ತುಮಕೂರು:ನಗರದ ಶ್ರೀ ಸಿದ್ಧಾರ್ಥ ಎಂಜಿನಿಯರಿoಗ್ ಕಾಲೇಜಿನ ಕ್ಯಾoಪಸ್ನಲ್ಲಿ ಏರ್ಪಟ್ಟಿರುವ ಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಕಲಾವೈಭವ-2024ಕ್ಕೆ ಇಂದುವಿದ್ಯಕ್ತವಾಗಿ ಚಾಲನೆ ನೀಡಲಾಯಿತು.
ಎಸ್ಎಸ್ಐಟಿ ಕಾಲೇಜಿನ ಹಸಿರು ಕ್ಯಾಂಪಸ್ನ ಬಯಲುಮಂದಿರಲ್ಲಿ ಏರ್ಪಟ್ಟ ಕಾರ್ಯಕ್ರಮಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿದ ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಕನ್ನಿಕಾ ಪರಮೇಶ್ವರಿ ಪಿಎಚ್ಡಿ ಪದವೀಧರರಿಗೆ ಅಭಿನಂದಿಸಿದರು.
ನಂತರ ಮಾತಣಾಡಿದ ಅವರು, ಕಲೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಗೆಲುವಿಗಿಂತ ಭಾಗವಹಿಸುವಿಕೆಯತ್ತ ಹೆಚ್ಚು ಗಮನ ಕೊಡಬೇಕು. ಗೆಲುವು ಸಿಗದವರು ಮತ್ತೆ ಗೆಲುವಿನತ್ತ ಮತ್ತು ಗೆದ್ದವರು ತಮ್ಮ ಉನ್ನತೀಕರಣದ ಕಡೆಗೆ ಗಮನಹರಿಸಿ ಕಾರ್ಯಪ್ರವೃತ್ತರಾಗಬೇಕು ಎಂದರು.
ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಹೊಂದಾಣಿಕೆ, ನೆಮ್ಮದಿ ಮತ್ತು ಜನರೊಂದಿಗೆ ಬೆರೆಯುವ ಗುಣವನ್ನು ತುಂಬುತ್ತದೆ. ಮುಂದಿನ ವರ್ಷ ಕಲೋತ್ಸವ 25ರ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಸಂಪೂರ್ಣ ಸಹಕಾರವಿರುತ್ತದೆ ಎಂದು ಕನ್ನಿಕಾ ಪರಮೇಶ್ವರಿ ತಿಳಿಸಿದರು.
ಶಿಕ್ಷಣ ಸಂಸ್ಥೆಗಳಲ್ಲಿ ಕಲಾ ಉತ್ಸವ ನಡೆಯುವುದರಿಂದ ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳು ಅನಾವರಣಗೊಳ್ಳುತ್ತವೆ. ವಿದ್ಯಾರ್ಥಿಗಳು ಎಲ್ಲಾ ಕಾರ್ಯಕ್ರಮಗಳಲ್ಲಿ ತಪ್ಪದೆ ಪಾಲ್ಗೊಳ್ಳಬೇಕು.ಗೆಲುವು-ಸೋಲಿನ ಬಗ್ಗೆ ತಲೆಕೆಡಿಸಿಕೊಳ್ಳದೆ ಸ್ವರ್ಧೆಗಳಲ್ಲಿ ಭಾಗವಹಿಸಿ ಎಂದು ಅವರು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಮುಖ್ಯಅತಿಥಿಯಾಗಿದ್ದ ಸರಿಗಮಪ ಖ್ಯಾತಿಯ ಹಿನ್ನೆಲೆ ಗಾಯಕ ವಿದ್ವಾನ್ ಯಶವಂತ್ ಎಂ.ಜಿ ಮಾತನಾಡಿ, ಶೈಕ್ಷಣಿಕ ಪ್ರಗತಿಯಜೊತೆಗೆ ಸಾಂಸ್ಕೃತಿಕ ಕಲಾರುಚಿಯೂಇರಬೇಕು. ವಿದ್ಯಾರ್ಥಿಗಳು ವಿವಿಧಕಲೆಯಲ್ಲಿತಮ್ಮ ಪ್ರತಿಭೆ ಪ್ರದರ್ಶನ ಮಾಡಿಕೊಳ್ಳಲು ಕಾಲೇಜಿನಲ್ಲಿ ಸೂಕ್ತ ವೇದಿಕೆಗಳಿರುತ್ತವೆ. ಅದನ್ನು ಸೂಕ್ತವಾಗಿ ಬಳಸಿಕೊಳ್ಳಿ ಎಂದು ಪ್ರೋತ್ಸಾಹಿಸಿದರು.
SSIT ಸಾಂಸ್ಕೃತಿಕ ಕಾರ್ಯಕ್ರಮ
Leave a comment
Leave a comment