ತುಮಕೂರು: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯು ಪ್ರತಿಭೆ ಇರುತ್ತದೆ ಅದನ್ನು ಗುರುತಿಸಿ ಸೂಕ್ಷö್ಮ ಮಾರ್ಗದರ್ಶನ ಮಾಡಿದರೆ ಅವರ ಭವಿಷ್ಯ ರೂಪಿಸಿಕೊಳ್ಳುವುದರ ಜೊತೆಗೆ ಸಮಾಜದ ಅಭಿವೃದ್ದಿಗೆ ಕಾರಣರಾಗುತ್ತಾರೆ ಎಂದು ಮಾನ್ಯ ಗೃಹ ಮಂತ್ರಿ ಹಾಗೂ ಶ್ರೀ ಸಾಹೇ ಕುಲಾಧಿಪತಿಗಳಾದ ಡಾ.ಜಿ.ಪರಮೇಶ್ವರರವರು ಎಂದು ಹೇಳಿದರು.
ವಿಜ್ಞಾನ ಮೇಳವು ಪ್ರಾಯೋಗಿಕ ಕಲಿಕೆಯೊಂದಿಗೆ ಸಾಮಾನ್ಯ ಜ್ಞಾನದ ಮಟ್ಟವನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳು ಸಿಕ್ಕ ಅವಕಾಶವನ್ನು ಬಳಸಿಕೊಳ್ಳಬೇಕು. ಪ್ರಾಯೋಗಿಕ ಮೇಳದಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳೂ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದರ ಜೊತೆಗೆ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಭಾರತವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟç. ಭಾರತ ಅಭಿವೃದ್ಧಿ ಪಥದಲ್ಲಿ ಸಾಗಲು ಯುವ ಜನರ ಪಾತ್ರ ಪ್ರಮುಖವಾಗಿದೆ. ಇಂದಿನ ದಿನಗಳಲ್ಲಿ ವೃತ್ತಿ ಬದುಕು ಕಟ್ಟಿಕೊಳ್ಳಲು ಸಾಕಷ್ಟು ಅವಕಾಶಗಳು ಇವೆ. ವಿದ್ಯಾರ್ಥಿಗಳು ಅವಕಾಶಗಳನ್ನು ಬಳಸಿಕೊಳ್ಳ ಬೇಕು. ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಪ್ರಾಯೋಗಿಕ ಮಾದರಿಗಳೊಂದಿಗೆ ಭಾಗವಹಿಸಿ ದೇಶದ ಅಭಿವೃದ್ಧಿಗೆ ಕಾರಣರಾಗಬೇಕು ಎಂದರು.
ಪ್ರವಾಹ ಮುನ್ಸೂಚನೆ ತಿಳಿಸುವ ಯಂತ್ರ, ಸಂಪೂರ್ಣ ಸಾಫ್ಟ್ವೇರ್ ಬಳಸಿಕೊಂಡು ಕಾರ್ ವಾಶ್ ಮಾಡುವತಂತ್ರಜ್ಞಾನ, ಮಣ್ಣಿನಲ್ಲಿತೇವಾಂಶಕಡಿಮೆಯಾದಾಗಬೆಳೆಗೆ ನೀರು ಹಾಯಿಸುವ ಸ್ವಯಂಚಾಲಿತಯAತ್ರ, ಕೃಷಿ, ಕೈಗಾರಿಕೆ, ವೈದ್ಯಕೀಯ ಹಾಗೂ ರೋಬೋಟಿಕ್, ಅಗ್ನಿಶಾಮಕ ದಳ, ರಸ್ತೆ ಸುರಕ್ಷೆತೆಗೆ ಅಳವಡಿಸಿಕೊಳ್ಳಬಹುದಾದ ಹೊಸ ತಂತ್ರಜ್ಞಾನ ವಿಷಯಗಳಿಗೆ ಸಂಬAಧಿಸಿದAತೆ ಹೀಗೆ ಸುಮಾರು ೬೦ಕ್ಕೂ ಹೆಚ್ಚು ಆಧುನಿಕತಂತ್ರಜ್ಞಾನ ಆವಿಷ್ಕಾರ ಮಾಡಿಕೊಂಡುತಮ್ಮಲ್ಲಿರುವ ಹಲವಾರು ಆಲೋಚನೆಗಳನ್ನು ಮುಕ್ತವಾಗಿ ಜನರಿಗೆ ತಿಳಿಸುತ್ತಿದ್ದರು. ಇವಿಷ್ಟು ದೃಶ್ಯ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟಿçಕಲ್ಅಂಡ್ಎಲೆಕ್ಟಾçನಿಕ್ಸ್ ಎಂಜಿನಿಯರಿAಗ್ ವಿಭಾಗದ ವತಿಯಿಂದ ಆಯೋಜಿಸಿದ “ಟೆಕ್ನೋಡಿಯಾ-೨೦೨೩” ಅಂತಾರಾಷ್ಟಿçÃಯ ಮಟ್ಟದತಾಂತ್ರಿಕ ಮಾದರಿ ಪ್ರದರ್ಶನದಲ್ಲಿಕಂಡ ವಿವಿಧ ಮಾದರಿಗಳು.
