ಸಖಿ ಒನ್ ಸ್ಟಾಪ್ ಸೆಂಟರ್: ಅಗತ್ಯ ಸಿಬ್ಬಂದಿ ನೇಮಕಕ್ಕೆ ಅರ್ಜಿ ಆಹ್ವಾನ
ತುಮಕೂರು(ಕ.ವಾ.) ಜು.೬: ಜಿಲ್ಲೆಯ ತಿಪಟೂರು ತಾಲ್ಲೂಕಿನಲ್ಲಿ ಅನುಷ್ಟಾನಗೊಳಿಸಲಾಗುತ್ತಿರುವ “ಸಖಿ-ಒನ್ ಸ್ಟಾಪ್ ಸೆಂಟರ್” ಹೆಚ್ಚುವರಿ ಘಟಕಕ್ಕೆ ಅಗತ್ಯ ಸಿಬ್ಬಂದಿಗಳನ್ನು ತಾತ್ಕಾಲಿಕವಾಗಿ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ಸೇವೆ, ಪೊಲೀಸ್ ಸೇವೆ, ಕಾನೂನು ಸೇವೆ, ಸಮಾಲೋಚನೆ ಮತ್ತು ತಾತ್ಕಾಲಿಕ ವಸತಿ ಒದಗಿಸುವ ಕೇಂದ್ರ ಸರ್ಕಾರದ “ಸಖಿ-ಒನ್ ಸ್ಟಾಪ್ ಸೆಂಟರ್” ಹೆಚ್ಚುವರಿ ಘಟಕವನ್ನು ಅನುಷ್ಟಾನಗೊಳಿಸಲಾಗುತ್ತಿದ್ದು, ಘಟಕಕ್ಕೆ ಅಗತ್ಯವಿರುವ ಘಟಕ ಆಡಳಿತಾಧಿಕಾರಿ-೦೧, ಸಮಾಲೋಚಕರು-೦೧ ಹುದ್ದೆ ಹಾಗೂ ಸಮಾಜ ಸೇವಾ ಕಾರ್ಯಕರ್ತೆಯರು-೦೨, ವಕೀಲರು/ಪ್ಯಾರಾ ಲೀಗಲ್-೦೨ ಹಾಗೂ ಸ್ವಚ್ಛತಾಗಾರರು/ಸೆಕ್ಯೂರಿಟಿ-೦೨ ಹುದ್ದೆಗಳನ್ನು ತಾತ್ಕಾಲಿಕವಾಗಿ ಭರ್ತಿ ಮಾಡಲು ಅರ್ಹ/ಅನುಭವ ಹೊಂದಿರುವ ೧೮ ರಿಂದ ೪೫ ವರ್ಷ ವಯೋಮಿತಿಯೊಳಗಿನ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಭರ್ತಿ ಮಾಡಿದ ಅರ್ಜಿಯನ್ನು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ, ಎಂ.ಜಿ.ರಸ್ತೆ, ತುಮಕೂರು ಇವರಿಗೆ ಆಗಸ್ಟ್ ೩, ೨೦೨೩ರೊಳಗಾಗಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ದೂ.ವಾ.ಸಂ.೦೮೧೬-೨೯೫೬೬೨೪ನ್ನು ಸಂಪರ್ಕಿಸಬೇಕೆAದು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಖಿ ಒನ್ ಸ್ಟಾಪ್ ಸೆಂಟರ್: ಅಗತ್ಯ ಸಿಬ್ಬಂದಿ ನೇಮಕಕ್ಕೆ ಅರ್ಜಿ ಆಹ್ವಾನ
Leave a comment
Leave a comment