅಮಾನಿಕೆರೆ ಭರ್ತಿಯಾಗಿದ್ದು ಅಲ್ಲಿಂದ ಹೊರ ಬರುತ್ತಿರುವ ನೀರು ನೇರವಾಗಿ ದಿಬ್ಬೂರಿನ ಕೆಲ ಬಡಾವಣೆಗಳಿಗೆ ನುಗ್ಗಿ ಆವಂತರ ಸೃಷ್ಠಿಯಾಗಿದೆ ಎಂದು ಸ್ಥಳೀಯರು ಇಂದು ಆಕ್ರೋಶವನ್ನು ವ್ಯಕ್ತಪಡಿಸಿದರು.
ದಿಬ್ಬೂರಿನ ಸ್ಥಳೀಯ ನಿವಾಸಿಯಾದ ಇಂದ್ರಕುಮಾರ್ರವರು ಮಾತನಾಡಿ ಈ ಭಾಗದ ಜನರು ಮಳೆ ಬಂದರೆ ವಾಸ ಮಾಡಲು ಸಾಧ್ಯವಾಗುತ್ತಿಲ್ಲ ಏಕೆಂದರೆ ತುಮಕೂರಿನ ಅಮಾನಿಕೆರೆ ಭರ್ತಿಯಾಗಿ ಹೊರ ಬರುವ ನೀರು ಇದೇ ಮಾರ್ಗವಾಗಿ ಬರುತ್ತದೆ, ಅದೂ ಅಲ್ಲದೇ ಕೆಲ ಡ್ರೈನೇಜ್, ಮ್ಯಾನ್ಹೋಲ್ ನೀರು ಸಹ ಮಳೆ ನೀರಿನೊಂದಿಗೆ ಮಿಶ್ರಿತವಾಗಿ ಈ ಭಾಗದಿಂದಲೇ ಬರುತ್ತಿದ್ದು, ಅಧಿಕಾರಿಗಳ ಬೇಜವಾಬ್ದಾರಿತನ, ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷದಿಂದ ಇಲ್ಲಿನ ನಿವಾಸಿಗಳಾದ ನಾವುಗಳು ನಾನಾ ರೀತಿಯ ಕಷ್ಟಗಳನ್ನು ಪಡುವಂತಹ ಸ್ಥಿತಿ ಬಂದಿದೆ ಎಂದರು.