ಟೆಕ್ನೋಡಿಯ ಪ್ರದರ್ಶನÀದಲ್ಲಿಯುಜಿ ೮ ಹಾಗೂ ಪಿಜಿ ೨ ಸೇರಿದಂತೆ ೧೦ಕ್ಕೂ ವಿಭಾಗz Àಸುಮಾರು ೩೦೦ಕ್ಕೂ ಹೆಚ್ಚು ಎಂಜಿನಿಯರಿAಗ್ ವಿಭಾಗದ ವಿದ್ಯಾರ್ಥಿಗಳು, ರಾಜ್ಯದ ಪ್ರತಿಷ್ಠಿತತಾಂತ್ರಿಕ ಮಹಾವಿದ್ಯಾಲಯಗಳಾದ ಹುಬ್ಬಳ್ಳಿಯ ಎಜಿಎಂರೂರಲ್ ಕಾಲೇಜ್ ಆಫ್ಇಂಜಿನಿಯರಿAಗ್ ಅಂಡ್ ಟೆಕ್ನೋಲಾಜಿ, ಗುಬ್ಬಿಯ ಸಿಐಟಿ ಕಾಲೇಜು, ಸರ್ಕಾರಿತಾಂತ್ರಿಕ ಮಹಾವಿದ್ಯಾಲಯ ತಲಕಲ್, ತುಮಕೂರಿನಎಚ್ಎಂಎಸ್ತಾAತ್ರಿಕ ಮಹಾವಿದ್ಯಾಲಯ, ಹುಬ್ಬಳ್ಳಿಯ ಜೈನ್ಕಾಲೇಜು, ರಾಜೀವ್ತಾಂತ್ರಿಕ ಮಹಾವಿದ್ಯಾಲಯ, ರೇವಾ ವಿವಿ ಬೆಂಗಳೂರು, ಆರ್ಆರ್ತಾಂತ್ರಿಕ ಮಹಾವಿದ್ಯಾಲಯ ಸೇರಿದಂತೆ ಸುಮಾರು ೧೦ಕ್ಕೂ ಹೆಚ್ಚು ವಿವಿಧಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಾಹೇ ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡ, ಸಾಹೇ ರಿಜಿಸ್ಟಾçರ್ ಡಾ.ಎಂ.ಜೆಡ್ ಕುರಿಯನ್, ಎಸ್ಎಸ್ಐಟಿ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ್, ಕುಲಾಧಿಪತಿ ಸಲಹೆಗಾರರಾದ ಡಾ.ವಿವೇಕ್ ವೀರಯ್ಯ, ಟೆಕ್ನೋಡಿಯಾ-೨೦೨೩ ಸಂಯೋಜಕರಾದ ಎಲೆಕ್ಟಿçಕಲ್ ಅಂಡ್ ಎಲೆಕ್ಟಾçನಿಕ್ಸ್ ಎಂಜಿನಿಯರಿAಗ್ ವಿಭಾಗದ ಮುಖ್ಯಸ್ಥರಾದ ಡಾ.ಎಲ್.ಸಂಜೀವ್ಕುಮಾರ್, ಕಾಲೇಜಿನ ಹಳೆ ವಿದ್ಯಾರ್ಥಿ(೨೦೧೫)ಯಾದ ಹಬನರ್ ಇಂಟ್ರಫೇಜ್ ಸಿಸ್ಟಮ್ನ ಹೆಚ್.ಆರ್ ಮತ್ತು ಇಎಚ್ಎಸ್ ಮ್ಯಾನೆಜರ್ ಆಗಿರುವ ಪ್ರವೀಣ ಜಿ.ಎನ್, ಪ್ರಜಾಪ್ರಗತಿ ದಿನ ಪತ್ರಿಕೆಯ ಸಂಪಾದಕರಾದ ಎಸ್.ನಾಗಣ್ಣ, ಟೆಕ್ನೋಡಿಯಾ ಸಂಯೋಜಕರಾದ ಚಿದಾನಂದ ಸೇರಿದಂತೆ ಎಲ್ಲಾ ವಿಭಾಗದ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು