ಅಫಜಲಪುರ:- ಪಟ್ಟಣದ ಜಗನ್ಮಾತೆ ಶ್ರೀ ಕಾಳಿಕಾ ದೇವಿ ಮಂದಿರದಲ್ಲಿ ಕಳೆದ ಶನಿವಾರದಂದು ಶ್ರೀಮದ್ ಮೂರುಝಾವಧೀಶ್ವರ ಮಠದ ಶ್ರೀ ಜಗದ್ಗುರು ಚಿಕ್ಕೇಶ್ವರ ಮಹಾಸ್ವಾಮಿಗಳ ಆರಾಧನಾ ಮಹೋತ್ಸವ ಹಾಗೂ ಸಾಮೂಹಿಕ ಉಪನಯನ ಕಾರ್ಯಕ್ರಮವು ಜರುಗಿತು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಮಠದ ಹಿರಿಯ ಸ್ವಾಮೀಜಿಗಳಾದ ಚಿಕ್ಕೇಂದ್ರ ಮಹಾಸ್ವಾಮಿಗಳು ಪೂಜ್ಯರಾದ ಶ್ರೀ ರಾಮಚಂದ್ರ ಮಹಾಸ್ವಾಮಿಗಳು ಸಿಂದಗಿ, ಶ್ರೀ ಷ.ಬ್ರ. ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯ ರು ಮತ್ತು ಶ್ರೀ ವೇ// ಮೃತ್ಯುಂಜಯ ಸ್ವಾಮಿಗಳ ಪಾವನ ಸಾನಿಧ್ಯದಲ್ಲಿ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀಮಠದ ಪೂಜ್ಯ ರಾದ ಶ್ರೀ ಬ್ರಹ್ಮನಂದ ಸ್ವಾಮೀಜಿಗಳು ಮಾತನಾಡಿ ಉಪನಯನವು ಹದಿನಾರು ಸಂಸ್ಕಾರಗಳಲ್ಲಿ ಬಹಳ ಶ್ರೇಷ್ಠವಾದ ಸಂಸ್ಕಾರ ಒಂದು ಧಾರ್ಮಿಕ ವಿಧಿವಿಧಾನ ದಿಂದ ಕೂಡಿದ್ದು ಇದರಲ್ಲಿ ಪವಿತ್ರವಾದ ಗಾಯತ್ರಿ ಮಂತ್ರೋಪದೇಶವನ್ನ ಗುರುಗಳು ಮಾಡ್ತಾರೆ ಮದುವೆಗಿಂತ ಮೊದಲು ಮಾಡಬೇಕಾದ ಮಹತ್ವದ ಕಾರ್ಯವಾಗಿದೆ. ಉಪನಯನ ಮಾಡದಿದ್ದರೆ ಮುಂದಿನ ಯಾವುದೇ ಶುಭ ಸಮಾರಂಭ ಹಾಗೂ ಮದುವೆ ಮಾಡಲು ಬರುವುದಿಲ್ಲ. ಇದು ಸಂಪ್ರದಾಯ ಪರಂಪರೆಯಿಂದ ನಡೆದು ಬಂದ ಧಾರ್ಮಿಕ ಕಾರ್ಯವಾಗಿದೆ. ಸಾಮೂಹಿಕ ಉಪನಯನದ ನಂತರ ವಟುಗಳಿಗೆ ಸಂಪ್ರದಾಯದ ಸಂಸ್ಕಾರ ನೀಡುವ ಶಿಬಿರವನ್ನು ವಿಶ್ವಕರ್ಮ ಸಮುದಾಯ ಆಯೋಜಿಸಬೇಕು ಎಂದರು.
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಸಾನಿಧ್ಯವಹಿಸಿದ ಅಫಜಲಪುರ ದ ಸಂಸ್ಥಾನ ಹಿರೇಮಠದ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯ ರು ಮಾತನಾಡಿದ್ದರು.
ಕಾರ್ಯಕ್ರಮದಲ್ಲಿ ಅತಿಥಿಗಳಾದ ಸಂಗ್ರಾಮಗೌಡ ಪಾಟೀಲ್, ಚಂದ್ರಶೇಖರ ಗು.ಕರಜಗಿ,ದೇವೀಂದ್ರ ಜಿ.ಪತ್ತಾರ ಕಲ್ಲೂರ,ಬಸಯ್ಯ ನಂದಿಕೋಲ ಹಾಗೂ ಸಭಾ ಸಂಚಾಲಕರಾದ ಮೌನೇಶ ಡಿ.ಬಡಿಗೇರ ಸೇರಿದಂತೆ ಸಕಲ ಸದ್ಬಕ್ತರು ಹಾಗೂ ವಿಶ್ವಕರ್ಮ ಸಮಾಜದ ಬಾಂಧವರು ಭಾಗಿಯಾಗಿದ್ದರು.



