
ತುಮಕೂರು : ಬೆಂಗಳೂರಿನಲ್ಲಿ ನಡೆದ “ದಿ ಕೋಡಿಂಗ್ ರೇಂಜರ್ಸ್” ಸ್ಪರ್ಧೇಯಲ್ಲಿ ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ರವಿತೇಜ ಟಿ ಎಸ್, ಅಮೋಘ್ ಜಿ, ಲಿಯೋನೆಲ್ ಪ್ರಿನ್ಸ್ಟನ್ ಜೆ, ಆಫ್ರೀಡ್ ಬಿಗ್ ಯು, ಮಲ್ಲಿಕಾರ್ಜುನ ಎಸ್ ಬಿ, ಐಶ್ವರ್ಯ ಎ, ಕರಣ್ ಭಾರದ್ವಾಜ್ , ಮನೋಜ್ ಕುಮಾರ್ ರವರು “ಯೂಟ್ಯೂಬ್ ಚಾಂಪಿಯನ್” ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಾಫ್ಟ್ ಸ್ಕಿಲ್ಸ್ ತರಬೇತಿ ಸಂಸ್ಥೆ, ಟಿ.ಎನ್.ಎಸ್ ಇಂಡಿಯಾ ಫೌಂಡೇಶನ್ ಹಾಗೂ ಸಂಚಾರಿ ಚಕ್ರವರ್ತಿ ಆಯೋಜನೆಯಲ್ಲಿ ೨೦೨೩ ರ ರಾಷ್ಟಿçÃಯ ಯುವ ದಿನವನ್ನು ಆಚರಿಸಲಾಯಿತು. ಈ ದಿನದ ಪ್ರಯುಕ್ತವಾಗಿ ಟಿ.ಎನ್.ಎಸ್ ಇಂಡಿಯಾ ಫೌಂಡೇಶನ್ರವರು ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದರು. ಈ ಸ್ಪರ್ಧೆಗಳಲ್ಲಿ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗಿಯಾಗಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂ.ಎಸ್ ರವಿಪ್ರಕಾಶ, ಡೀನ್ ಡಾ. ರೇಣುಕಾ ಲತಾ, ನಿಯೋಜನೆ ಅಧಿಕಾರಿ ಡಾ. ಅಶೋಕ ಮೆಹ್ತಾ ಹಾಗೂ ಆಡಳಿತ ಮಂಡಳಿಯು ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.