ತುಮಕೂರು : ಕ್ರೀಡೆಯಲ್ಲಿ ಸೋಲು ಗೆಲುವು ಸರ್ವೇ ಸಾಮಾನ್ಯ ಕ್ರೀಡಾಪಟುಗಳು ಕ್ರೀಡಾ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಲಿಂಗೇಗೌಡ ಸಲಹೆ ನೀಡಿದರು.
ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ೨೦೨೩-೨೪ನೇ ಸಾಲಿನÀ ಸಾಹೇ ವಿವಿ ಅಂತರ್ ಕಾಲೇಜು ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತಾನಾಡಿದ ಅವರು, ವಿಶ್ವವಿದ್ಯಾಲಯದ ೫ ಕ್ಯಾಂಪಸ್ಗಳಲ್ಲೂ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂಎಸ್.ರವಿಪ್ರಕಾಶ ಮಾತನಾಡಿ, ಕಳೆದ ವರ್ಷ ನಮ್ಮ ಕ್ಯಾಂಪಸ್ನಲ್ಲಿ ಚೆಸ್ ಪಂದ್ಯಾವಳಿ ನಡೆಸಲಾಗಿತ್ತು.ಈ ಬಾರಿ ಥ್ರೋಬಾಲ್ ಸ್ಪರ್ಧೆಗಳನ್ನ ಆಯೋಜಿಸಿದ್ದು, ಕ್ರೀಡಾಕೂಟದಲ್ಲಿ ೫ ತಂಡಗಳು ಭಾಗವಹಿಸಿವೆ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮನೋಭಾವ ಬೆಳಿಸಿಕೊಳ್ಳಿ ಎಂದರು.
ಇದೇ ಸಂದರ್ಭದಲ್ಲಿ ಎಸ್ಎಸ್ಐಟಿ ಕಾಲೇಜಿನ ಕ್ರೀಡಾಪಟುಗಳಿಗೆ ಟೀಶರ್ಟ್ ವಿತರಿಸಲಾಯಿತು. ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜು, ಪ್ಯಾರಾ ಮೆಡಿಕಲ್ ಕಾಲೇಜು, ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯ,ದಂತ ವೈದ್ಯಕೀಯ ಕಾಲೇಜು, ಸಿದ್ಧಾರ್ಥ ಮೆಡಿಕಲ್ ಕಾಲೇಜು ಮತ್ತು ಸಂಶೋಧನ ಕೇಂದ್ರ ಟಿ ಬೇಗೂರು ಕಾಲೇಜಿನ ತಂಡಗಳು ಭಾಗವಹಿಸಿದ್ದವು.
ಸಾಹೇ ವಿಶ್ವವಿದ್ಯಾಲಯದ ರಿಜಿಸ್ಟಾçರ್ ಡಾ.ಎಂ.ಜೆಡ್.ಕುರಿಯನ್, ಕ್ರೀಡಾಕೂಟದ ಸಂಯೋಜಕರು ಹಾಗೂ ಎಂಸಿಎ ವಿಭಾಗದ ಸಹಾಯಕ ಪ್ರಾದ್ಯಾಪಕ ಮೋಹನ್ ಕುಮಾರ್ ಟಿ.ಪಿ, ಆಂತರಿಕ ಗುಣಮಟ್ಟ ಮತ್ತು ಭರವಸೆ ವಿಭಾಗದ ಡಾ ಪ್ರಕಾಶ್, ಕೋಚ್ ದಿವಾಕರ್ ವಿವಿಧ ವಿಭಾಗದ ಪ್ರಾದ್ಯಾಪಕರು ಹಾಗೂ ಕ್ರೀಡಾ ಪಟುಗಳು ಭಾಗವಹಿಸಿದ್ದರು
ವಿದ್ಯಾರ್ಥಿಗಳು ಕ್ರೀಡಾ ಆಸಕ್ತಿ ಬೆಳಿಸಿಕೊಳ್ಳಿ
Leave a comment
Leave a comment