ಇಂದು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ವತಿಯಿಂದ ತುಮಕೂರು ನಗರದ 18ನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಬನಶಂಕರಿ ಇಸ್ಮಾಯಿಲ್ ನಗರ ಸ್ಲಂನಲ್ಲಿ ಸುಮಾರು 40 ವರ್ಷಗಳಿಂದ ಅರೆ ಅಲೆಮಾರಿ ಹಂದಿಜೋಗಿ/ಲoಬಾಣಿ ಸಮುದಾಯದ ಕುಟುಂಬಗಳು ನೆಲೆಸಿದ್ದು ಇತ್ತೀಚಿಗೆ ತುಮಕೂರು ಸ್ಲಂ ಸಮಿತಿಯು ದಿನಾಂಕ:25-7-2023 ರoದು ಮಾನ್ಯ ಗೃಹಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ರವರಿಗೆ ಪುನರ್ ವಸತಿ ಕಲ್ಪಿಸಲು ಮನವಿ ಸಲ್ಲಿಸಲಾಗಿತ್ತು, ಅದರಂತೆ ನಗರ ಮಿತಿಯಲ್ಲಿ 4ಎಕರೆ ಭೂಮಿಯನ್ನು ಗುರುತಿಸಿ ಪುನರ್ವಸತಿ ಕಲ್ಪಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು, ಇದರ ಮುಂದುವರಿದು ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಈಗಾಗಲೇ ಅಣ್ಣೇನಹಳ್ಳಿ ಸರ್ವೇ, 74 ರಲ್ಲಿ 4 ಎಕರೆ 44 ಕುಂಟೆ ಜಮೀನನ್ನು ಗುರುತಿಸಿ ಪುನರ್ವಸತಿ ಕಲ್ಪಿಸಲು ಮುಂದಾಗಿರುವ ಜಿಲ್ಲಾಡಳಿತಕ್ಕೆ ತುಮಕೂರು ಸ್ಲಂ ಸಮಿತಿ ಅಭಿನಂದನೆ ಸಲ್ಲಿಸುತ್ತದೆ.
2017ರಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಡೆದಿರುವ ಸಮೀಕ್ಷೆ ಸಂದರ್ಭದಲ್ಲಿ ಮೂಲ ನಿವಾಸಿಗಳನ್ನು ಕೈಬಿಡಲಾಗಿದೆ, ಈ ಬಗ್ಗೆ ನಾವು ಹಲವಾರು ಬಾರಿ ನಗರಪಾಲಿಕೆಗೆ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ಮನವಿ ಸಲ್ಲಿಸಲಾಗಿದ್ದರು ಯಾವುದೇ ಕ್ರಮವಾಗಿರಲಿಲ್ಲ ಆದರೆ ಮಾನ್ಯ ಜಿಲ್ಲಾಧಿಕಾರಿಗಳು ಇತ್ತೀಚಿಗೆ ಇಲ್ಲಿರುವ ಕುಟುಂಬಗಳಿೆ ಪುನರ್ ವಸತಿ ಕಲ್ಪಿಸಲು ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಿದ್ದು ಈಗಾಲೇ ದಾಖಲೆ ಸಂಗ್ರಹಣೆ ಮಾಡಲಾಗಿರುತ್ತದೆ, ಸುಮಾರು 7 ವರ್ಷದ ಹಿಂದಿನ ಸಮೀಕ್ಷೆ ಆಗಿರುವುದರಿಂದ ನೈಜವಾಗಿ ವಾಸಿಸುವವರನ್ನು ಪಟ್ಟಿಯಿಂದ ಕೈಬಿಟ್ಟು ಬೆಂಗಳೂರಿನಲ್ಲಿರುವ ಅಲೆಮಾರಿಗಳನ್ನು ಈ ಸಮೀಕ್ಷಾ ಪಟ್ಟಿಯಲ್ಲಿ ಸೇರಿಸಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ ಹಾಗಾಗಿ ಹೊಸ ಸಮೀಕ್ಷೆ ಮಾಡಿ ಏಕ ಕಾಲದಲ್ಲಿ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಶಿವಾನಂದ್ ಕರಾಳೆ ಮೂಲಕ ಸ್ಲಂ ಸಮಿತಿ ಅಧ್ಯಕ್ಷರಾದ ಎ.ನರಸಿಂಹಮೂರ್ತಿ ಮನವಿ ಸಲ್ಲಿಸಿ ಚರ್ಚೆ ನಡೆಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಹೆಚ್ಚವರಿ ಜಿಲ್ಲಾಧಿಕಾರಿಗಳಾದ ಶಿವಾನಂದ ಕರಾಳೆ ಕೈಬಿಟ್ಟಿರುವ ಅಲೆಮಾರಿ ಕುಟುಂಬಗಳನ್ನು ಸಮೀಕ್ಷೆ ಮಾಡಿ ಗುರುತಿಸಲಾಗುವುದು ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಮತ್ತು ತುಮಕೂರುಮಹಾನಗರ ಪಾಳಿಕೆಗೆ ಸೂಚನೆ ನೀಡಲಾಗುವುದು ಮತ್ತು ಇಲ್ಲಿನ ನಿವಾಸಿಗಳನ್ನು ಹೊರತು ಪಡಿಸಿ ಅನಧೀಕೃತವಾಗಿ ವಾಸಿಸುವವರ ಬಗ್ಗೆ ಪರೀಶೀಲನೆ ನಡೆಸಲಾಗುವುದೆಂದು ತಿಳಿಸಿದರು,