ಶಹಾಬಾದ ಗಣಿಸಿರಿ ನಾಡಿನಲ್ಲಿ ಅದ್ದೂರಿಯಾಗಿ ಜರುಗಿದ ತಾಲ್ಲೂಕ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ನಗರದ ಶ್ರೀ ಶರಣಬಸವೇಶ್ವರ ಜ್ಞಾನ ವಿಕಾಸ ಪೀಠ ಗಂಗಮ್ಮ ಶಾಲೆಯ ಆವರಣದಲ್ಲಿ ಸಮ್ಮೇಳನ ಜರಗಿತು.ಬೆಳಗ್ಗೆ ರಾಷ್ಟ್ರ ಮತ್ತು ನಾಡ ಧ್ವಜವನ್ನು ಧ್ವಜಾರೋಹಣ ಕಾರ್ಯಕ್ರಮವು ತಾಲ್ಲೂಕ ತಹಶೀಲ್ದಾರ್ ಜಗದೀಶ್ ಚೌರ್ ಹಾಗೂ ನಗರಸಭೆ ಅಧ್ಯಕ್ಷರಾದ ಚಂಪಾಪಬಾಯಿ ರಾಜು ಮಿಸ್ತ್ರಿ ನೆರವೇರಿಸಿದರು. ನಂತರ ಬಸವೇಶ್ವರ ವೃತ್ತದಿಂದ ಶ್ರೀ ಶರಣಬಸವೇಶ್ವರ ಜ್ಞಾನ ವಿಕಾಸ ಪೀಠದವರೆಗೆ ಸಮ್ಮೇಳನದ ಸರ್ವಾಧ್ಯಕ್ಷರಾದ ಹೆಚ್ ಬಿ ತೀರ್ಥೆ ಅವರನ್ನು ಮೆರೆವಣಿಗೆ ಮೂಲಕ ಅದ್ದೂರಿಯಾಗಿ ಬರಮಾಡಿಕೊಂಡರು. ಮೆರವಣಿಗೆಯಲ್ಲಿ ಡೊಳ್ಳು, ಹಲಿಗೆ, ಲೇಜೀಮ, ಕೋಲಾಟ ಶಾಲಾ ಕಾಲೇಜು ವಿದ್ಯಾರ್ಥಿಗಳು ಶಿಕ್ಷಕರು ಮಹಿಳೆಯರು ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರವಣಿಗೆಗೆ ಮೆರಗು ಮೂಡಿಸಿದವು.ತಾಲ್ಲೂಕ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವು ಮಾಜಿ ಜಿಲ್ಲಾ ಪಂಚಾಯತ ವಿರೋಧ ಪಕ್ಷದ ನಾಯಕರಾದ ಶಿವಾನಂದ ಪಾಟೀಲ ಜ್ಯೋತಿ ಬೆಳಗುವ ಮೂಲಕ ಸಮ್ಮೇಳನ್ನು ಉದ್ಘಾಟಿಸಿದರು. ವೇದಿಕೆ ಮೇಲೆ ಕಸಾಪ ಜಿಲ್ಲಾ ಅಧ್ಯಕ್ಷರಾದ ವಿಜಯಕುಮಾರ ಪಾಟೀಲ ತೆಗಲತಿಪ್ಪಿ, ಶಹಾಬಾದ ಕಸಾಪ ಅಧ್ಯಕ್ಷ ಶರಣಬಸಪ್ಪ ಕೋಬಾಳ, ಮರಿಯಪ್ಪ ಹಳ್ಳಿ, ಡಾ. ಎಂ ಎಂ.ರಶೀದ್, ಡಿವೈಎಸ್ಪಿ ಶಂಕರ್ ಗೌಡ ಪಾಟೀಲ, ಡಾ. ಕೆ. ಗುರುಲಿಂಗಪ್ಪ, ಮಲ್ಲಿನಾಥ ರಾವುರ, ಶಶಿಧರ ಬಿರಾದಾರ, ವಿಜಯಲಕ್ಷ್ಮೀ ಹೇರೂರು, ಸೈಯದ್ ಯುನುಶ ಅಲಿ, ಡಾ.ವೀರಣ್ಣಾ, ಶಿವಪುತ್ರ ಕರಣಿಕ, ಭೀಮಶಂಕರ್ ಮುಟ್ಡತ್ತಿ, ಭೀಮಾಶಂಕರ ಖೆಣಿ, ಕನ್ನಡ ಅಣವೀರ ಇಂಗಿನಶೆಟ್ಟಿ, ವಿಜಯಕುಮಾರ ಮುಟ್ಟತ್ತಿ, ನಿರಂಜನ ಗೊಳೇದ್, ಮೃತ್ಯುಂಜಯ ಹಿರೇಮಠ, ಗುಂಡಮ್ಮ ಮಡಿವಾಳ ಸೇರಿದಂತೆ ನಗರಸಭೆ ಸದಸ್ಯರು ಹಲವಾರು ಗಣ್ಯರು ವೇದಿಕೆ ಮೇಲೆ ಉಪಾಸ್ಥಿತರಿದ್ದರು. ಸಮ್ಮೇಳನದ ಉಪನ್ಯಾಸಗೋಷ್ಠಿಯನ್ನು ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯ ಸಹಾಯಕ ಪ್ರಾಧ್ಯಾಪಕರಾದ ಪ್ರೋ, ಅಪ್ಪುಗೇರೆ ಸೋಮಶೇಖರ ಅವರು ನಡೆಸಿಕೊಟ್ಟರು. ಸಮ್ಮೇಳನದ ಸರ್ವ ಅಧ್ಯಕ್ಷರಾದ ಎಚ್ ಡಿ ತೀರ್ಥ ಅವರ ಬದುಕು ಬರಹ ಬಗ್ಗೆ ಮಲ್ಲಿನಾಥ್ ಪಾಟೀಲ್ ಪರಿಚಯ ಮಾತುಗಳನ್ನು ಆಡಿದರು. ಕವಿಗೋಷ್ಠಿಯಲ್ಲಿ ಹಲವಾರು ಕವಿಗಳು ಪ್ರಸ್ತುತ ಪಡಿಸಿದರು. ಸಿದ್ದಲಿಂಗ ಬಾಳಿ, ನಟರಾಜ ಲಾಡೆ, ಹನುಮಂತರಾಯ ಇಂಗಿನಶೆಟ್ಟಿ, ನಾಗಣ್ಣ ರಾಂಪುರೆ, ಸ್ವಾಗತಿಸಿದರು ವಾಸುದೇವ ಚವ್ಹಾಣ್ ನಿರೂಪಿಸಿದರು.ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಗೌರವ ಸನ್ಮಾನ ಮತ್ತು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಸಪದ ಪದಾಧಿಕಾರಿಗಳು ಸಾಬಾದಿನ ಗಣ್ಯರು ಸಾರ್ವಜನಿಕರು ಸಾಲ ಕಾಲೇಜು ವಿದ್ಯಾರ್ಥಿಗಳು ಶಿಕ್ಷಕರು ಸರ್ಕಾರಿ ನೌಕರರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಿದರು. ರಾಜು ಕೋಬಾಳ, ಧಶರಥ ಕೊಟನೂರ ಸಂಗಡಿಗರಿಂದ ಸಂಗೀತ ಕಾರ್ಯಕ್ರಮಗ ನಡೆಸಿಕೊಟ್ಟರು.