ವಿದ್ಯಾರ್ಥಿಗಳಿಗೆ ಜ್ಞಾನದ ಹಸಿವು ಇರಬೇಕು
ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಮಕ್ಕಳಿಗೆ ತಾವು ಚೆನ್ನಾಗಿ ಓದಬೇಕು, ಶಿಕ್ಷಿತರಾಗಿ ಜೀವನದಲ್ಲಿ ಉನ್ನತ ಮಟ್ಟಕ್ಕೇರಬೇಕೆಂಬ ಛಲ ಇರಬೇಕು. ಹೀಗೆ ಶಿಕ್ಷಣ ಮುಂದುವರಿಸಲು ಮಕ್ಕಳಿಗೆ ಓದಿನ, ಜ್ಞಾನದ ಹಸಿವು ಇರಬೇಕು. ಈ ಹಸಿವು ಇದ್ದಾಗ ಶಿಕ್ಷಣದಲ್ಲಿಯೂ ಸಾಧನೆ ಮಾಡಲು ಸಾಧ್ಯ ಎಂದು ಉಧ್ಯಮಿ ಹಾಗೂ ಮುಖಂಡ ಕೆ ಬಿ ಬೋರೇಗೌಡ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹೆಬ್ಬೂರಿನಲ್ಲಿ ಆಯೋಜಿಸಿದ್ದ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿ ಮತನಾಡಿದರು. ಮಕ್ಕಳು ತಮ್ಮ ಬದುಕಿನಲ್ಲಿ ಸಾಧನೆ ಮಾಡಿ, ಉನ್ನತ ಮಟ್ಟಕ್ಕೇರಿದರೆ, ಅದಕ್ಕೆ ಮುಖ್ಯ ಕಾರಣ ವಿದ್ಯಭ್ಯಾಸ ನೀಡುವ ಗುರುಗಳೇ ಆಗಿರುತ್ತಾರೆ. ಹಾಗಾಗಿ ಇಂದಿನ ಮಕ್ಕಳು ಮುಂದೆ ದೊಡ್ಡವರಾದ ಮೇಲೆ ಒಂದಲ್ಲಾ ಒಂದು ರೀತಿಯಲ್ಲಿ ಗುರುಗಳ, ಈ ಸಮಾಜದ ಋಣ ತೀರಿಸಬೇಕು. ನಾನೂ ಸಹ ವಿದ್ಯಾಭ್ಯಾಸ ಮುಂದುವರಿಸಿ ಇಂದು ಒಬ್ಬ ಎಂಜಿನಿಯರ್ ಮತ್ತು ಮಧ್ಯಮಿಯಾಗಿದ್ದರೆ ಅದಕ್ಕೆ ಮುಖ್ಯ ಕಾರಣ ನನ್ನ ಶಿಕ್ಷಕರೇ ಆಗಿದ್ದಾರೆ ಎಂದರು.
ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಹೆಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ. ರಾಜಶೇಖರ್ ರವರು ಮಾತನಾಡಿ, ಶಿಕ್ಷಣ ಪಡೆಯುವುದು ಕೇವಲ ಉದ್ಯೋಗಕ್ಕಾಗಿ ಅಲ್ಲ, ಬದುಕಿನ ವಿಕಾಸಕ್ಕೆ, ಶಿಕ್ಷಣ ಬದುಕಿನ ಕಲೆಯನ್ನು ತಿಳಿಸುತ್ತದೆ. ಮೊಬೈಲ್ ಗೀಳಿಗೆ ಒಳಗಾಗಿರುವ ಇಂದಿನ ಮಕ್ಕಳಿಗೆ ಮಾನಿಸಕ ವಿಕಸನ ಅಗತ್ಯವಿದೆ. ಪೋಷಕರು ಮಕ್ಕಳು ಇದನ್ನೆ ಓದಬೇಕು ಅದನ್ನೇ ಓದಬೇಕು ಎಂದು ಒತ್ತಡ ಹಾಕದೆ ಅವರೇ ಸ್ವತಂತ್ರವಾಗಿ ತಮ್ಮ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳಲು ಬಿಡಬೇಕು. ಬೋರೇಗೌಡರಂತಹ ವ್ಯಕ್ತಿಗಳ ಈ ನಮ್ಮ ಸಮಾಜದಲ್ಲಿ ಹೆಚ್ಚಾಗಬೇಕು ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಹೆಬ್ಬೂರು ಪೋಲೀಸ್ ಠಾಣೆಯ ಪಿಎಸ್ಐ ಭೈರೇಗೌಡ ಮಾತನಾಡಿ, ವಿದ್ಯಾರ್ಥಿಗಳು ಟ್ರಾಫಿಕ್ ರೂಲ್ಸ್ ಚೆನ್ನಾಗಿ ಅರಿತುಕೊಂಡು ವಾಹನ ಚಲಾಯಿಸಬೇಕು. ಕಾನೂನುಬಾಹಿರ ಚಟುವಟಿಕೆಗಳಿಂದ ಆದಷ್ಟು ದೂರವಿರಬೇಕು. ಪೋಷಕರಿಗೆ ಒಳ್ಳೆಯ ಹೆಸರು ತಂದುಕೊಟ್ಟು, ಸಮಾಜದಲ್ಲಿ ಮಾದರಿಯಾಗಿ ಬೆಳೆಯಬೇಕು ಎಂದು ಕರೆ ನೀಡಿದರು
ವಿದ್ಯಾರ್ಥಿಗಳಿಗೆ ಜ್ಞಾನದ ಹಸಿವು ಇರಬೇಕು
Leave a comment
Leave a comment