ಎಸ್ಎಸ್ಐಟಿ ಕಾಲೇಜಿಗೆ ಜಪಾನ್ ದೇಶದ ಕಂಪನಿಯ ನಿಯೋಗ ಭೇಟಿ
ಜಪಾನ್ ದೇಶದಲ್ಲಿ ಉದ್ಯೋಗಾವಕಾಶ ಮತ್ತು ಶೈಕ್ಷಣಿಕ ವಿಷಯ ಚರ್ಚೆ
ತುಮಕೂರು: ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯಕ್ಕೆ ಜಪಾನ್ ದೇಶದ ರಾಜ್ ಗ್ರೂಪ್ನ ಸಂಸ್ಥಾಪಕ ಮತ್ತು ಅಧ್ಯಕ್ಷ ಅನಿಲ್ ರಾಜ್ ನಿಯೋಗ ಭೇಟಿ ನೀಡಿ, ಜಪಾನ್ನಲ್ಲಿ ಉದ್ಯೋಗಾವಕಾಶ ಮತ್ತು ಶೈಕ್ಷಣಿಕ ವಿಚಾರವನ್ನು ಚರ್ಚಿಸಲಾಯಿತು.
ಕಾಲೇಜಿನ ಶೈಕ್ಷಣಿಕ ಚಟುವಟಿಕೆ, ಉದ್ಯೋಗಾವಕಾಶಗಳು, ಕೈಗಾರಿಕೋದ್ಯಮ ವಿಚಾರ ವಿನಿಮಯ, ಸಂಶೋಧನಾ ಕ್ಷೇತ್ರದಲ್ಲಿ ನಡೆದ ಹಲವಾರು ಪ್ರಾಜೆಕ್ಟ್ಗಳು ಸೇರಿದಂತೆ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯುವ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳ ಕುರಿತು ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ ಜಪಾನ್ ದೇಶದ ರಾಜ್ ಗ್ರೂಪ್ನ ನಿಯೋಗಕ್ಕೆ ಮಾಹಿತಿ ನೀಡಿದರು.
ಜಪಾನ್ ರಾಷ್ಟçದ ರಾಜ್ ಗ್ರೂಪ್ನ ಸಂಸ್ಥಾಪಕ ಮತ್ತು ಅಧ್ಯಕ್ಷ ಅನಿಲ್ ರಾಜ್ ಮಾತನಾಡಿ, ಸಾಮಾಜಿಕ ಕಾಳಜಿ ಸಲುವಾಗಿ ಈ ಕಾಲೇಜುನ್ನು ಆಯ್ಕೆ ಮಾಡಿಕೊಂಡಿದ್ದು, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಜಪಾನ್ ದೇಶದಲ್ಲಿ ಭಾರತೀಯರಿಗೆ ಹೆಚ್ಚು ಬೇಡಿಕೆ ಇದೆ. ಹಾಗಾಗಿ ಎಸ್ಎಸ್ಐಟಿ ಕಾಲೇಜಿನೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಇಂಗಿತ ವ್ಯಕ್ತಪಡಿಸಿದರು.
ದ್ವಿತೀಯ ಮತ್ತು ತೃತೀಯ ಎಂಜಿನಿಯರಿAಗ್ ವಿಭಾಗದ ವಿದ್ಯಾರ್ಥಿಗಳಿಗೆ ಜಪಾನ್ ಭಾಷೆ ಪ್ರಸ್ತಾಪಿಸಿದರೆ ಅನುಕೂಲವಾಗಲಿದೆ. ಅಲ್ಲದೇ ವಿದ್ಯಾರ್ಥಿಗಳಿಗೆ ಆನ್ಲೈನ್ ಮತ್ತು ಭೌತಿಕ ತರಗತಿಗಳನ್ನು ಆಯೋಜಿಸಿಕೊಡುವುದಾಗಿ ತಿಳಿಸಿದರು.
ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದ ಉದ್ಯೋಗಳಿಗೆ ವ್ಯಾಪಕವಾಗಿ ಜಪಾನ್ನಲ್ಲಿ ಬೇಡಿಕೆಯಿದೆ. ಜಪಾನ್ ದೇಶದಲ್ಲಿ ಶಿಕ್ಷಣ, ಸಂಸ್ಕೃತಿ, ಸಾಮಾಜಿಕ ಬದ್ಧತೆ ಮತ್ತು ಮಾಹಿತಿ ತಂತ್ರಜ್ಞಾನ ಬಗ್ಗೆ ತಿಳಿಯಲು ಎಸ್ಎಸ್ಐಟಿ ಕಾಲೇಜಿನ ವಿಭಾಗಗಳ ಎಲ್ಲಾ ಮುಖ್ಯಸ್ಥರು ಮತ್ತು ವಿಷಯ ತಜ್ಞರನ್ನು ಜಪಾನ್ ದೇಶಕ್ಕೆ ಅನಿಲ್ ರಾಜ್ ಆಹ್ವಾನಿಸಿದರು. ಮತ್ತು ಜಪಾನಿನ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು ಎಂದು ಅವರು ವಿವರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಸ್ ರವಿಪ್ರಕಾಶ, ಡೀನ್ (ಶೈಕ್ಷಣಿಕ) ಡಾ.ರೇಣುಕಾಲತಾ, (ಡೀನ್) ಪರೀಕ್ಷಾಂಗ ಡಾ.ಎಂ.ಕರುಣಾಕರ್ ಮತ್ತು ಎಲ್ಲಾ ವಿಭಾಗದ ಮುಖ್ಯಸ್ಥರು, ಶ್ರೀ ಸಿದ್ಧಾರ್ಥ ದಂತ ವೈದ್ಯಕೀಯ ಕಾಲೇಜಿನ ಉಪಪ್ರಾಂಶುಪಾಲರಾದ ಡಾ.ನಾಗಲಕ್ಷಿö್ಮÃ, ರಾಜ್ ಗ್ರೂಪ್ನ ಭಾರತೀಯ ನಿರ್ದೇಶಕರಾದ ಅಜಯ್ ಕುಮಾರ್ ಭಾಗವಹಿಸಿದ್ದರು.