ತುಮಕೂರು: ಕೇಂದ್ರ ಸರ್ಕಾರ ನಡೆಸುವ ಎಲ್ಲಾ ಪ್ರವೇಶ ಪರೀಕ್ಷೆಗಳಿಗೂ ಹಿಂದಿ, ಇಂಗ್ಲೀಷ್ನAತೆ ಕನ್ನಡ ಭಾಷೆಯಲ್ಲೂ ಪ್ರವೇಶ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಒತ್ತಾಯಿಸಿದರು.
ಇಲ್ಲಿಯ ಜಯನಗರದ ಬಸ್ ನಿಲ್ದಾಣದ ಸಮೀಪ ನಿರ್ಮಾಣವಾಗಿರುವ ಸ್ಮಾರ್ಟ್ಸಿಟಿ ಮಿನಿ ಮಾರುಕಟ್ಟೆ ಆವರಣದಲ್ಲಿ ಜಯನಗರ ನಾಗರೀಕ ಹಿತರಕ್ಷಣಾ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈಲ್ವೆ, ಬ್ಯಾಂಕಿAಗ್, ಅಂಚೆ ಕಚೇರಿ ಸೇರಿದಂತೆ ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಪ್ರವೇಶ ಪರೀಕ್ಷೆಗೆ ಹಿಂದಿ, ಇಂಗ್ಲೀಷ್ ಹೇಗೆ ಪರಿಗಣನೆ ಮಾಡಿದ್ದಾರೋ, ಅದೇ ರೀತಿ ಕನ್ನಡ ಭಾಷೆಗೂ ಸಹ ಪ್ರವೇಶ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡಬೇಕು. ಆಗ ನಮ್ಮ ಕನ್ನಡ ಭಾಷೆ ರಾಷ್ಟçಭಾಷೆಯಾಗಿ ಸ್ವಾಭಿಮಾನದ ಭಾಷೆಯಾಗಿ ಬೆಳವಣಿಗೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸ್ಥಳೀಯವಾಗಿ ಗಾಂಜಾ, ಚರಸ್ಸು ತುಂಬಾ ದೊಡ್ಡ ಮಟ್ಟಕ್ಕೆ ಬೆಳೆಯುತ್ತಿರುವುದು ಆತಂಕಕಾರಿ ವಿಷಯ. ನಮ್ಮ ಮಕ್ಕಳನ್ನ ನಮ್ಮ ಬಡಾವಣೆಯನ್ನು ಶುದ್ಧಿಯಾಗಿ ಇಟ್ಟುಕೊಂಡಿಲ್ಲವೆAದರೆ ನಾವು ಊಹಿಸಲಾಗದಷ್ಟು ಬೇರೆ ಬೇರೆ ರೀತಿಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ವಿದ್ಯಾವಾಚಸ್ಪತಿ ಡಾ.ಕವಿತಾಕೃಷ್ಣ ಮಾತನಾಡಿ, ಜಗತ್ತಿನಲ್ಲಿ ಆರು ಸಾವಿರ ಭಾಷೆಗಳಿವೆ, ಇದರಲ್ಲಿ ೩೬೪೫ ಅಂದರೆ ಶೇ.೬೦ ರಷ್ಟು ಭಾಷೆಗಳು ಭಾರತದಲ್ಲಿದ್ದು, ಆರಂಭದಲ್ಲಿ ೧೪ ಭಾಷೆಗಳನ್ನು ಸಂವಿಧಾನದಲ್ಲಿ ಸೇರ್ಪಡೆಯಾಗಿದ್ದು, ಈಗ ೨೨ ಭಾಷೆಗಳವರೆಗೆ ಆಗಿವೆ. ಇವೆಲ್ಲಾ ರಾಷ್ಟç ಭಾಷೆಗಳೇ, ಆರುವರೆ ಕೋಟಿ ಕನ್ನಡಿಗರು ಮಾತನಾಡುವ ಭಾಷೆ ಕನ್ನಡವೇ ಆಗಿದೆ. ಹಿಂದಿ ಒಂದು ಸಂಪರ್ಕ ಭಾಷೆಯಷ್ಟೇ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಂಪರ್ಕ ಮಾಡುವ ಭಾಷೆಯಾಗಿದೆಯೇ ಹೊರತು, ಕನ್ನಡ ರಾಷ್ಟçಭಾಷೆ ಎಂಬುದನ್ನು ನಾವೆಲ್ಲರೂ ಮನಗಾಣಬೇಕಿದೆ ಎಂದರು.
ಜಾತಿಗಳನ್ನಾಧರಿಸಿ, ಬಡತನ, ಸಿರಿತನಗಳನ್ನಾಧರಿಸಿ, ಮೇಲು ಕೀಳುಗಳನ್ನಾಧರಿಸಿ ಭಾಷೆಯನ್ನು ಕಟ್ಟಬಾರದು, ಜಾತಿ, ಬಡತನ, ಸಿರಿತನ, ಮೇಲು, ಕೀಳುಗಳನ್ನು ಮೀರಿ ಕನ್ನಡ ಭಾಷೆಯನ್ನು ನಾವು ಕಟ್ಟಬೇಕು ಎಂದು ತಿಳಿಸಿದರು.