ಕಲಬುರಗಿ ನಗರ ನೂತನ ಪೊಲೀಸ್ ಕಮಿಷನರ್ ಆಗಿ ಎಸ್.ಡಿ.ಶರಣಪ್ಪ ಅವರು ಇಂದು ಅಧಿಕಾರ ಸ್ವೀಕರಿಸಿದರು.
2009ನೇ ವೃಂದದ ಐಪಿಎಸ್ ಅಧಿಕಾರಿಯಾದ ಎಸ್.ಡಿ.ಶರಣಪ್ಪ ಅವರು ಈ ಹಿಂದೆ ರೈಲ್ವೆ ಪೊಲೀಸ್ ಡಿಐಜಿಯಾಗಿ ಸೇವೆ ಸಲ್ಲಿಸಿದ್ದಾರೆ.
ಪೊಲೀಸ್ ಕಮಿಷನರ್ ಆಗಿದ್ದ ಚೇತನ್ R ಅವರು ತಿಂಗಳ ಹಿಂದೆಯೇ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾಗಿ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಕಮೀಷನರ್ ಹುದ್ದೆ ಖಾಲಿ ಉಳಿದಿತ್ತು.
ಈ ಹಿನ್ನೆಲೆಯಲ್ಲಿ ರೈಲ್ವೆ ಪೊಲೀಸ್ ಡಿಐಜಿ ಆಗಿದ್ದ ಎಸ್.ಡಿ.ಶರಣಪ್ಪ ಅವರನ್ನು ನಗರ ಪೊಲೀಸ್ ಕಮಿಷನರ್ ಹುದ್ದೆಗೆ ನಿಯೋಜನೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಇಲಾಖೆ ಬುಧವಾರ ಆದೇಶ ಹೊರಡಿಸಿತ್ತು.