ಸ್ಲಂ ನಿವಾಸಿಗಳಿಗೆ 2025-2026ನೇ ಸಾಲಿನ ಬಜೆಟ್ ನಲ್ಲಿ ಆಧ್ಯತೆ ನೀಡಿ ಸಿ.ಎಂ ಗೆ ಶಿಫಾರಸ್ಸು ಮಾಡಲು ಡಾ.ಜಿ ಪರಮೇಶ್ವರ್ ರವರಿಗೆ ಮನವಿ.
ಇಂದು ತುಮಕೂರು ನಗರದ ಕೇಂದ್ರ ಗ್ರಂಥಾಲಯದಲ್ಲಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ವತಿಯಿಂದ ವಿವಿಧ ಸೌಲಭ್ಯಗಳ ವಿತರಣಾ ಕಾರ್ಯಕ್ರಮದಲ್ಲಿ ನಗರ ಪ್ರದೇಶಗಳಲ್ಲಿ ಅಳಿವಿನಂಚಿನಲ್ಲಿರುವ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಪರಿಶಿಷ್ಟ ಜಾತಿ/ಪಂಗಡ, ಅಲ್ಪಸಂಖ್ಯಾತ/ಹಿಂದುಳಿದ ಸಮುದಾಯಗಳು ಹಾಗೂ ಅಲೆಮಾರಿ, ಬಾಷಾ ಅಲ್ಪಸಂಖ್ಯಾತ, ಅಭಿವೃದ್ಧಿಯಿಂದ ಬಾಧಿತರಾದ, ಲೈಂಗಿಕ ಅಲ್ಪಸಂಖ್ಯಾತ ಸಮುದಾಯಗಳು ಸ್ಲಂಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಸರ್ಕಾರ 2023ರ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆ ಸರ್ವಜನಾಂಗದ ಶಾಂತಿಯ ತೋಟ 2024ರ ಸರ್ವರಿಗೂ ಸೂರು ವಸತಿ ಗ್ಯಾರಂಟಿ ಮತ್ತು 20-8-2025ರಂದು 2 ವರ್ಷ ಪೂರೈಸಿದ ಸರ್ಕಾರದ ವಿಜಯ ನಗರ ಘೋಷಣೆಯಂತೆ ಭೂಮಿ ಹಕ್ಕು ಗ್ಯಾರಂಟಿ ಆಧರಿಸಿ ಈ ಒತ್ತಾಯಗಳನ್ನು ಸಲ್ಲಿಸುತ್ತಿದ್ದು, ರಾಜ್ಯ ಸರ್ಕಾರ 2025-26 ಸಾಲಿನ ಬಜೆಟ್ನಲ್ಲಿ ಘೋಷಣೆ ಮಾಡಲು ಆಗ್ರಹಿಸಿ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ ನಿಯೋಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ|| ಜಿ. ಪರಮೇಶ್ವರ್ ರವರಿಗೆ ಮಾನ್ಯ ಮುಖ್ಯಮಂತ್ರಿ ಮತ್ತು ವಸತಿ ಸಚಿವರಿಗೆ ಈ ಕೆಳಕಂಡ ಶಿಫಾರಸ್ಸು ಮಾಡಲು ಮನವಿ ಸಲ್ಲಿಸಲಾಯಿತು.
