ಕಲ್ಯಾಣ ಕರ್ನಾಟಕ ಗ್ರಾಮೀಣ ವೈದ್ಯರ ಅಭಿವೃದ್ಧಿಪರ ಸಂಘದ ರಾಜ್ಯಾಧ್ಯಕ್ಷರಾದ ಅಮೃತ್ ಪಾಟೀಲ್ ಅವರ ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿಗಳ ಮುಖಾಂತರ ಗ್ರಾಮೀಣ ವೈದ್ಯರ ಮೇಲೆ ನಡೆಯುತ್ತಿರುವ ಕಿರುಕುಳವನ್ನು ಶೀಘ್ರವೇ ತಡೆಹಿಡಿಯಲು ಮತ್ತು ಗ್ರಾಮೀಣ ವೈದ್ಯರಿಗೆ ಪ್ರಥಮ ಚಿಕಿತ್ಸೆ ನೀಡಲು ಫಸ್ಟ್ FIRST AID ಅಥವಾ PMP ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ರವರಿಗೆ ಪತ್ರ ಮುಖಾಂತರ ಮನವಿ ಪತ್ರ ಸಲ್ಲಿಸಿದರು.

ತದನಂತರ ಸಂಘದ ರಾಜ್ಯಾಧ್ಯಕ್ಷರಾದ ಅಮೃತ ಅಮೃತ್ ಪಾಟೀಲ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸರಿಸುಮಾರು 1.5 ಲಕ್ಷ ಗ್ರಾಮೀಣ ವೈದ್ಯರು ಗ್ರಾಮೀಣ ಪ್ರದೇಶದಲ್ಲಿ ತಮ್ಮ ದಿನನಿತ್ಯದ ಉಪಜೀವನಗೊಸ್ಕರ ಮಳೆ ಚಳಿ ಬಿಸಿಲು ಎನ್ನದೆ ಹಗಲಿರಳು ನೂರು 100-200 ರೂಪಾಯಿ ದರದಲ್ಲಿ ನಾಗರಿಕರ ಮನೆ ಬಾಗಿಲಿಗೆ ಹೋಗಿ ಚಿಕಿತ್ಸೆ ಮಾಡುತ್ತಿದ್ದಾರೆ 30 -35 ವರ್ಷಗಳಿಂದ ಸತತವಾಗಿ ಮತ್ತು ಪಾರಂಪರಿಕವಾಗಿ ಹಳ್ಳಿ ಜನರ ಸೇವೆ ಮಾಡುತ್ತಾ ಬಂದಿದ್ದಾರೆ. ವೈದ್ಯರನ್ನು ಆಂಧ್ರಪ್ರದೇಶದ ಮಾದರಿಯಲ್ಲಿ ಪ್ರಮಾಣ ಪತ್ರ ನೀಡಬೇಕು. ನಗರಕ್ಕೆ ಹೋಗಿ ಹೆಚ್ಚು ಹಣ ನೀಡಿ ಚಿಕಿತ್ಸೆ ಪಡೆಯುವ ಸಂದರ್ಭ ತಪ್ಪಿಸಬಹುದು .
2008 -2009ರಲ್ಲಿ ಗ್ರಾಮೀಣ ವೈದ್ಯರು ಇವರಿಗೆ ತಾತ್ಕಾಲಿಕವಾಗಿ ಪರವಾನಿಗೆ ಪ್ರಮಾಣ ಪತ್ರ ಆರೋಗ್ಯ ಇಲಾಖೆಯಿಂದ ನೀಡಲಾಗಿದೆ.
ಮುಖ್ಯವಾಗಿ ಕೋವಿಡ್ -19 ಮಹಾಮಾರಿ ರೋಗ ಹರಡಿರುವ ಸಂದರ್ಭದಲ್ಲಿ ನಗರದಲ್ಲಿರುವ ಖಾಸಗಿ ಆಸ್ಪತ್ರೆಗಳು 2, ರಿಂದ 3 ಲಕ್ಷದ ವರೆಗೆ ಪ್ಯಾಕೇಜುಗಳನ್ನು ಮಾಡಿಕೊಂಡಿದ್ದರು ಆದರೆ 100-200 ನೂರಕ್ಕೆ ದುಡಿಯುವ ಹಳ್ಳಿ ಜನರು ದುಡ್ಡು ಇಲ್ಲದೆ ಅನಿವಾರ್ಯವಾಗಿ ಗ್ರಾಮೀಣ ವೈದ್ಯರಲ್ಲಿ ಅತಿ ಕಡಿಮೆ ದರದಲ್ಲಿ ಚಿಕಿತ್ಸೆಯನ್ನು ನೀಡುತ್ತಾ ಬಂದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಗರದ ಡಾ. ಶರಣ ಪ್ರಕಾಶ್ ಪಾಟೀಲ್ ಅವರ ಮನೆಗೆ ಭೇಟಿ ನೀಡಿ ವೈದ್ಯರ ಬೇಡಿಕೆಗಳನ್ನು ಅವರ ಗಮನಕ್ಕೂ ತಂದು ಮನವರಿಕೆ ಮಾಡಿಕೊಟ್ಟರು.
ಒಂದು ವೇಳೆ ನಮ್ಮ ಬಡ ಜನರ ದೇವರೆಂದರೆ ಗ್ರಾಮೀಣ ವೈದ್ಯರು ಅವರ ಬೇಡಿಕೆಗಳನ್ನು ಬರ್ತಕಂತ ದಿನಗಳಲ್ಲಿ ಈಡೇರದೆ ಹೋದಲ್ಲಿ ಮುಂದೆ ಹಂತ ಹಂತವಾಗಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ವೈ ದ್ಯರು ಉಪಸ್ಥಿತರಿದ್ದರು.



