ಪುಷ್ಪ ಹರಾಜು ಕೇಂದ್ರದಲ್ಲಿ ಬಾಡಿಗೆ ಮಳಿಗೆಗಳು ಲಭ್ಯ: ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
ತುಮಕೂರು(ಕ.ವಾ.)ಅ.೫: ತುಮಕೂರು ಜಿಲ್ಲೆ ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿ ಚಿಕ್ಕನಹಳ್ಳಿ ರಾಷ್ಟಿçÃಯ ಹೆದ್ದಾರಿ-೪ಕ್ಕೆ ಹೊಂದಿಕೊAಡಿರುವAತೆ ನಿರ್ಮಿಸಿರುವ ಪುಷ್ಪ ಹರಾಜು ಕೇಂದ್ರದಲ್ಲಿ ಖಾಲಿ ಇರುವ ೫ ವಾಣಿಜ್ಯ ಮಳಿಗೆಗಳನ್ನು ಮಾಸಿಕ ಬಾಡಿಗೆ ಆಧಾರದ ಮೇರೆಗೆ ಬಾಡಿಗೆ ನೀಡಲು ಅರ್ಹ ವ್ಯಾಪಾರಸ್ಥರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು ಅಕ್ಟೋಬರ್ ೧೩ರವರೆಗೆ ವಿಸ್ತರಿಸಲಾಗಿದೆ.
ಮಾಸಿಕ ೧೦೦೦ ರೂ. ಬಾಡಿಗೆ ನಿಗಧಿಪಡಿಸಲಾಗಿದ್ದು, ಮಳಿಗೆಗಳ ಸಂಖ್ಯೆ ೬, ೧೧, ೧೨, ೧೪, ೧೫ ಖಾಲಿ ಇರುತ್ತವೆ. ವ್ಯಾಪಾರಸ್ಥರಿಗೆ ಲಾಟರಿ/ಜೇಷ್ಠತೆ ಮುಖಾಂತರ ಹಂಚಿಕೆ ಮಾಡಲಾಗುವುದು. ಪುಷ್ಪ ಹರಾಜು ಕೇಂದ್ರದಲ್ಲಿ ಹೂವಿನ ವಹಿವಾಟು ನಡೆಸಲು ಎಲ್ಲಾ ಸೌಲಭ್ಯಗಳು ಲಭ್ಯವಿರುತ್ತದೆ.

ಅರ್ಹ ವ್ಯಾಪಾರಸ್ಥರು ಭರ್ತಿ ಮಾಡಿದ ಅರ್ಜಿಯನ್ನು ಸಹಾಯಕ ತೋಟಗಾರಿಕೆ ನಿರ್ದೇಶಕರು, ಪುಷ್ಪ ಹರಾಜು ಕೇಂದ್ರ, ಚಿಕ್ಕನಹಳ್ಳಿ ಇವರಿಗೆ ಅಕ್ಟೋಬರ್ ೧೩ರವರೆಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. ೯೪೮೧೫೫೪೩೦೮ನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



