ಕಲ್ಬುರ್ಗಿ ನಗರದಲ್ಲಿಂದು ಎಸ್ ಆರ್ ಎನ್ ಮಹೇತ ಶಾಲೆಯ 32ನೇ ವಾರ್ಷಿಕೋತ್ಸವದ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದಂತ ಮಾರು ಸಿದ್ದರಾಧ್ಯ ಹೆಚ್ ಜೆ ಹೆಚ್ಚುವರಿ ರಿಜಿಸ್ಟರ್ ಜನರಲ್ ಕರ್ನಾಟಕ ಹೈಕೋರ್ಟ್ ಕಲಬುರ್ಗಿ ಪೀಠ ಇವರು ನೆರವೇರಿಸಿದರು ಗೌರವ ಅತಿಥಿಗಳಾಗಿ ್ಥಾನವನ್ನು ಅಲಂಕರಿಸಿದ ಡಿ ಕಿಶೋರ್ ಬಾಬು ಐಪಿಎಸ್ಪಿ ಮತ್ತು ಪ್ರಾಂಶುಪಾಲರು ಪೊಲೀಸ್ ತರಬೇತಿ ಕಾಲೇಜು ನಾಗನಳ್ಳಿ ಕಲಬುರ್ಗಿ ವಹಿಸಿಕೊಂಡಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕರಾದ ಪ್ರೀತಮೇತ ಮತ್ತು ಸಂಸ್ಥೆಯ ಟ್ರಸ್ಟ್ ಗಳಾದ ಚಕೋರ ಮೇಹೆತಾ ರ ವಹಿಸಿಕೊಂಡಿದ್ದರು.
ತದನಂತರ ಕಾರ್ಯಕ್ರಮ ಉದ್ದೇಶಿಸಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾರುಳು ಸಿದ್ದರಾಧ್ಯ ಹಚ್ಚಿ ಹೆಚ್ಚುವರಿ ರೆಜಿಸ್ಟರ್ ಜನರಲ್ ಕರ್ನಾಟಕ ಹೈಕೋರ್ಟ್ ಕಲ್ಬುರ್ಗಿ ಪೀಠ ಅವರು ಮಾತನಾಡುತ್ತಾ ಈಗಿನ ಕಾಲದಲ್ಲಿ ಮಕ್ಕಳನ್ನು ಯಾವ ರೀತಿ ತಯಾರಿ ಮಾಡಬೇಕೆನ್ನುವುದು ಈ ಶಾಲೆಯಲ್ಲಿ ಮಾಡುವ ಕಾರ್ಯ ಗಳನ್ನು ನೋಡುತ್ತಿದ್ದರೆ ಗೊತ್ತಾಗುತ್ತದೆ. ಪ್ರತಿಯೊಬ್ಬ ಯುವಕರಿಗೆ ಪದವಿ ಮುಗಿಸಿದ ತಕ್ಷಣ ಸರ್ಕಾರ ಹುದ್ದೆ ಕೊಡಲು ಆಗುವುದಿಲ್ಲ ಆದಕಾರಣ ಸ್ವಯಂ ಉದ್ಯೋಗವನ್ನ ಸೃಷ್ಟಿ ಮಾಡಿಕೊಳ್ಳಬೇಕು. ವಿವೇಕಾನಂದರ ವಾಣಿಯಂತೆ ಶಕ್ತಿಯೇ ಜೀವನ ದೌರ್ಬಲ್ಯವೇ ಸಾವು. ಪಾಲಕ ಪೋಷಕರಾದವರು ಮಕ್ಕಳನ್ನು ದುರ್ಬಲರನ್ನಾಗಿ ಮಾಡದೆ ಅವರನ್ನ ನಾಲ್ಕು ಕೋಣೆಗಳ ಮಧ್ಯೆ ಬೋಧನೆ ಮಾಡದೆ ವಿಶಾಲವಾದ ಸಮಾಜದಲ್ಲಿ ಅವರಿಗೆ ಸ್ವಾತಂತ್ರ್ಯ ನೀಡಿ ಅವರ ಜೀವನವನ್ನು ರೂಪಿಸುವ ಪ್ರಯತ್ನ ಮಾಡಬೇಕು ಎಂದರು. ಇದೇ ವೇಳೆ ಕಾರ್ಯಕ್ರಮ ಉದ್ದೇಶಿಸಿ ಡಿ .ಕಿಶೋರ್ ಬಾಬು ಐಪಿಎಸ್ ಎಸ್ ಪಿ ಮತ್ತು ಪ್ರಾಂಶುಪಾಲರು ಪೊಲೀಸ್ ತರಬೇತಿ ಕಾಲೇಜು ನಾಗನಳ್ಳಿ ಕಲಬುರ್ಗಿ ಮಾತನಾಡಿದರು.
ಶಾಲಾ ವಾರ್ಷಿಕ ವರದಿಯನ್ನು ಶಾಲೆಯ ಪ್ರಾಂಶುಪಾಲರಾದ ಪ್ರೀತಿ ಮೆಹ್ತಾ ಓದಿದರು, ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಮತ್ತು ಕ್ರೀಡೆಗಳಲ್ಲಿ ಜಿಲ್ಲಾ ಮಟ್ಟ ರಾಜ್ಯಮಟ್ಟ ವಿಭಾಗ ಮಟ್ಟ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಥಮ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಿ ಗೌರವಿಸಿದರು.
ತದನಂತರ ಎಲ್ ಕೆ ಜಿ ಯು ಕೆ ಜಿ ಮತ್ತು ಒಂದನೇ ತರಗತಿಯಿಂದ 10ನೇ ತರಗತಿ ಮಕ್ಕಳಿಂದ ರ ನೃತ್ಯ, ನಾಟಕ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು .
ಈ ಕಾರ್ಯಕ್ರಮದಲ್ಲಿ ಮಾರಲುಸಿದ್ದರಾಧ್ಯ ಹೆಚ್ಚುವರಿ ರಿಜಿಸ್ಟರ್ ಜನರಲ್ ಕರ್ನಾಟಕ ಹೈಕೋರ್ಟ್ ಕಲ್ಬುರ್ಗಿ ಪೀಠ, ಗೌರವ ಅತಿಥಿಗಳಾಗಿ ಆಗಮಿಸಿದ ಡಿ. ಕಿಶೋರ್ ಬಾಬು ಐಪಿಎಸ್, ಎಸ್.ಆರ್ ಎನ್ ಮೇಹೆತಾ ಮ್ಯಾನೇಜಿಂಗ್ ಡೈರೆಕ್ಟರಳಾದ ಪ್ರೀತಂ ಮೇಹೆತಾ, ಮ್ಯಾನೇಜಿಂಗ್ ಟ್ರಸ್ಟಿಗಳಾದ ಚಕೋರ ಮೇಹೆತಾ ಶಿಕ್ಷಕ ಸಿಬ್ಬಂದಿ ವರ್ಗ ವಿದ್ಯಾರ್ಥಿ ಪಾಲಕರು ಉಪಸ್ಥಿತರಿದ್ದರು.