ದಿವಂಗತ ವಿಠ್ಠಲ್ ಹೇರೂರ ಅವರ ಸ್ಮರಣಾರ್ಥ ಡಿ.3 ರಂದು ಕಾಶಿ ಮಾದರಿಯಲ್ಲಿ ಗಂಗಾರತಿ. ಬ್ರಹ್ಮ ಶ್ರೀ ಪೀಠದ ಶ್ರೀ ರಾಜಗೂರು ಸ್ವಾಮೀಜಿ ಹೇಳಿಕೆ.
ಕೋಲಿ ಸಮಾಜದ ಧೀಮಂತ ನಾಯಕ ದಿ ವಿಠ್ಠಲ್ ಹೇರೂರ ಅವರ ಸ್ಮರಣಾರ್ಥಿವಾಗಿ ಇದೆ ದಿನಾಂಕ ಡಿಸೇಂಬರ್ 3 ರಂದು ಗಾಣಗಾಪುರದಲ್ಲಿ ಕಾಶಿ ಮಾದರಿಯ ಗಂಗಾರತಿ ಮಹೋತ್ಸವ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬ್ರಹ್ಮ ಶ್ರೀ ಪೀಠದ ರಾಜಗೂರು ಮಹಾಸ್ವಾಮಿಜಿ ಹೇಳಿದ್ದಾರೆ, ಗಾಣಗಾಪುರ ಪಟ್ಟಣದ ದಿ ವಿಠ್ಠಲ್ ಹೇರೂರ್ ಅವರ ಶಕ್ತಿ ಕೇಂದ್ರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಇದೆ ದಿನಾಂಕ ಡಿಸೇಂಬರ್ 3 ರಂದು ವಿಠ್ಠಲ್ ಹೇರೂರ್ ಅವರ ದಿವ್ಯ ಸ್ಮರಣೋತ್ಸವ ವಿರುವದರಿಂದ ದೇವಲ ಗಾಣಗಾಪುರದಲ್ಲಿ ಕಾಶಿ ಮಾದರಿಯಲ್ಲಿ ಗಂಗಾರತಿ ಮಹೋತ್ಸವವನ್ನು ಹಮ್ಮಿಕೊಂಡಿದ್ದು ಹಾಗಾಗಿ ನಾಡಿನ ಜಿಲ್ಲೆಯ ಅನೇಕ ಮಠಾಧಿಶರು, ರಾಜಕೀಯ ನಾಯಕರು ಸೇರಿದಂತೆ ಅನೇಕ ಗಣ್ಯರು ಈ ಗಂಗಾರತಿ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದು ಹಾಗಾಗಿ ಅವರಿವರೆನ್ನದೆ ಸಮಾಜದ ಎಲ್ಲ ನಾಗರಿಕರು, ವಿಠ್ಠಲ್ ಹೇರೂರ ಅಭಿಮಾನಿಗಳು ಹಾಗೂ ಎಲ್ಲ ಸರ್ವ ಜಾತಿ ಜನಾಂಗ ಧರ್ಮದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು, ತದನಂತರ ಮಾತನಾಡಿದ ತಿಪ್ಪಣ್ಣ ಕಂಟೆಪ್ಪ ಹೇರೂರ್ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ರಾಜಶೇಖರ್ ತಲಾರಿ ಡಿಸೇಂಬರ 3 ರಂದು ದೇವಲ ಗಾಣಗಾಪುರದಲ್ಲಿ ವಿಠ್ಠಲ್ ಹೇರೂರ ಅವರ ಸ್ಮರಣಾರ್ಥವಾಗಿ ನಡೆಯುವ ಗಂಗಾರತಿ ಕಾರ್ಯಕ್ರಮದಲ್ಲಿ ಎಲ್ಲರು ಪಾಲ್ಗೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಭಗವಂತಪ್ಪ ಹೆರೂರ್, ತೋನಸನ ಹಳ್ಳಿಯ ಪರಮಪೂಜ್ಯರಾದ ಶ್ರೀ ಕೊತಲಪ್ಪ ಮಹಾಸ್ವಾಮಿಜಿ, ಬಸವರಾಜ ಹೇರೂರು, ಗ್ರಾಮ ಪಂಚಾಯತ್ ಸದಸ್ಯರಾದ ದಿಗಂಬರ್ ಡಾಂಗೆ , ಸಂಗು ಬೆಳಗುಂಪಿ, ಮುಖ್ಯಗುರುಗಳಾದ ರಾಜಶೇಖರ್ ತಲಾರಿ, ಶಿಕ್ಷಕರಾದ ದತ್ತಪ್ಪ ನಡುವಿನಕೆರೆ ಗಣೇಶ್ ರಾಠೋಡ್, ಅಶೋಕ್ ಭೋವಿ, ಗುರು ದಾಸ ಸುಬೇದಾರ್, ಇಮ್ರಾನ್ ಮನಿಯರ್ , ಗೀತಾ ಮೋಟೆ, ಶ್ರೀದೇವಿ ಎಸ್, ಭಾಗ್ಯಶ್ರೀ ಪಾಟೀಲ್, ಇನಾಭಾಯಿ ರಾಠೋಡ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.