ಇಂದು ನಗರದ ಸ್ಲಂ ಭವನದಲ್ಲಿ ಜಿಲ್ಲಾ ಅಲೆಮಾರಿ ಹಂದಿಜೋಗಿಗಳ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಯಿತು.ಇತ್ತೀಚೆಗೆ ಮಾಧ್ಯಮ ಗಳಲ್ಲಿ ನಖಲಿ ಜಾತಿ ಪ್ರಮಾಣ ಪತ್ರ ಪಡೆದವರ ಶಿಕ್ಷೆಗೆ ಆಗ್ರಹಿಸಿ ತುಮಕೂರು ಜಿಲ್ಲಾ ಹಂದಿಜೋಗಿ ಸಂಘ ಸಮಾಜ ಕಲ್ಯಾಣ ಇಲಾಖೆ ಜಂಟೀ ನಿರ್ದೇಶಕರನ್ನು ಭೇಟಿ ಮಾಡಿ ಒತ್ತಾಯಿಸಿರುವುದು ಪ್ರಕಟಣೆಯಾಗಿರುತ್ತದೆ. ಇತ್ತೀಚೆಗೆ ತುಮಕೂರು ತಾಲ್ಲೂಕು ಅಣ್ಣೇನಹಳ್ಳಿ ಸರ್ವೆ ನಂ.44 ರಲ್ಲಿ ಹಾಗೂ ಅಮಲಾಪುರ ಸರ್ವೆ ನಂ, 31 ರಲ್ಲಿ ಮತ್ತು ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಸಾತೇನಹಳ್ಳಿಯ ನಲ್ಲೂರು ಗ್ರಾಮ ಸರ್ವೆ ನಂ, 49 ರಲ್ಲಿ 137ಕ್ಕೂ ಹೆಚ್ಚು ಹಂದಿ ಜೋಗಿ ಹಾಗೂ ಅಲೆಮಾರಿ ಸಮುದಾಯದ ಸುಡುಗಾಡು ಸಿದ್ದರು, ಹಕ್ಕಿಪಿಕ್ಕಿಗಳು, ಶಿಳ್ಳೇಕ್ಯಾತರು, ದಕ್ಕಲಿಗ ಸಮುದಾಯಗಳಿಗೆ ನಿವೇಶನ ಹಾಗೂ ವಸತಿಯನ್ನು ವಿಶೇಷ ವರ್ಗದ ಯೋಜನೆಯಲ್ಲಿ ಜಿಲ್ಲಾಡಳಿತ ಕಳೆದ 20 ವರ್ಷಗಳ ಹೋರಾಟಕ್ಕೆ ಮಣಿದು ನೀಡಲು ಮುಂದಾಗಿರುತ್ತದೆ, ಆದರೆ ಇದನ್ನು ಸಹಿಸದ ಹಂದಿ ಜೋಗಿಗಳಲ್ಲೇ ಮುಂದುವರಿದ ವರಹಾ ಪಂಗಡದವರು ನಮ್ಮನ್ನು ಹಂದಿ ಜೋಗಿಗಳೇ ಅಲ್ಲ ಎಂದು ಆರೋಪ ಮಾಡುತ್ತಿರುವುದು ಸರಿಯಲ್ಲ, ಇದು ಸತ್ಯಕ್ಕೆ ದೂರವಾಗಿದೆ ಎಂದು ಅಲೆಮಾರಿ ಬುಡಕಟ್ಟು ಮಹಾಸಭಾದ ಮುಖಂಡರಾದ ರಾಮಕ್ಕ ಹೇಳಿದರು.
ತಲಾತಲಾಂತರಗಳಿಂದ ನಾವು ಹಂದಿಗಳನ್ನು ಊರೂರಿನಲ್ಲಿ ಸಾಕಾಣಿಕೆ ಮಾಡಿ ಜೀವನೋಪಾಯವನ್ನು ಸಾಗಿಸುತ್ತಿದ್ದೇವೆ, ನಮ್ಮಲ್ಲೇ ಹಂದಿಜೋಗಿ ಸಮುದಾಯದ ವರಹ ಬುಡಕಟ್ಟಿನವರು ಮುಂದುವರಿದ ವರ್ಗದವರಾಗಿದ್ದು ಇವರಿಗೆ ಸಾಕಷ್ಟು ಜಮೀನು ಮತ್ತು ಸ್ವಂತ ಮನೆಗಳು ಹಾಗೂ ಕೋಟ್ಯಂತರೂಪಾಯಿಗಳ ವ್ಯವಹಾರಗಳನ್ನು ಮಾಡುತ್ತಿದ್ದಾರೆ, ನಾವು ಮಡಕಟ್ಟಿ ಬುಡಕಟ್ಟಿಗೆ ಸೇರಿದ್ದು ಊರೂರಿನಲ್ಲಿ ಗುಡಿಸಲುಗಳನ್ನು ಹಾಕಿಕೊಂಡು ಹಂದಿಗಳನ್ನು ಸಾಕಾಣಿಕೆ ಮಾಡುತ್ತಿದ್ದೇವೆ. ನಾವು ಎಳವ ಸಮುದಾಯಕ್ಕೆ ಸೇರಿದವರಲ್ಲ ನಮ್ಮ ಮಕ್ಕಳು ಮತ್ತು ಹಿರಿಯರು ಹಂದಿಜೋಗಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ, ನಮ್ಮೆಲ್ಲ ಶಾಲಾ ದಾಖಲಾತಿಗಳು ಪ್ರಮಾಣಿಕತೆ ಕೂಡಿವೆ ಎಂದರು. ಇದರ ಬಗ್ಗೆ ಜಿಲ್ಲಾಡಳಿತ ಅಗತ್ಯ ತನಿಖೆ ನಡೆಸಿ ಆರ್ಥಿಕವಾಗಿ ಮುಂದುವರಿದಿರುವ ಹಂದಿಜೋಗಿ ವರಹ ಬುಡಕಟ್ಟಿನವರನ್ನು ಸರ್ಕಾರಿ ಯೋಜನೆಯಿಂದ ಕೈಬಿಡಬೇಕೆಂದು ಆಗ್ರಹಿಸಿದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪರವಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದ ಸ್ಲಂ ಜನಾಂದೋಲನ ಸಂಘಟನೆಯ ಸಂಚಾಲಕ ಎ. ನರಸಿಂಹಮೂರ್ತಿ ಇತ್ತೀಚೆಗೆ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೆ ಸಿದ್ದತೆ ಮಾಡಿಕೊಂಡ ಹಿನ್ನಲೆಯಲ್ಲಿ ಅಲೆಮಾರಿ ಸಮುದಾಯಗಳಲ್ಲಿ ಜಾಗೃತಿ ಹೆಚ್ಚಾಗಿದೆ, ಹಂದಿಜೋಗಿಸ್ ಜಾತಿ ಪರಿಶಿಷ್ಟ ಜಾತಿಯ 98ರ ಪಟ್ಟಿಯಲ್ಲಿ ಸೇರಿದ್ದು ನಾವು ನೋಡಿದಂತೆ ಈ ಸಮುದಾಯ ಹಂದಿ ಜೋಗಿ ಸಾಂಸ್ಕೃತಿಕತೆಯನ್ನು ಆಚರಿಸಕೊಂಡು ಬರುತ್ತಿದೆ ಮುಂದುವರಿದ ಜಾತಿಗಳು ಹಿಂದುಳಿದ ಜಾತಿಗಳನ್ನು ತುಳಿಯುವುದು ಹಿಂದಿನಿಂದಲು ನಡೆದುಕೊಂಡು ಬಂದಿರುವುದೇ ಆಗಿದೆ. ಈ ರೀತಿಯ ಜಾತಿ ಗೊಂದಲಗಳಿಗೆ ತಾರ್ಕಿಕ ಅಂತ್ಯಗೊಳಿಸಲು ಜಿಲ್ಲಾಡಳಿಯ ಕುಲಶಾಸ್ತ್ರಿಯ ಅಧ್ಯಯನ ನಡೆಸಿ ಜಾತಿಯ ಮೂಲವನ್ನು ಗುರುತಿಸಿ ಆ ಜಾತಿಯ ಪ್ರಮಾಣ ಪತ್ರಗಳನ್ನು ನೀಡಬೇಕು ಏಕೆಂದರೇ, ಶಾಲೆಗಳಲ್ಲಿ ಸ್ಕಾಲರ್ಷಿಪ್ ಪಡೆಯಲು ಅಥವಾ ಇನ್ನೀತರೆ ಸೌಲಭಭ್ಯಗಳನ್ನು ಪಡೆಯಲು ಹಾಗೂ ಸರ್ಕಾರಿ ಯೋಜನೆಗಳನ್ನು ಪಡೆಯಲು ಜಾತಿ ಪ್ರಮಾಣ ಪತ್ರ ಅಗತ್ಯವಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಮದ್ಯಪ್ರವೇಶ ಮಾಡಿ ಕುಲಶಾಸ್ತ್ರೀಯ ಅಧ್ಯಯನ ನಡೆಸಬೇಕು ಈ ಬಗ್ಗೆ ಮನವಿ ನೀಡಲಾಗುವುದೆಂದರು.
ಈ ಸಂದರ್ಭದಲ್ಲಿ ಅಲೆಮಾರಿ ಹಂದಿಜೋಗಿ ಸಮುದಾಯದ ಮುಕಂಡರಾದ ಚಿಕ್ಕಗಂಗಮ್ಮ, ನಾಗರಾಜು, ವೆಂಕಟೇಶ್, ಗೋವಿಂದ, ಗಣೇಶ್, ಗುರ್ರಪ್ಪ, ಸಂತೋಷ್, ಅಮಲಾಪುರ ನಾಗರಾಜು, ಗುಬ್ಬೀ ಮಾರಣ್ಣ, ತುಮಕೂರು ಸ್ಲಂ ಸಮಿತಿಯ ಪದಾಧಿಕಾರಿಗಳಾದ ಅರುಣ್, ಕೃಷ್ಣಮೂರ್ತಿ , ಮುಂತಾದವರು ಪಾಲ್ಗೊಂಡಿದ್ದರು.