ಸ್ಲಂ ಸಂಘಟನೆಯ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆದು ಪ್ರಮುಖಹಕ್ಕೋತ್ತಾಯಗಳಾದ 2.816 ಕೊಳಚೆ ಪ್ರದೇಶಗಳಿಗೆ ಮೂಲ ಸೂಕರ್ಯಗಳಿಗೆ ರಾಜ್ಯ ಹಣಕಾಸು ಆಯೋಗದಲ್ಲಿ 40% ಮೀಸಲಿಡಬೇಕು. ಒನ್ ಟೈಮ್ ಗ್ರ್ಯಾಂಟ್ ಘೋಷಣೆ ಮಾಡಬೇಕು. ಖಾಸಗೀ ಮಾಲೀಕತ್ವದ ಕೊಳಚೆ ಪ್ರದೇಶಗಳ ಸ್ವಾಧೀನಕ್ಕೆ ಖಅ/ಖಖಿ ಅನುದಾನದಲ್ಲಿ ಹಣ ಮೀಸಲಿಡಬೇಕು. ರಾಜ್ಯದಲ್ಲಿ ಕಒಂಙ-ಯೋಜನೆಯಲ್ಲಿ ನಿಮರ್ಾಣವಾಗುತ್ತಿರುವ 1.80.170 ಮನೆಗಳನ್ನು ಪೂರ್ಣಗೊಳಿಸಲು ಮುಂದಾಗಬೇಕು. ಹಾಗೂ ಸ್ಲಂ ನಿವಾಸಿಗಳ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕವಾದ ಸಚಿವಾಲಯ ಘೋಷಣೆ ಮಾಡಬೇಕು. ರಾಜ್ಯದಲ್ಲಿ ವಸತಿ ಹಕ್ಕು ಕಾಯಿದೆ ಜಾರಿ ಮಾಡಬೇಕು. ನಗರ ಪ್ರದೇಶದಲ್ಲಿ ಉದ್ಯೋಗ ಖಾತ್ರಿ ಯೋಜನೆ ಜಾರಿ ಮಾಡಬೇಕು. ನಗರ ಲ್ಯಾಂಡ್ ಬ್ಯಾಂಕ್ ಯೋಜನೆ ಜಾರಿಯಾಗಬೇಕು. ಕರ್ನಾಟಕ ರಾಜ್ಯದಲ್ಲಿ ನಗರ ಪ್ರದೇಶದಲ್ಲಿರುವ ಬಡತನ ಪ್ರಮಾಣ ಇಳಿಕೆ ಮಾಡಲು ಕ್ರಮಕೈಗೊಳ್ಳಬೇಕೆಂದರು.
ಸಿಎಂ ಮತ್ತು ವಸತಿ ಸಚಿವರಿಗೆ ಶಿಫಾರಸ್ಸು ಮಾಡುವೆ- ಡಾ. ಜಿ.ಪರಮೇಶ್ವರ್
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ|| ಜಿ.ಪರಮೇಶ್ವರ್ ಸ್ಲಂ ಜನಾಂದೋಲನ ಸಲ್ಲಿಸಿರುವ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ 2026-2027ನೇ ಬಜೆಟ್ನಲ್ಲಿ ಸೇರಿಸಲು ಶಿಫಾರಸ್ಸು ಮಾಡಲಾಗುವುದು ಅದೇ ರೀತಿ ಖಾಸಗೀ ಮಾಲೀಕತ್ವದ ಸ್ಲಂಗಳ ಘೋಷಣೆ ಕುರಿತು ವಸತಿ ಸಚಿವ ಜಮೀರ್ ಅಹ್ಮದ್.ಗೆ ನಿವಾರಣೆ ಮಾಡಲು ಶಿಫಾರಸ್ಸು ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ, ತುಮಕೂರು ಸ್ಲಂ ಸಮಿತಿಯ ಅರುಣ್, ಶಂಕ್ರಯ್ಯ, ತಿರುಮಲಯ್ಯ, ಕೃಷ್ಣಮೂರ್ತಿ,ಮುಬಾರಕ್, ಸಾವಿತ್ರಿ ಬಾಪುಲೆ ಮಹಿಳಾ ಸಂಘದ ಸಂಚಾಲಕರಾದ ಅನುಪಮಾ, ಶಾರದಮ್ಮ, ಪೂರ್ಣಿಮಾ ಮುಂತಾದವರು ಪಾಲ್ಗೊಂಡಿದ್ದರು.



