ರಾಜ್ಯ ಸ್ಲಂ ನಿವಾಸಿಗಳ ಕುಂದು ಕೊರತೆಗಳ ಬಗ್ಗೆ ಮುಖ್ಯಮಂತ್ರಿಗಳೊAದಿಗೆ ಶೀಘ್ರ ಸಭೆ
-ಕೆ.ಎನ್.ರಾಜಣ್ಣ
ಇಂದು ಸ್ಲಂ ಜನಾಂದೋಲನ-ಕರ್ನಾಟಕ ಸಂಘಟನೆಯ ಪದಾಧಿಕಾರಿಗಳ ನಿಯೋಗವು ನೂತನ ಸಹಕಾರಿ ಸಚಿವರಾದ ಕೆ.ಎನ್.ರಾಜಣ್ಣನವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ರಾಜ್ಯ ಸ್ಲಂ ನಿವಾಸಿಗಳ ಕುಂದು ಕೊರತೆ ಸಭೆಯನ್ನು ಮಾನ್ಯ ಮುಖ್ಯಮಂತ್ರಿಗಳ ಜೊತೆ ನಿಗದಿಗೊಳಿಸಿಕೊಡುವಂತೆ ಸಮಾಲೋಚಿಸಿ ಇದೇ ಸಂದರ್ಭದಲ್ಲಿ ಅಭಿನಂದನೆಯನ್ನು ಸಲ್ಲಿಸಲಾಯಿತು
ನಿಯೋಗದೊಂದಿಗೆ ಮಾತನಾಡಿದ ಸಹಕಾರಿ ಸಚಿವರಾದ ಕೆ.ಎನ್.ರಾಜಣ್ಣರವರು ಸ್ಲಂ ನಿವಾಸಿಗಳ ಸಮಸ್ಯೆಗಳನ್ನು ಅತ್ತಿರದಿಂದ ಕಂಡಿದ್ದೇನೆ, ಕಾಂಗ್ರೇಸ್ ಪಕ್ಷ ನೀಡಿರುವ ೫ ಗ್ಯಾರಂಟಿಗಳನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಡೇರಿಸಲಿದೆ. ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯು ಚುನಾವಣೆಯಲ್ಲಿ ಸಂವಿಧಾನ ಉಳಿಸಿ ಬಹುತ್ವ ಕರ್ನಾಟಕ ರಕ್ಷಿಸಿ ಅಭಿಯಾನ ಕೈಗೊಂಡ ಪರಿಣಾಮ ಸ್ಲಂ ಜನರಲ್ಲಿ ಜಾಗೃತಿ ಉಂಟಾಗಿ ಸಂವಿಧಾನ ರಕ್ಷಿಸುವ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಲು ಸಾಧ್ಯವಾಗಿದೆ. ಹಾಗೂ ಕಾಂಗ್ರೇಸ್ ಪಕ್ಷದ ಪ್ರಣಾಳಿಕೆಯಲ್ಲಿ ಸ್ಲಂ ಜನರ ವಿಷಯಗಳನ್ನು ಬರುವಹಾಗೆ ಸಂಘಟನೆ ಮಾಡಿದೆ. ಹಾಗಾಗಿ ಸ್ಲಂ ಜನರ ಜ್ವಾಲಂತ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಮೊದಲ ಅಧಿವೇಶನ ಮುಗಿದ ನಂತರ ಸ್ಲಂ ಜನರ ಕುಂದು ಕೊರತೆ ಸಭೆ ನಿಗಧಿಗೊಳಿಸಿ ಬೇಡಿಕೆಗಳನ್ನು ಈಡೇರಿಸುವಂತ ಕೆಲಸ ಮಾಡುತ್ತೇವೆಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಸ್ಲಂ ಜನಾಂದೋಲನ ಕರ್ನಾಟಕ ನಿಯೋಗಕ್ಕೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಿಯೋಗದಲ್ಲಿ ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ವಹಿಸಿ ರಾಜ್ಯ ಸ್ಲಂ ನಿವಾಸಿಗಳ ಕುಂದು ಕೊರತೆ ಸಭೆಗೆ ಅವಕಾಶ ಕಲ್ಪಿಸುವಂತೆ ಗಮನ ಸೆಳೆದರು. ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳಾದ ಅರುಣ್, ಶಂಕ್ರಯ್ಯ, ತಿರುಮಲಯ್ಯ, ಕೃಷ್ಣಮೂರ್ತಿ, ಗಣೇಶ್, ರಂಗನಾಥ, ಜಾಬೀರ್ಖಾನ್, ಮುಬಾರಕ್, ಮೋಹನ್ ಟಿ,ಆರ್ ಮುಂತಾದವರು ಪಾಲ್ಗೊಂಡಿದ್ದರು.



