ಕುರುಬ ಸಮುದಾಯದ ಅಗ್ರ ನಾಯಕರು ಕಾರಣ. ನೆಹರು ಇಂದಿರಾ ಆಪ್ತರಾಗಿದ್ದ ಸಮುದಾಯದ ಕೋಳೂರು ಮಲ್ಲಪ್ಪ ಅವರು ತಮಗೆ ಬಂದ ರಾಜ್ಯದ ಚುಕ್ಕಾಣಿ ಹಿಡಿಯುವ ಅವಕಾಶವನ್ನು ದೇವರಾಜ ಅರಸು ಅವರಿಗೆ ಬಿಟ್ಟುಕೊಟ್ಟು ಸಾಮಾಜಿಕ ನ್ಯಾಯದ ಹೊಸ ಶಕೆಗೆ ಕಾರಣರಾದರು. ಇಂದು ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿಯುವಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಪ್ರಮುಖವಾಗಿದೆ. ಅವರು ಮೊದಲ ಬಾರಿ ಸಿಎಂ ಆಗಿ ನೀಡಿದ ಅನ್ನಭಾಗ್ಯ, ವಿದ್ಯಾಸಿರಿ ಎಲ್ಲಾ ಸಮುದಾಯಕ್ಕೆ ಸಂದಿದ್ದು, ಸಾಮಾಜಿಕ ನ್ಯಾಯ ಕಲ್ಪಿಸಿದ್ದಾರೆ. ನಾವು ಯಾವುದೇ ಅಧಿಕಾರ ಸ್ಥಾನದಲ್ಲಿರಲಿ ಸಮಾಜದ ಬಗ್ಗೆಯೂ ಒಂದಿಷ್ಟು ಕಳಕಳಿ ತೋರಬೇಕಿದ್ದು, ಕಾಗಿನೆಲೆ, ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ ಸ್ಥಾಪನೆಯಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಪ್ರಮುಖವಾದದ್ದು. ಸವಾಲಗಳ ನಡುವೆಯೂ ಸರ್ವ ಸಮಾಜಕ್ಕೂ ಒಳಿತು ಮಾಡುತ್ತಿದ್ದಾರೆ. ಸಮುದಾಯದ ಮಂದಿ ನಂಬಿಕೆ ವಿಶ್ವಾಸಕ್ಕೆ ಹೆಸರಾಗಿದ್ದು ಕರಾವಳಿ ಭಾಗ ಒಂದಿಷ್ಟು ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲೂ ಸಮುದಾಯ ನಿರ್ಣಾಯಕವಾಗಿದೆ. ಆದರೆ ಸರ್ಕಾರದ ಸವಲತ್ತುಗಳನ್ನು ಪಡೆಯುವ ಜಾಗೃತಿ ಸಮುದಾಯದವರಲ್ಲಿ ಕಡಿಮೆ ಇದೆ. ತುಮಕೂರಿನ ಕುರುಬ ಸಮುದಾಯ ಸಂಘಟನೆಗಳು ಅನೇಕ ಒಳ್ಳೆಯ ಕಾರ್ಯಮಾಡುತ್ತಿದ್ದು, ನೂತನ ಕನಕಭವನಕ್ಕೆ ಅಗತ್ಯವಾದ ಭೋಜನಾಲಯ ನಿರ್ಮಾಣಕ್ಕೆ ಸಹಕರಿಸುವ ಭರವಸೆ ನೀಡಿದರು.
ರೆಡ್ಕ್ರಾಸ್ ರಾಷ್ಟಿçÃಯ ಮಂಡಳಿ ಸದಸ್ಯ ಎಸ್.ನಾಗಣ್ಣ ಅವರು ಸಮಾರಂಭ ಉದ್ಘಾಟಿಸಿ ಮಾತನಾಡಿ ತುಮಕೂರು ಜಿಲ್ಲಾ ಕೇಂದ್ರದಲ್ಲಿ ಸಮುದಾಯದ ಆಸ್ತಿಯೆಂದರೆ ಹಾಸ್ಟೆಲ್ಶಿಕ್ಷಣ ಸಂಸ್ಥೆ ಬಿಟ್ಟರೆ ಬೇರೆ ಇಲ್ಲ. ಜಿಲ್ಲೆಯ ಹಲವೆಡೆ ಕನಕಭವನಗಳು ಸಂಪೂರ್ಣಗೊಳ್ಳದೆ ನನೆಗುದಿಗೆ ಬಿದ್ದಿವೆ. ಸಮಾಜದವರು ಶೈಕ್ಷಣಿಕವಾಗಿ ಆರ್ಥಿಕವಾಗಿ ಸದೃಢರಾಗಿ ಜಾಗೃತರಾಗದಿದ್ದರೆ ಭವಿಷ್ಯ ಕಷ್ಟವಿದೆ. ಸಿದ್ದರಾಮಯ್ಯ ಅವರಂತಹ ದೂರದೃಷ್ಟಿ ಸಾಮಾಜಿಕ ಕಳಕಳಿಯ ನಾಯಕರು ಕರ್ನಾಟಕಕ್ಕೆ ಅನಿವಾರ್ಯವಾಗಿದೆ ಎಂದರು.
