ಕಲಬುರಗಿ : ಕರ್ನಾಟಕ ರಾಜ್ಯ ಸರ್ಕಾರ ಸಾಮಾಜಿಕ, ಆರ್ಥಿಕ, ಆರೋಗ್ಯ, ಶೈಕ್ಷಣಿಕ, ಉದ್ಯೋಗ, (ಜಾತಿವಾರು) ಸಮೀಕ್ಷೆ-2015 ವರದಿ ಅನುಷ್ಠಾನಕ್ಕೆ ರಾಷ್ಟ್ರೀಯ ಸಮಾಜ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಶಿವಲಿಂಗಪ್ಪ ಕಿನ್ನೂರ ಸರ್ಕಾರಕ್ಕೆ ಆಗ್ರಹಿಸಿದರು. ಕಲಬುರಗಿಯಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು 2015 ರ ವರದಿಯ ಅನ್ವಯ ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ, ಅಲೆಮಾರಿ ಜನರ ಜನಸಂಖ್ಯೆ ಅಂಕಿ ಅಂಶಗಳ ಆಧಾರವಾಗಿ ಜನಸಂಖ್ಯೆ ಅನುಗುಣವಾಗಿರುವ ಎಲ್ಲಾ ಜನಾಂಗದವರಿಗೂ ಹೆಚ್ಚಿನ ಭೌತಿಕ ಗುರಿ ತಕ್ಕಂತೆ ಬಜೆಟ್ ಅನುದಾನ ನೀಡಿ ಅನುಷ್ಠಾನಕ್ಕೆ ತರಬೇಕು ಎಂದರು.ದೇಶದಲ್ಲಿ ಕಳೆದ 75 ವರ್ಷದಲ್ಲಿ ಹಿಂದುಳಿದ ವರ್ಗಗಳ, ಅಲೆಮಾರಿ ಜನರ ಜನಸಂಖ್ಯೆ ಅಂಕಿ ಅಂಶಗಳು ಇರುವದಿಲ್ಲ ಈ ಜನರಿಗೆ ಸಮಾಜಿಕ ಆರ್ಥಿಕ ಜಾತಿವಾರು, ರಾಜಕೀಯ ಸ್ಥಾನಮಾನ ಪ್ರಾತಿನಿಧ್ಯೆತೆ ಇರದೆ ದೇಶದ ಸರ್ವೋಚ್ಚ ನ್ಯಾಯಾಲಯ (ಸುಪ್ರಿಮ್ ಕೋರ್ಟ) ಪ್ರತಿ ಬಾರಿಯು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡುತ್ತಲೆ ಇದೆ. (ಈ 1881 ರಿಂದ 1931 ರವರೆಗೆ ಓಬಿಸಿ ಜನರ ಗಣತಿ ನಡೆದಿದೆ.) ಆದರೆ 1941 ರಿಂದ 2024-ರವರೆಗೂ (80 ವರ್ಷಗಳ) ಜನಗಣತಿಯಲ್ಲಿ ಓಬಿಸಿ ಪ್ರತ್ಯೇಕ ಕಾಲಂ-ಜಾತಿವಾರು ಪಟ್ಟಿಯಲ್ಲಿ ಇರದ ಕಾರಣ ಈ ಜನರ ಅಂಕಿ-ಅಂಶಗಳು ಸಿಗುವುದಿಲ್ಲ.ಹೀಗಾಗಿ ಈ ಓ.ಬಿ.ಸಿ. ಜನರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಅನ್ಯಾಯವಾಗುತ್ತಿದೆ.ಕರ್ನಾಟಕ ರಾಜ್ಯ ಸರ್ಕಾರ ಸಾಮಾಜಿಕ ಆರ್ಥಿಕ (ಜಾತಿವಾರು) ಸಮೀಕ್ಷೆ-2015 ವರದಿ ಶೀಘ್ರವೇ ಅನುಷ್ಠಾನ ಮಾಡಬೇಕು. ದೇಶದ ಸರ್ವೋಚ್ಚ ನ್ಯಾಯಾಲಯ (ಸುಪ್ರಿಮ್ ಕೋರ್ಟ) ಹಾಗೂ ಕೇಂದ್ರ ಸರ್ಕಾರಕ್ಕೆ ಈ ವರದಿಯ ಓಬಿಸಿ ಜನರ ಅಂಕಿ ಅಂಶಗಳ ಮಾಹಿತಿಯ ಸಚಿವ ಸಂಪುಟದ ನಿರ್ಣಯದ ಪತ್ರವನ್ನು ತ್ವರಿತವಾಗಿ ರವಾನಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷ ಶಿವಲಿಂಗಪ್ಪ ಕನ್ನೂರ್.ಮಹಿಳಾ ವಿಭಾಗಿಯ ಘಟಕ ಅಧ್ಯಕ್ಷರು ಶ್ರೀಮತಿ. ಮನುಬಾಯಿ ಎಮ್. ಮುಕ್ಕಾ.ಜಿಲ್ಲಾ ಉಪಾಧ್ಯಕ್ಷಭೀಮರಾವ ಕಟ್ಟಿಮನಿ.ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರ್.ಎಸ್.ಪಿವಿಜಯಕುಮಾರ.ರಮೇಶ ಶಹಾಬಾದ ತಾಲೂಕ ಅಧ್ಯಕ್ಷರು.ಶರಣಬಸಪ್ಪ ಎಸ್. ದೊಡ್ಡಮನಿ ರಾಜ್ಯ ಹಿರಿಯ ಪ್ರಧಾನ ಕಾರ್ಯದರ್ಶಿ ಆರ್ಎಸ್ಪಿ.ಚಿಗರಳ್ಳಿ ಜಿಲ್ಲಾ ಘಟಕದ ಅಧ್ಯಕ್ಷರು ದೇವೆಂದ್ರಪ್ಪ ಕ್ಯಾತಪಳ್ಳಿ.ಜಿಲ್ಲಾ ಕಾರ್ಯದರ್ಶಿ ಶ್ರೀಮಂತ ಮಾವನೂರ.ಜೇವರ್ಗಿ ತಾಲೂಕಾಧ್ಯಕ್ಷ ಆರ್.ಎಸ್.ಪಿ ಮಹಾಂತೇಶ ದೊಡ್ಡಮನಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.