ತುಮಕೂರು : ಕೇಂದ್ರದ ಬಿಜೆಪಿ ಸರ್ಕಾರಕ್ಕೆ – ೯ ವರ್ಷ ಪೂರೈಸಿದ ಸಾಧನಾ ಸಮಾವೇಷ ಸೇವೆ. ಸುಶಾಸನ. ಬಡವರ ಕಲ್ಯಾಣದ ಉದ್ದಾರ ಮಾಡಿದ್ದಕ್ಕೆ ೨೦೨೪ ರ. ಲೋಕಸಭಾ ತಯಾರಿ ಜಿಲ್ಲೆಯಿಂದ ಶುರುವಾದ ಪ್ರೇರಣಾ ಸಮಾವೇಷ*
ತುಮಕೂರಿನ ಗಾಜಿನ ಮನೆಯಲ್ಲಿ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ರವಿಶಂಕರ್ ಹೆಬ್ಬಾಕ ಜಿಲ್ಲಾಧ್ಯಕ್ಷರು. ಸದಾನಂದ್ ಜಗದೀಶ್ ರವರು ಆಯೋಜಿಸಲಾಗಿದ್ದ ಸಾಧನಾ ಸಮಾವೇಷವನ್ನು ಇಂದು ಮಧ್ಯಾನ ೨ ಗಂಟೆಗೆ ನಿರ್ಧರಿಸಲಾಗಿತ್ತು.
ಈ ಜಿಲ್ಲಾ ಮಟ್ಟದ ಸಾಧನಾ ಸಮಾವೇಷ ಕಾರ್ಯಕ್ರಮದ ಮುಖ್ಯ ಸಾರಥ್ಯ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪ ನವರು. ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ರವರು
ಮಸಾಲೆ ಜೈರಾಮ್ ಗುಬ್ಬಿ ದಿಲೀಪ್ ಕುಮಾರ್ ಜಿಲ್ಲೆಯ ಹಾಲಿ ಶಾಸಕ ಜ್ಯೋತಿಗಣೇಶ್ ಹಾಗೂ ಸುರೇಶ್ ಗೌಢ ರವರು. ಕೆ ಎನ್ ನವೀನ್. ಎಸ್ ಪಿ. ಮುದ್ದಹನುಮೇಗೌಢ ರವರು. ವೈ ಎಚ್. ಹುಚ್ಚಯ್ಯನವರು. ಮಾಧುಸ್ವಾಮಿ ಬಿ ಸಿ.ನಾಗೇಶ್ ರವರು. ಜಿಎಸ್ ಬಸವರಾಜು ರವರು. ಎಂ ಪಿ. ರೇಣುಕಾಚಾರ್ಯ ಎಂ ಬಿ. ನಂದೀಶ್ ರವರು ಮತ್ತು ಬಜೆಪಿ ಕಾರ್ಯಕರ್ತರು ಅನೇಕ ರಾಜ್ಯದ ಹಾಗೂ ಕೇಂದ್ರದ ಮುಖಂಡರು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬರುವಂತ ಲೋಕಸಭಾ ಚುನಾವಣೆಗೆ ಬಿ ಎಸ್. ಯಡಿಯೂರಪ್ಪ ನವರ ಮುಂದಾಳತ್ವದಲ್ಲಿ ೭ ತಂಡಗಳಾಗಿ ರಾಜ್ಯದಲ್ಲಿ ಪ್ರವಾಸ ಪ್ರಾರಂಭಿಸಲಾಗಿದೆ.
ಮುAದಿನ ಲೋಕಸಭೆಯಲ್ಲಿ ಮತ್ತೊಮ್ಮೆ ಬಿಜೆಪಿ ಕೇಂದ್ರದಲ್ಲಿ ತರಬೇಕು.
ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಢ ರವರು ಮಾತನಾಡುತ್ತಾ ನನ್ನ ಸ್ಪೂರ್ತಿ ಯಡಿಯೂರಪ್ಪನವರು. ಸಂಘಟನೆಗೆ ಸ್ಪೂರ್ತಿ ಯಡಿಯೂರಪ್ಪನವರು.ಈಗ ಪ್ರಣಾಳಿಕೆ ಗೋಷಣೆ ರಾಜ್ಯದ ಜನರಲ್ಲಿ ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ. ಕಾಂಗ್ರೆಸ್ ನ ಫ್ರೀ ಗೋಷಣೆಗಳಿಂದ ಗೊಂದಲಕ್ಕೀಡಾಗಿದ್ದಾರೆ. ಕೇಂದ್ರದ ಅಕ್ಕಿ ಕೊಡಲಾಗದೆ. ವಿನಾಕಾರಣ ಕೇಂದ್ರದ ಮೇಲೆ ಗೂಬೆ ಕೂರಿಸಿ ಮಜಾ ನೋಡ್ತಾ ಇದ್ದಾರೆ. ಬಸ್. ಕರೆಂಟ್. ನಿರುದ್ಯೋಗಿ ಭತ್ಯೆ. ಇತ್ಯಾದಿ ಇವರು ಕೊಡೋದಿಲ್ಲ. ಮುಂದಿನ ಲೋಕಸಭೆಯಲ್ಲಿ ನಮ್ಮ ಬಿಜೆಪಿ ಮತ್ತೆ ಗೆದ್ದೇ ಗೆಲ್ಲುತ್ತೇವೆ ಎಂದು ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬಿ ಮಾತನಾಡಿದರು.
ಗೋವಿಂದ ಕಾರಜೋಳರವರು ಮುಖ್ಯಮಂತ್ರಿ ಸಿದ್ದರಾಮಯ್ಯನಿಗೆ ರಾಜಕೀಯ ಅನುಭವ ಇಲ್ಲ ಭಾಷಣ ಮಾಡುವ ಜೋಷ್ ನಲ್ಲಿ ಕರೆಂಟು ಬಸ್ ೨೦೦೦ ಹಣ ಎಲ್ಲರಿಗೂ ಫ್ರೀ ನಂಗು ಫ್ರೀ – ನಿಂಗು ಫ್ರೀ – ನನ್ನ ಹೆಂಡ್ತಿಗೂ ಫ್ರೀ ! ಅಂತ ಹೇಳಿ ಈಗ ನಾಟಕ ಆಡ್ತಾ ಇದ್ದಾರೆ.? ಸುಳ್ಳು ಹೇಳಿ ಜನರಿಂದ ಓಟು ಪಡೆದಿದ್ದಾರೆ. ಬೆಜವಾಬ್ದಾರಿಯಿಂದ ಹೇಳಿ ಈಗ ಕೇಂದ್ರ ಬಿಜೆಪಿ ಮೇಲೆ ಅನ್ಯಾಯವಾಗಿ ಮಾತನೆಡುತ್ತಿದ್ದೀರಿ ನಿಮಗೆ ನಾಚಿಕೆ ಆಗಬೇಕು ಎಂದು ಕಾರವಾಗಿ ನುಡಿದಿದ್ದಾರೆ.
ಯಡಿಯೂರಪ್ಪ ನವರು ಮಾತನಾಡುತ್ತಾ ಕಾಂಗ್ರೆಸ್ ನಾಯಕರು ನಾಡಿನ ಜನರಿಗೆ ಸುಳ್ಳು ಭರವಸೆ ನೀಡಿ ಜನರಿಗೆ ಮೋಸ ಮಾಡಿ ಅಧಿಕಾರಕ್ಕೆ ಬಂದು ಈ ದಿನ ನಾನಾ ಸಬೂಬುಗಳನ್ನು ಹೇಳಿಕೊಂಡು ಗೋಷಣೆ ಮಾಡಿರುವಂತ ಪ್ರಣಾಳಿಕೆ ನೀಡದೆ. ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿಕೊಂಡು ನಾಡಿನ ಜನರಿಗೆ ದ್ರೋಹ ಎಸಗುತ್ತಿದ್ದಾರೆ. ಇಂತಹ ಪೊಳ್ಳು ಭರವಸೆಗಳ ವಿರುದ್ದ ನಾವು ವಿಧಾನಸಭೆ ಅಧಿವೇಷನದಲ್ಲಿ ನಾವು ಹೋರಾಟ ಮಾಡುತ್ತೇವೆ. ಅಲ್ಲದೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಮೋದಿಯ ಕೈ ಬಲಪಡಿಸುತ್ತೇವೆ ಎಂದರು