ಕಲ್ಬುರ್ಗಿ ನಗರದಲ್ಲಿ ಇಂದು AIKKMS ಚಿತ್ತಾಪುರ ತಾಲೂಕು ಸಮಿತಿ ವತಿಯಿಂದ ಕಲಬುರ್ಗಿ ಜಿಲ್ಲಾಧಿಕಾರಿಗಳಿಗೆ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿನ ಹಲವು ವರ್ಷಗಳಿಂದ ನಿರ್ಲಕ್ಷಿಸಲ್ಪಟ್ಟ 652 ಪಾಣಿಗಳ ದೋಷಗಳನ್ನು ಕೂಡಲೇ ಮೊದಲ ಆದ್ಯತೆ ಮೇರೆಗೆ ಸರಿಪಡಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿ ಈ ವಿಷಯ ಕುರಿತು ಶಿವಕುಮಾರ್ ಆಂದೋಲಾ ಎ .ಐ. ಕೆ .ಕೆ .ಎಂ. ಎಸ್ .ಚಿತ್ತಾಪುರ ತಾಲೂಕ ಅಧ್ಯಕ್ಷ ಸುದ್ದಿಗಾರರಿಗೆ ಮಾತನಾಡಿ ಕೂಡಲೇ ಈ ಸಮಸ್ಯೆ ಬಗೆಹರಿಸದೆ ಹೋದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ತದನಂತರ ರೈತರು ಕೂಡ ಮಾತನಾಡುತ್ತಾ ತಮಗೆ ಆಗುತ್ತಿರುವ ತೊಂದರೆ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಬಗೆಹರಿಸಿ ನಮ್ಮ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಮಹೇಶ ಎಸ್.ಬಿ, ಚೌಡಪ್ಪ ಗಂಜಿ ಸೇರಿ ದಂತೆ ಹಲವು ರೈತರು ಉಪಸ್ಥಿತರಿದ್ದರು.



