ಶ್ರೀದೇವಿ ವಿದ್ಯಾ ಮಂದಿರ ವಿದ್ಯಾರ್ಥಿಗಳು: ಶೇ.೮೩.೩೩% ಉತ್ತಮ ಸಾಧನೆ
ತುಮಕೂರು:

ನಗರದ ಶಿರಾ ರಸ್ತೆಯ ಶ್ರೀದೇವಿ ವಿದ್ಯಾ ಮಂದಿರದ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಫಲಿತಾಂಶವನ್ನು ಪಡೆದಿದ್ದಾರೆ. ವಿದ್ಯಾರ್ಥಿಯಾದ ದೀಪಕ್.ಸಿ, ೫೯೫ (೯೫.೨%) ಸುಹಾಲಿಯ ಫರ್ವಿನ್, ೫೯೩ (೯೪.೮%), ಲಿಖಿತ.ಆರ್ ೫೭೨(೯೧.೫%) ಹರಿಕೃಷ್ಣ ಐ.ಆರ್. ೫೬೯ (೯೧.೦೪%) ಗಗನ್.ಎಂ ೫೬೪ (೯೦.೨%) ಸೃಷ್ಠಿ.ಡಿ ೫೪೪ (೮೭.೦೪%) ಹರೀಶ್ಕುಮಾರ್. ಆರ್ ೫೪೩ (೮೬.೮%) ವಾಣಿ.ಜೆ ೫೪೨ (೮೬.೭%) ಡಿಸ್ಟಿಂಷನ್ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಪ್ರಥಮ ದರ್ಜೆಯಲ್ಲಿ ಸುಹಾಸ್.ಜೆ ೫೧೦(೮೧.೬%), ಹರ್ಷಿತ.ಆರ್ ೪೯೮ (೭೯.೬%), ಯೋಗನಂದ.ಬಿ.ಎಲ್ ೪೩೯ (೭೦.೨%), ಪುಷ್ಪ.ವಿ, ೪೦೭ ( ೬೫.೧೨%), ದೀಕ್ಷಿತ್ ೪೦೭ (೬೫.೧೨%) ಸಾನೀಯ ಫೀರ್ದೋಸ್ ೪೦೦ (೬೪.೦%) ಅಂಕಗಳನ್ನು ಪಡೆದು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಆಯ್ಕೆಯಾಗಿದ್ದಾರೆ. ಹಾಗೂ ಡಿಸ್ಟಿಂಕ್ಷನ್ ೦೮, ಪ್ರಥಮ ದರ್ಜೆ ೦೬, ಒಟ್ಟಾರೆಯಾಗಿ ಶೇ.೮೩.೩೩%ರಷ್ಟು ಉತ್ತೀರ್ಣರಾಗಿದ್ದಾರೆ.
ಶ್ರೀ ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಮುಖ್ಯಸ್ಥರಾದ ಡಾ. ಎಂ.ಆರ್.ಹುಲಿನಾಯ್ಕರ್, ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷರು ಶ್ರೀಮತಿ ಶಾಂತದುರ್ಗಾದೇವಿ, ಶ್ರೀದೇವಿ ವೈದ್ಯಕೀಯ ನಿರ್ದೇಶಕರಾದ ಡಾ. ರಮಣ್ ಎಂ. ಹುಲಿನಾಯ್ಕರ್, ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್. ಪಾಟೀಲ್, ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಡಾ.ಲಾವಣ್ಯ, ಅಂಬಿಕಾ ಎಂ ಹುಲಿನಾಯ್ಕರ್ ಹಾಗೂ ಮುಖ್ಯಶಿಕ್ಷಕರಾದ ಆರ್. ವಿಜಯ್ಕುಮಾರ್, ಬಿ.ಕೆ.ಬಸವರಾಜು ಹಾಗೂ ಬೋಧಕ- ಬೋಧಕೇತರ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.



