ತುಮಕೂರು: ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ), ತುಮಕೂರು ಇವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗ ಹಾಗೂ ಬೀರನಕಲ್ಲು ಹಾಗೂ ಸುತ್ತಮುತ್ತಲ ಗ್ರಾಮಸ್ಥರ ಸಹಕಾರದಲ್ಲಿ 2024ರ ಜನವರಿ 07ರ ಭಾನುವಾರ ಸಂಜೆ 6 ಗಂಟೆಗೆ ತುಮಕೂರು ಗ್ರಾಮಾಂತರ ಸ್ವಾಂದೇನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಬೀರನಕಲ್ಲು ಗ್ರಾಮದ ಶ್ರೀವೀರಭದ್ರಸ್ವಾಮಿ ದೇವಾಲಯದ ಆವರಣದಲ್ಲಿ ಗ್ರಾಮೀಣ ಸುಗ್ಗಿ ರಂಗೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಬೀರನಕಲ್ಲು ಗ್ರಾಮದ ಶ್ರೀವೀರಭದ್ರಸ್ವಾಮಿ ದೇವಾಲಯದ ಆವರಣದಲ್ಲಿ ನಡೆಯುವ ಗ್ರಾಮೀಣ ಸುಗ್ಗಿ ರಂಗೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಡಿ.ಎಂ.ರವಿಕುಮಾರ್, ಸ್ವಾಂದೇನಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಆರ್.ಮಹಾಲಕ್ಷಿö್ಮ, ಉಪಾಧ್ಯಕ್ಷರಾದ ಲೋಕೇಶ್ ಇ.ಎನ್.ಬಿ.ಐ, ಬೀರನಕಲ್ಲು ಕ್ಷೇತ್ರದ ಸದಸ್ಯರಾದ ಶ್ರೀಮತಿ ಮಂಗಳಮ್ಮ ಪ್ರಕಾಶ್, ಬಿ.ಸತೀಶ್, ಸಾವಿತ್ರಮ್ಮ ಹನುಮಯ್ಯ, ಆರ್ಚಕರಾದ ಬಿ.ಜಿ.ರವಿಕುಮಾರ್, ಮುಖಂಡರಾದ ಪಟೇಲ್ ಪ್ರಕಾಶ್, ಪಣಗಾರ್ ಹನುಮಂತರಾಯಪ್ಪ, ಸಿದ್ದಲಿಂಗಪ್ಪ ಅವರುಗಳು ಪಾಲ್ಗೊಳ್ಳಲಿದ್ದಾರೆ.