ಶಾಸಕ ಜಿ.ಬಿ. ಜ್ಯೋತಿಗಣೇಶ್ ಮುಖ್ಯ ಅತಿಥಿಯಾಗಿ ಮಾತನಾಡಿ ಯಾವುದೇ ಒಂದು ಸಮುದಾಯದಿಂದ ಜನಪ್ರತಿನಿಧಿಗಳಾಗಲು ಸಾಧ್ಯಇಲ್ಲ. ಈ ಬಾರಿ ಚುನಾವಣೆಯಲ್ಲಿ ಸಮಾಜ ಬೆಂಬಲಿಸಿದೆ. ಕನಕ ಸಮುದಾಯ ಭವನಕ್ಕೆ ಹಿಂದೆ ೧೫ ಲಕ್ಷ ನೀಡಿದ್ದುಹೆಚ್ಚುವರಿ ೧೦ ಲಕ್ಷ ಅನುದಾನ ಕೊಡುವ ಭರವಸೆ ನೀಡಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ ರಾಜ್ಯದಲ್ಲಿ ೩ನೇ ಅತಿದೊಡ್ಡ ಸಮುದಾಯವಾಗಿದ್ದರೂ ರಾಜಕೀಯವಾಗಿ ಪೂರ್ಣ ಪ್ರಮಾಣದಲ್ಲಿ ಮುನ್ನೆಲೆಗೆ ಬರಲು ಸಾಧ್ಯವಾಗಿಲ್ಲ. ಅವಕಾಶವಿರುವೆಡೆ ಸಮುದಾಯದ ನಾಯಕರನ್ನು ಬೆಳೆಸುವ ಕಾರ್ಯ ಮಾಡಬೇಕು. ಔದ್ಯೋಗಿಕ, ಆರ್ಥಿಕ ಸಬಲತೆ ಸಮುದಾಯದವರಿಗೆ ಬರಬೇಕಿದೆ ಎಂದು ಸಲಹೆ ನೀಡಿದರು.
ರೇವಣಸಿದ್ದೇಶ್ವರ ಮಠದ ಬಿಂದುಶೇಖರ್ ಒಡೆಯರ್ ಸ್ವಾಮೀಜಿ, ಕಾಳಿದಾಸ ವಿದ್ಯಾವರ್ದಕ ಸಂಘದ ಅಧ್ಯಕ್ಷ ಮೈಲಪ್ಪ, ಪತ್ತಿನ ಸಹಕಾರಿ ಅಧ್ಯಕ್ಷ ಇಂದ್ರಕುಮಾರ್, ಉಪಾಧ್ಯಕ್ಷ ಯೋಗೀಶ್, ನಿರ್ದೇಶಕರುಗಳು, ಬಿಜೆಪಿ ಮಧುಗಿರಿ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ್, ರಾಜ್ಯ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷ ಟಿ.ಎನ್.ಮಧುಕರ್, ಪಾಲಿಕೆ ಸದಸ್ಯರುಗಳಾದ ಲಕ್ಷಿö್ಮÃನರಸಿಂಹರಾಜು, ನಳಿನಾ, ಮಂಜುನಾಥ್ ಮಾಜಿ ಸದಸ್ಯ ಟಿ.ಎನ್.ಮಹೇಶ್, ಶಂಕರ್, ಟಿ.ಇ.ರಘುರಾಂ, ಸುರೇಶ್, ಧರ್ಮರಾಜ್, ಸುನೀತಾ ಸೇರಿದಂತೆ ಸಮುದಾಯ ಸಂಘಟನೆಗಳ ಹಲವರು ಉಪಸ್ಥಿತರಿದ್ದರು.