ಕಲಬುರಗಿ : ಸಿದ್ರಾಮಯ್ಯ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರಿಗೆ ಗಾಯದ ಮೇಲೆ ಬರೇ ಎಳೆಯುತ್ತಿದೆ ಎಂದು ರಾಜ್ಯ ವಿರೋಧ ಪಕ್ಷದ ನಾಯಕ ಆರ್ ಅಶೋಕ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಿಸಿರುವದನ್ನು ಖಂಡಿಸಿ ಕಲಬುರಗಿಯಲ್ಲಿ ಬೃಹತ ಪ್ರತಿಭಟನೆನ್ನುದ್ದೇಶಿಸಿ ಮಾತನಾಡಿದ ಅವರು ಅಧಿಕಾರಕ್ಕೆ ಬರುವದಕ್ಕಿಂತ ಮುಂಚಿತವಾಗಿ ಜನರಿಗೆ ನಾವು ಯಾವುದೇ ಕಾರಣಕ್ಕೂ ಅಗತ್ಯ ವಸ್ತುಗಳ ಬೆಲೆ ಏರಿಸುವದಿಲ್ಲ ಎಂದು ಹೇಳಿ ಇದೀಗ ಅಧಿಕಾರಕ್ಕೆ ಬಂದ ನಂತರ ಜನರಿಗೆ ಮೋಸ ಮಾಡಿ ಬೆಲೆ ಏರಿಕೆ ಮಾಡಿದ್ದಾರೆ, ಮಾತ ಎತ್ತಿದರೆ ಕಾಂಗ್ರೇಸ ಸರ್ಕಾರದ ಮಂತ್ರಿಗಳು ಎರಡು ಸಾವಿರ ರೂಪಾಯಿ ಗ್ಯಾರೆಂಟಿ ಕೊಡ್ತಿದ್ದೇವೆ ಅಂತಿದ್ದಾರೆ ಸ್ವಾಮಿ ಒಂದು ಕಡೆ ಬೆಲೆ ಹೆಚ್ಚಿಗೆ ಮಾಡಿ ಇನ್ನೊಂದು ಕಡೆ ಕೊಡೋದು ಯಾವ ಗ್ಯಾರೆಂಟಿ ಎಂದು ಮಂತ್ರಿಗಳಿಗೆ ಚಳಿ ಬಿಡಿಸಿದರು, ಹಾಲಿನ ದರ,ವಿದ್ಯುತ್ ದರ, ಹಾಲಿನ ದರ, ಬಸ್ಸ ಪ್ರಯಾಣ ದರ, ಪೆಟ್ರೋಲ್, ಡೀಸೆಲ್ ದರ, ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಸಿ ಇದೀಗ ಹೊಸ ಅಧ್ಯಯ ಪ್ರಾರಂಭಿಸಿದ್ದಾರೆ. ಒಟ್ಟಾರಿಯಾಗಿ ಸಿದ್ರಾಮಯ್ಯನವರ ಸರ್ಕಾರದ ಯುಗ ಬೆಲೆ ಏರಿಕೆಯ ಯುಗ, ಇದೊಂದು ನಾಲಾಯಕ್ ಸರಕಾರ ಒಂದು ಕಡೆ ಕೊಟ್ಟು ಇನ್ನೊಂದು ಕಡೆ ಜನರಿಂದ ಕಿತ್ತುಗೊಳ್ಳುತ್ತಿದ್ದಾರೆ ಎಂದರು. ಕೂಡಲೇ ಸರ್ಕಾರ್ ಪೆಟ್ರೋಲ್ ಡೀಸೆಲ್ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಇಳಿಸಬೇಕು ಇಲ್ಲವಾದರೆ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ತಪ್ಪಿದ್ದಲ್ಲ ಎಂದು ಎಚ್ಚರಿಕೆ ನೀಡದರು. ಪ್ರತಿಭಟನೆಯ ಕಾವು ಹೆಚ್ಚುತಿದ್ದಂತೆ ಎಚ್ಛೆತ್ತುಕೊಂಡ ಪೊಲೀಸ್ ಇಲಾಖೆ ಆರ್ ಅಶೋಕ್ ಸೇರಿದಂತೆ ಇನ್ನಿತರ ನಾಯಕರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.ಪ್ರತಿಭಟನೆಯಲ್ಲಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಶಶಿಲ್ ನಮೋಶಿ, ಶಿವರಾಜ್ ಪಾಟೀಲ್ ರದ್ದೇವಾಡಗಿ, ಅವ್ವಣ್ಣ ಮ್ಯಾಕೇರಿ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸದರು.