ಕಲ್ಬುರ್ಗಿ ನಗರದಲ್ಲಿ ಇಂದು ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲೆಯ ರೈತರ ಪಂಪ್ ಸೆಟ್ ಗಳಿಗೆ ಕಡಿತಗೊಳಿಸಿರುವ ವಿದ್ಯುತ್ ಪೂರೈಕೆಯನ್ನು ರದ್ದುಪಡಿಸಿ ದಿನದ ಹೊತ್ತಿನಲ್ಲಿ ಕನಿಷ್ಠ 8 ಗಂಟೆಗಳ ವಿದ್ಯುತ್ ಪೂರೈಕೆಯನ್ನು ಮಾಡುವಂತೆ ಹಾಗೂ ಜಿಲ್ಲೆಯಲ್ಲಿ ಬರಪೀಡಿತ ಪ್ರದೇಶಗಳಲ್ಲಿ ಯುದ್ದೂಪಾದಿಯಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವಂತೆ ಕೋರಿ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಬಿ ಭಗವಾನ್ ರೆಡ್ಡಿ ಮಾತನಾಡಿ ಹಳ್ಳಿಗಳಲ್ಲಿ ಮಳೆಯ ಅಭಾವದಿಂದ ಕೆಲಸಕ್ಕಾಗಿ ಪಟ್ಟಣಕ್ಕೆ ಹೋಗುತ್ತಿದ್ದಾರೆ ಆದಕಾರಣ ಎಲ್ಲಾ ರೈತರ ಸಮಸ್ಯೆಗಳನ್ನು ಬಗೆಹರಿಸಿ ಎಂದು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಬಿ ಭಗವಾನ್ ರೆಡ್ಡಿ , ಜಿಲ್ಲಾ ಕಾರ್ಯದರ್ಶಿ ಮಹೇಶ್ ಎಸ್ಬಿ, ಗುಲ್ಬರ್ಗ ತಾಲೂಕ ಅಧ್ಯಕ್ಷರಾದ ವಿಶ್ವನಾಥ್ ಸಿಂಗೆ ಹಾಗೂ ಸದಸ್ಯರಾದ ನೀಲಕಂಠ ಎಂ ಹುಲಿ, ಭೀಮಶಂಕರ್ ಆಂದೋಲ, ರಮೇಶ್, ಸುರೇಶ್ ಜಾದವ್, ಮಲ್ಲಿಕಾರ್ಜುನ್ ಜಾನೆ, ಸೂರ್ಯಕಾಂತ್ ಬಾಬನ್ ಗೊಳ್, ಲಕ್ಷ್ಮಣ್, ನದೀಂ ಶಾ ಸೇರಿದಂತೆ ಹಲವು ಜನ ರೈತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.



