ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಯುವಜನರೆಲ್ಲರು ನಿಯೋಗ ತೆರಳಿ ಮಹಾನಗರ ಪಾಲಿಕೆ ಆಯುಕ್ತರಾದ ಬಿ ವಿ ಅಶ್ವಿಜ ರವರಿಗೆ ಮನವಿ ಸಲ್ಲಿಸಲಾಯಿತು.

ಕೊಳಗೇರಿ ಸಮಿತಿಯ ಕಾರ್ಯದರ್ಶಿ ಅರುಣ್ ಆಯುಕ್ತರ ಗಮನ ಸೆಳೆದು ಸಮುದಾಯ ಭವನದಲ್ಲಿ ಲಕ್ಷಾಂತರ ರೂಗಳು ಬೆಲೆ ಬಾಳುವ ಪರ್ನೀಚರ್, ಟೇಬಲ್ಸ್, ಸೌಂಡ್ಸ್ ಸಿಸ್ಟೆಂ, ಚೇರ್ಸ್, ಯುಪಿಎಸ್, ಎ.ಸಿ ಎಲ್ಲವು ಹಾಳಾಗುತ್ತಿವೆ. ವಿದ್ಯುತ್ ಸಂಪರ್ಕ ಕಡಿತವಾಗಿದೆ, ಎರಡು ಹಂತಸ್ಥಿನ ಕಟ್ಟಡ ಸಾರ್ವಜನಿಕರ ಬಳಕೆಗೆ ಯೋಗ್ಯವಿಲ್ಲದಂತಾಗಿದೆ. ಪರಿಶಿಷ್ಟರ ಅನುಧಾನ ದುರ್ಬಳಕೆ ಆಗುತ್ತಿದೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿದೆ, ಮಾನ್ಯ ಮಹಾನಗರ ಪಾಲಿಕೆ ಆಯುಕ್ತರು ವಾಸ್ಥವ ಸ್ಥಿತಿಯನ್ನು ಪರೀಶೀಲಿಸಬೇಕು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಕ್ರಮವಹಿಸಬೇಕ. ನಿರ್ವಹಣೆಗೆ ತುರ್ತು ನಿಯೋಜನೆಗೊಳಿಸಬೇಕೆಂದು ಒತ್ತಾಯಿಸಿದರು.
ಮನವಿಗೆ ತುರ್ತು ಸ್ಪಂದಿಸಿದ ಮಹಾನಗರ ಪಾಲಿಕೆ ಆಯುಕ್ತರಾದ ಬಿವಿ ಅಶ್ವಿಜಾ ರವರು ಸಂಬಂಧಪಟ್ಟ ಪಾಲಿಕೆ ಇಂಜಿನಿಯರ್ ಅವರಿಗೆ ಸ್ಥಳದಲ್ಲೇ ಸೂಚಿಸಿದರು ಶಿಥಿಲಾವಸ್ಥೆ ಸರಿಪಡಿಸಿ ಸಾರ್ವಜನಿಕರಿಗೆ ಉಪಯೋಗಕ್ಕೆ ಬಳಸುವಂತೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ , ಡಾ.ಬಿ.ಆರ್ ಅಂಬೇಡ್ಕರ್ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ರಘು, ಉಪಾಧ್ಯಕ್ಷರಾದ ಸುನಿಲ್. ಖಜಾಂಚಿ ನಿಖಿಲ್, ಕಾರ್ಯದರ್ಶಿ ಅನಿಲ್. ಮುಖ್ಯ ಪದಾಧಿಕಾರಿಗಳಾದ ಸಂಪತ್ಕುಮಾರ್, ಅನಿಲ, ರೇಣು, ಬಾಲಾಜಿ, ಪ್ರಥಮ್. ಶಶಿ. ವೆಂಕಟೇಶ್.ಕರಿಯ. ಮಂಜುನಾಥ್, ನವೀ. ಹನುಮಂತ. ಸುನಿಲ್ ಮುಂತಾದವರು ಪಾಲ್ಗೊಂಡಿದ್ದರು.