ಕಲ್ಬುರ್ಗಿ ನಗರದಲ್ಲಿಂದು ವಿಧಾನಸೌಧ ಮುಂಬಾಗದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಕಲ್ಬುರ್ಗಿ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಇಸ್ರೇಲ್ ಹಮಾಸ್ ಸಂಘರ್ಷ ಕೊನೆಗೊಳಿಸಿ ನರಮೇಧ ನಿಲ್ಲಿಸಿ ಯುದ್ಧ ಬೇಡ ಶಾಂತಿ ಬೇಕೆಂದು ಪ್ರತಿಭಟನೆ ಮುಖಾಂತರ ಮನವಿ ಸಲ್ಲಿಸಿ ಮಾತನಾಡಿದ ಕೆ ನೀಲಾ ಅವರು ಇದರಿಂದ ಎರಡು ದೇಶಗಳ ಹಲವು ಸಾವಿರ ನಾಗರಿಕರು ಮಕ್ಕಳು ಕೊಲ್ಲಲ್ಪಡುತ್ತಿದ್ದಾರೆ ನಾಶಕ್ಕೆ ಈ ದಾಳಿಗಳು ಕಾರಣವಾಗುತ್ತಿವೆ.

ವಿಶ್ವಸಂಸ್ಥೆಯ ನಿರ್ಣಯಗಳನ್ನು ನಿರಂತರವಾಗಿ ಉಲ್ಲಂಘಿಸುತ್ತಿರುವ ಇಸ್ರೇಲ್ ದೇಶ ಪ್ಯಾಲಸ್ಥೇನಿಯರ ನೆಲೆಗಳನ್ನು ಬೇಕಾ ಬಿಟ್ಟಿಯಾಗಿ ಆಕ್ರಮಿಸಿಕೊಂಡಿರುವುದು ಮತ್ತು ಪಶ್ಚಿಮ ದಂಡೆಯಲ್ಲಿ ಯಾವುದೇ ವಸಾಹತು ಸ್ಥಾಪನೆಗೆ ಕ್ರಮವಹಿಸುತ್ತಿವೆ.
ಇಸ್ರೇಲ್ ದೇಶ ಪ್ಯಾಲಸ್ಥೇನಿಯರ ದವಾಖಾನೆಯಲ್ಲಿ ಚಿಕಿತ್ಸೆ ಪಡುತ್ತಿರುವ ರೋಗಿಗಳಿಗೆ ಮತ್ತು ಚಿಕ್ಕ ಚಿಕ್ಕ ಮಕ್ಕಳ ಮೇಲೆ ದಾಳಿ ಮಾಡಿರುವುದನ್ನು ಖಂಡಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೆ .ನೀಲಾ, ಡಾ. ಮೀನಾಕ್ಷಿ ಬಾಳಿ, ಶಾಂತಾ ಗಂಟಿ, ಜಾವೇದ್ ಹುಸೇನ್, ಅಲ್ತಾಫ್ ಇನಾಮ್ದಾರ್ ಆರ್.ಕೆ ಹುಡುಗಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.



