ತುಮಕೂರು – ತುಮಕೂರು ಪೊಲೀಸರು ರೌಡಿಶೀಟರ್ ಕಾಲಿಗೆ ಫೈರಿಂಗ್ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಪೋಲಾಡ್ ಹತ್ಯೆ ಆರೋಪಿ ಶಿವಪ್ರಸಾದ್ ಸ್ನೇಹಿತನಾಗಿದ್ದ ಬಂಡೆ ನಾಗನ ಕೊಲೆಗೆ ಮನೋಜ್ ಅಲಿಯಾಸ್ ಮಂಡೇಲಾ ಹೊಂಚು ಹಾಕಿ ಕೊಲೆಗೆ ಯತ್ನಿಸಿದ್ದ ಎನ್ನಲಾಗಿದೆ.
ಇನ್ನು ಮನೋಜ್ ಮಚ್ಚು ಬಿಸಿದ ವೇಳೆ ಬಂಡೆನಾಗ ತಪ್ಪಿಸಿಕೊಂಡು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದ.
ಇನ್ನು ತಕ್ಷಣವೇ ಕಾರ್ಯಪವೃತ್ತರಾದ ಪೊಲೀಸರು ರೌಡಿಶೀಟರ್ ಮನೋಜ್ ಗಾಗಿ ಹುಡುಕಾಟ ಶುರುಮಾಡಿದ್ದರು.
ಇನ್ನು ತುಮಕೂರು ನಗರದ ಹೊರವಲಯದ ಚಿಕ್ಕೋಡಿ ಬಳಿ ತಲೆಮರಿಸಿಕೊಂಡಿದ್ದ ಮನೋಜ್ ನನ್ನ ಬಂಧಿಸಲು ಮುಂದಾಗಿದ್ದ ಪೊಲೀಸರ ಮೇಲೆ ಮನೋಜ್ ಏಕಾಯಕಿ ಡ್ರಾಗರ್ ನಿಂದಾ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ.
ಇನ್ನು ಇದೇ ಸಂದರ್ಭದಲ್ಲಿ ಹೆಡ್ ಕಾನ್ಸ್ಟೇಬಲ್ ನಯಾಜ್ ಕೈಗೆ ಹಾಗೂ ಎ ಎಸ್ ಐ ಮಲ್ಲೇಶ್ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದ ಮಂಡೇಲಾ ಗೆ ಎರಡು ಬಾರಿ ಎಚ್ಚರಿಕೆ ನೀಡಿ ಗಾಳಿಯಲ್ಲಿ ಎರಡು ಬಾರಿ ಗುಂಡು ಸಹ ಹೊಡೆದ ಪೊಲೀಸರು ಶರಣಾಗುವಂತೆ ಸೂಚಿಸಿದ್ದರು.
ಇನ್ನು ಇದೇ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಹಿನ್ನೆಲೆಯಲ್ಲಿ ಆತ್ಮ ರಕ್ಷಣೆಗಾಗಿ ತುಮಕೂರು ನಗರ ಠಾಣೆಯ ಇನ್ಸ್ಪೆಕ್ಟರ್ ದಿನೇಶ್ ರವರು ಮನೋಜ್ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆದಿದ್ದರು.
ತುಮಕೂರು ನಗರ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ ಮನೋಜ್ ಅಲಿಯಾಸ್ ಮಂಡೇಲಾ ಹಟ್ಟಿ ಮಂಜ ಕೊಲೆ ಸೇರಿ, ಕೊಲೆ ಯತ್ನ ದರೋಡೆ ಪ್ರಕರಣಗಳು ಸಹ ಆತನ ವಿರುದ್ಧ ಇದ್ದು ತುಮಕೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು .
ಇನ್ನು ಘಟನೆ ನಡೆದ ಕೂಡಲೇ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಅಶೋಕ್ ಕೆ.ವಿ ರವರು ಅಧಿಕಾರಿಗಳಿಂದ ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇನ್ನು ಪೊಲೀಸ್ ಹೆಡ್ ಕಾನ್ಸ್ಟೇಬಲ್ ನಯಾಜ್ ಕೈಗೆ ತೀವ್ರ ಸ್ವರೂಪದ ಗಾಯವಾದ ಕಾರಣ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ.
ಇನ್ನು ಇದೇ ಸಂದರ್ಭದಲ್ಲಿ ಡಿವೈಎಸ್ಪಿ ಚಂದ್ರಶೇಖರ್ ನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಭಾರತಿ, ತಿಲಕ್ ಪಾರ್ಕ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಂಜಯ್ ಕಾಂಬಳೆ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು