ಈ ಸಾಲಿನಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತದಾದ ತುಮಕೂರಿನ ನೀಲಕಂಠೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಟಿ.ಹೆಚ್. ಶಿವಾನಂದ್ ಅವರನ್ನು ವಿಘ್ನೇಶ್ವರ ಗೆಳೆಯರ ಬಳಗ, ಜಿಲ್ಲಾ ಕನ್ನಡ ಸೇನೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮುಖಂಡರಾದ ಚಂದ್ರಮೌಳಿ, ಧನಿಯಾಕುಮಾರ್, ಹೆಬ್ಬಾಕ ಮಲಿಕಾರ್ಜುನ್, ಶ್ರೀಧರ್ ಪದ್ಮಶಾಲಿ, ಗೂಳೂರು ಶ್ರೀನಿವಾಸ್, ಪಲ್ಲವಿ ನಾಗರಾಜು, ನಾಗರಾಜ್ ಜೈನ್, ಗೋಲ್ಡ್ ಮಧು, ಬಸವರಾಜು, ನವೀನ್ಗೌಡ ಮೊದಲಾದವರು ಸನ್ಮಾನಿಸಿ ಶುಭ ಕೋರಿದರು.